ಜೂನ್ ಅಂತ್ಯದೊಳಗೆ ನೀರು ಕಾಮಗಾರಿ ಪೂರೈಸಿ: ಕಾಗೋಡು
ಜೋಗ್ಫಾಲ್ಸ್: ಅಣೆಕಟ್ಟೆಯಿಂದ ಜೂನ್ ಅಂತ್ಯದೊಳಗಾಗಿ ಸಾಗರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಸಮರೋಪಾದಿಯಲ್ಲಿ ಕಾಮಗಾರಿ ನಿರ್ವಹಿಸಲು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಆದೇಶಿಸಿದರು.
ಇಲ್ಲಿಗೆ ಸಮೀಪದ ಚೈನಾ ಗೇಟಿನ ಕಾರ್ಗಲ್ ಅಣೆಕಟ್ಟೆಯಿಂದ ಸಾಗರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯೋಜನಾ ಘಟಕದ ಕಾಮಗಾರಿ ಸ್ಥಳಕ್ಕೆ ದಿಡೀರನೇ ಭೇಟಿ ನೀಡಿದ ಅವರು ಈ ಸೂಚನೆ ನೀಡಿದರು.
28 ಗ್ರಾಮಕ್ಕೆ ನೀರು: 15 ದಶಲಕ್ಷ ಲೀಟರ್ ಕುಡಿಯುವ ನೀರು ಪ್ರತಿನಿತ್ಯ ಈ ಯೋಜನಾ ಘಟಕದಿಂದ ಸಾಗರ ಪಟ್ಟಣ ಮತ್ತು ಸುತ್ತಮುತ್ತಲಿನ 28 ಗ್ರಾಮಗಳಿಗೆ ಪೂರೈಸುವ ಯೋಜನೆ ಕೈಗೊಳ್ಳಲಾಗಿದೆ. ರು. 55 ಕೋಟಿ ವೆಚ್ಚದಲ್ಲಿ ಕಾಮಗಾರಿ ಶೇ. 60 ಪ್ರಗತಿಯಲ್ಲಿದ್ದು, ಹೆಚ್ಚುವರಿಯಾಗಿ ರು. 25 ಕೋಟಿ ವೆಚ್ಚದಲ್ಲಿ 28 ಗ್ರಾಮಗಳ 81 ಕಿಮೀ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಶುದ್ಧೀಕರಣ ಘಟಕ: ಸಾಗರ ಪಟ್ಟಣಕ್ಕೆ ನೀರು ಪೂರೈಸಲು ವರದಹಳ್ಳಿ ರಸ್ತೆಯಲ್ಲಿ ನೀರು ಶುದ್ಧೀಕರಣ ಘಟಕದ ಕಾಮಗಾರಿ ನಡೆಯುತ್ತಿದ್ದು, ಸುತ್ತಮುತ್ತಲ 28 ಗ್ರಾಮಗಳಿಗೆ ನೀರು ಪೂರೈಸಲು ಶದ್ಧೀಕರಣ ಘಟಕವನ್ನು ತಾಳುಗುಪ್ಪ ಸಮೀಪದ ಚೂರಿಕಟ್ಟೆಯಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಮುಂದಿನ 20 ವರ್ಷಗಳಲ್ಲಿ ಏರಲಿರುವ ಜನಸಂಖ್ಯೆಗೆ ಅನುಗುಣವಾಗಿ 1.20 ಲಕ್ಷ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವ ಗುರಿ ಹೊಂದಲಾಗಿದೆ ಎಂದು ವಿಧಾನಸಭಾಧ್ಯಕ್ಷರು ತಿಳಿಸಿದರು.
ಸಾಗರ ಎಪಿಎಂಸಿ ಅಧ್ಯಕ್ಷ ಕೆ. ಹೊಳೆಯಪ್ಪ, ಜಲಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಪಪಂ ಕಂದಾಯ ಅಧಿಕಾರಿ ನೀಲ ಲೋಚನ ಪ್ರಭು, ಸಾಗರ ವಲಯ ಅರಣ್ಯಾಧಿಕಾರಿ ಸಿ.ಎಂ. ಗಣಪತಿ, ಕಾರ್ಗಲ್ ವಲಯದ ಸಹಾಯಕ ಅರಣ್ಯಾಧಿಕಾರಿ ರಾಮಚಂದ್ರಪ್ಪ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

