ಶಿವಮೊಗ್ಗ

ಅಡಕೆ ನಿಷೇಧ ವಿವಾದ: ಸುಪ್ರೀಂಗೆ ಮಾಹಿತಿ ನೀಡಲು ಮನವಿ

Published On :

ಶಿವಮೊಗ್ಗ: ಕೇಂದ್ರ ಸರ್ಕಾರವು ಅಡಕೆ ನಿಷೇಧ ವಿವಾದವನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಕೋಟ್ಯಂತರ ಜನರ ಜೀವನದ ಪ್ರಶ್ನೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎಸ್. ಸುಂದರೇಶ್ ಮನವಿ ಮಾಡಿದ್ದಾರೆ.
 ನಗರದಲ್ಲಿ ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೆ ಮನವಿ ಸಲ್ಲಿಸಿರುವ ಅವರು,  ಈ ಕಾರಣದಿಂದ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಅಡಕೆಯು ಹಾನಿಕಾರಕ ಪದಾರ್ಥವೆಂಬ ಅಂಶವನ್ನು ಕೈಬಿಡಲು ಕೇಂದ್ರ ಸಚಿವ ಸಂಪುಟ ತೀರ್ಮಾನ ಕೈಗೊಳ್ಳಬೇಕು. ಈ ವಿಚಾರವನ್ನು ಸುಪ್ರೀಂಕೋರ್ಟ್ಗೆ ಮನದಟ್ಟು ಮಾಡಿಕೊಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಅದೇ ರೀತಿ ರೈತರಲ್ಲಿ ಎದ್ದಿರುವ ಅನುಮಾನಕ್ಕೆ ಕೂಡಲೇ ತೆರೆ ಎಳೆಯಬೇಕು. ಇಲ್ಲವಾದಲ್ಲಿ ಇದರ ಲಾಭವನ್ನು ಬೇರೆಬೇರೆ ರಾಜಕೀಯ ಪಕ್ಷಗಳು ಇಲ್ಲಸಲ್ಲದ ಸುದ್ದಿ ಹೆಚ್ಚಿಸಿ ರೈತರ ಜೀವಕ್ಕೆ ಅಪಾಯ ತರುವ ಸಂಭವ ಹೆಚ್ಚಾಗಿದೆ ಎಂದಿದ್ದಾರೆ.
 ಅಡಕೆ ನಿಷೇಧ ವಿವಾದದಿಂದ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ರೈತರ ನೆಮ್ಮದಿಯೇ ಹಾಳಾಗಿದೆ. ದೇಶದ 13 ರಾಜ್ಯಗಳಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಅಡಕೆ ಬೆಳೆಯುತ್ತಿದ್ದು, ಇದರ ಮೇಲೆ ಅವಲಂಬಿತರಾಗಿರುವ ರೈತರು ಕೋಟ್ಯಂತರ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ಸಾರಿಗೆಯವರು, ಹವಾಮಾನ ಏರುಪೇರು ಇತ್ಯಾದಿ ಒಂದಲ್ಲಾ ಒಂದು ಸಮಸ್ಯೆಯಿಂದ ರೈತರು ಬಳಲುತ್ತಿದ್ದಾರೆ ಎಂದಿರುವ ಅವರು, ರೈತರು ನೆಮ್ಮದಿಯ ಜೀವನ ನಡೆಸಲು ಸರಿಯಾದ ಮಾಹಿತಿಯನ್ನು ಕೇಂದ್ರ ಸರ್ಕಾರ ಕೊಡಬೇಕು ಎಂದು ಕೋರದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.