ಶಿವಮೊಗ್ಗ

ಅಡಕೆ ನಿಷೇಧ ತೀರ್ಪುಗೆ ಕಾಯದೇ ಹೋರಾಟಕ್ಕೆ ಸಜ್ಜಾಗಿ: ಜಯಂತ್

Published On :

ಕ.ಪ್ರ.ವಾರ್ತೆ   ತ್ಯಾಗರ್ತಿ   ಜ.15
ಅಡಕೆ ಆರೋಗ್ಯಕ್ಕೆ ಹಾನಿಕರ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಸಲ್ಲಿಸಿದ ವರದಿಯನ್ನು ಆಧರಿಸಿ ಸುಪ್ರೀಂಕೋರ್ಟ್ ಬೆಳೆಗಾರರ ವಿರುದ್ಧ ತೀರ್ಪು ನೀಡಿದರೆ ಬೆಳೆಗಾರರು ಸಂಕಷ್ಟಕ್ಕೀಡಾಗುತ್ತಾರೆ. ಆದ್ದರಿಂದ ಈ ತೀರ್ಪು ಕಾಯದೇ ಗ್ರಾಮ ಪಂಚಾಯಿತಿ, ಹೋಬಳಿ, ತಾಲೂಕು, ಹಾಗೂ ಜಿಲ್ಲಾಮಟ್ಟದಲ್ಲಿ ಉಗ್ರ ಹೋರಾಟಕ್ಕೆ ಸಜ್ಜಾಗಬೇಕೆಂದು ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಕರೆ ನೀಡಿದರು.
ಸಾಗರ ತಾಲೂಕಿನ ನೀಚಡಿ ಗ್ರಾಮದಲ್ಲಿ ಬರೂರು, ನೀಚಡಿ ಭಾಗದ ಅಡಕೆ ಬೆಳೆಗಾರರ ಸಂಘದ ವಿಭಾಗೀಯ ಘಟಕ ಪ್ರಾರಂಭಿಸಿ ಮಾತನಾಡಿದ ಅವರು, ಈ ಬಾರಿ ಅಡಕೆ ಬೆಳೆಗಾರರು ಸಂಕಷ್ಟದಲ್ಲಿರುವುದಕ್ಕೆ ಸರ್ಕಾರ ನೀಡಿದ ಕೊಳೆ ಪರಿಹಾರವೇ ಸಾಕ್ಷಿ. ಈ ಸಂದರ್ಭದಲ್ಲಿ ಗೋರಖ್ ಸಿಂಗ್ ವರದಿ ಅನುಷ್ಠಾನಕ್ಕೆ ತರುವಂತೆ ರಾಜ್ಯದ ಸಂಸದರು ಹಾಗೂ ಶಾಸಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ಕಬ್ಬು ಬೆಳೆಗಾರರಿಗೆ ನೀಡಿದಂತೆ ಅಡಕೆ ಬೆಳೆಗಾರರಿಗೂ ಬಡ್ಡಿ ರಹಿತ ಸಾಲ ನೀಡಿ ಸಂಕಷ್ಟದಲ್ಲಿರುವ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಅಡಕೆ ಬೆಳೆಗಾರ ಸಂಘವು ಅಡಕೆ ಬೆಳೆಗಾರರ ರಕ್ಷಣೆ ಬಯಸುತ್ತದೆ. ಆದರೆ, ಬೆಳೆಗಾರರು ಸಂಘಕ್ಕೆ ಬೆನ್ನೆಲುಬಾಗಿ ಕ್ರಿಯಾಶೀಲರಾಗಿರಬೇಕು. ತಾಲೂಕು ಮಟ್ಟದ ಬೆಳೆಗಾರರ ಸಂಘಕ್ಕೆ ಶಕ್ತಿ ತುಂಬಲು ವಿಭಾಗೀಯ ಘಟಕಗಳು ಹೆಚ್ಚಿನ ಸಂಘಟನೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಸಂಘಗಳ ಮುಖಾಂತರ ಸಂಘಟನೆ ಭದ್ರಗೊಂಡರೆ ಬೆಳೆಗಾರರ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದರು.
ಆಯ್ಕೆ:  ನೀಚಡಿ-ಬರೂರು ಅಡಿಕೆ ಬೆಳೆಗಾರರ ಸಂಘದ ಘಟಕದ ಅಧ್ಯಕ್ಷರಾಗಿ ಎನ.ಟಿ.ಮಹಾಬಲೇಶ್ವರ್, ಉಪಾಧ್ಯಕ್ಷರಾಗಿ ಎಲ್.ಆರ್.ವೀರಪ್ಪ ಗೌಡ ಮತ್ತು ದೀಪಕ್ನ್‌ರಸೀಪುರ, ಪ್ರಧಾನ ಕಾರ್ಯದರ್ಶಿಯಾಗಿ ಎನ.ಪಿ.ಸುಬ್ರಮಣ್ಯ, ಆಯ್ಕೆಯಾದರು.
ಈ ಸಂದರ್ಭ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ಸದಸ್ಯ ಕುಮಾರಸ್ವಾಮಿ ಗೌಡಕೊಪ್ಪ, ಜಗದೀಶ ನೀಚಡಿ, ವಸಂತತ್ನೀಚಡಿ, ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ವ.ಶಂ.ರಾಮಂಚದ್ರ ಭಟ್, ನಿರ್ದೇಶಕರಾದ ಗುರುಪಾದ ಭೀಮನಕೋಣೆ, ಎನ್.ಎಲ್.ರಮೇಶ, ಸ್ಥಳೀಯ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.