ಶಿವಮೊಗ್ಗ

ಮಾರುಕಟ್ಟೆಯಲ್ಲಿ ತರಕಾರಿ ಚಿತ್ತಾರ

Published On :

ಶಿವಮೊಗ್ಗ: ಪ್ರತಿದಿನ ಬಗೆಬಗೆಯ ತರಕಾರಿ ರಾಶಿಗಳಿಂದ ಕಂಗೊಳಿಸುವ ಇಲ್ಲಿನ ತರಕಾರಿ ಮಾರುಕಟ್ಟೆ ಶನಿವಾರ ಮಟ್ಟಿಗೆ ತನ್ನ ಚಿತ್ರಣವನ್ನೇ ಬದಲಿಸಿತ್ತು. ಅಲ್ಲಿ ರಂಗೋಲಿಯ ಚಿತ್ತಾರಗಳು ಮೂಡಿದ್ದವು. ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ಮುಂಜಾನೆ ತರಕಾರಿ ವರ್ತಕರ ಸಂಘದಿಂದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವೈಕುಂಟ ಏಕಾದಶಿ ಹಾಗೂ ಮಕರ ಸಂಕ್ರಾಂತಿ ಪ್ರಯುಕ್ತ ಈ ಸ್ಪರ್ಧೆಯನ್ನು ನಡೆಸಲಾಗಿತ್ತು. ಶಾಸಕ ಕೆ.ಬಿ.ಪ್ರಸನ್ನಕುಮಾರ ಭೇಟಿ ನೀಡಿ ಸ್ಫರ್ಧಾಳುಗಳಿಗೆ ಶುಭ ಹಾರೈಸಿದರು. ವರ್ತಕರ ಸಂಘದ ಅಧ್ಯಕ್ಷರಾದ ಎನ್.ರಮೇಶ್, ಕಾರ್ಯದರ್ಶಿ ನಾಗೇಶ್ ಹಾಗೂ ಸದಸ್ಯರಾದ ಕಿರಣ್, ಗಜೇಂದ್ರ, ರಂಗನಾಥ, ಯೋಗಣ್ಣ, ಸೋಮು, ದಿನೇಶ್ ಇನ್ನು ಹಲವಾರು ಸದಸ್ಯರು ಹಾಗೂ ತರಕಾರಿ ವ್ಯಾಪಾರಸ್ಥರು ಹಾಜರಿದ್ದರು. ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ತಮ್ಮ ತರಕಾರಿಯಲ್ಲಿ ತಮ್ಮ ಕೈಚಳಕವನ್ನು ಮೆರೆದರು.
ತರಬೇತಿ ಕಾರ್ಯಾಗಾರ
ತೀರ್ಥಹಳ್ಳಿ: ಇಲ್ಲಿನ ತುಂಗಾ ವಿದ್ಯಾವರ್ಧಕ ಸಂಘ, ಕುವೆಂಪು ವಿಶ್ವವಿದ್ಯಾಲಯ ಖಾಸಗಿ ಕಾಲೇಜು ಪ್ರಾಂಶುಪಾಲರ ವೇದಿಕೆ ಆಶ್ರಯದಲ್ಲಿ ಖಾಸಗಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಆಡಳಿತಾತ್ಮಕ ಸಿಬ್ಬಂದಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು. 30 ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿವರ್ಗ ಭಾಗವಹಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ವಿವೇಕಾನಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತುಂಗಾ ಮಹಾವಿದ್ಯಾಲಯ ಪ್ರಾಂಶುಪಾಲ ಡಿ.ಎಸ್. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರ ವೇದಿಕೆ ಅಧ್ಯಕ್ಷ ಪ್ರೊ.ಸಜ್ಜನ ಶೆಟ್ಟರ್, ಕಾರ್ಯದರ್ಶಿ ಪ್ರೊ. ಬಿ.ಸಿ. ಶಶಿಧರ್, ತುಂಗಾ ಮಹಾವಿದ್ಯಾಲಯದ ಅಧ್ಯಕ್ಷ ಕೌಲಾನಿ ಧರ್ಮಯ್ಯ ವೇದಿಕೆಯಲ್ಲಿದ್ದರು. ಚಿಕ್ಕಮಗಳೂರು, ದಾವಣಗೆರೆ, ಹರಪನಹಳ್ಳಿ, ಶಿರಾಳಕೊಪ್ಪ ಮುಂತಾದೆಡೆಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಸಂಸ್ಥೆಗೆ ಆಯ್ಕೆ
ತೀರ್ಥಹಳ್ಳಿ:  ಮಲೆನಾಡು ವಿಶ್ವಕರ್ಮ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷರಾಗಿ ಟಿ.ಜಿ.ವಿಶ್ವೇಶ್ವರ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂತೆಹಕ್ಕಲು ಎಂ.ಪಿ.ಕುಮಾರ್ ಉಪಾಧ್ಯಕ್ಷ, ಸದಸ್ಯರಗಿ ಕೆ.ನಾಗರಾಜ್, ಎಲ್.ಶ್ರೀಧರ್, ಎಚ್.ಕೆ. ಯೋಗೇಂದ್ರ, ಕೆ.ದಿನೇಶ್, ಎ.ಎಚ್ ಅಶೋಕ, ಶಿವಾನಂದ, ಭಾರತಿ ಮೌನೇಶ್, ಎಚ್.ಎಂ. ಮಂಜಪ್ಪಾಚಾರ್, ಪುಷ್ಪಾ ನಾಗೇಶ್, ಶೋಭಾ ಪ್ರಶಾಂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.