ದುಷ್ಟಶಕ್ತಿ ವಿರುದ್ಧ ಎಚ್ಚರಿಕೆ ಅವಶ್ಯ: ಎಸ್ಪಿ
ಕ.ಪ್ರ.ವಾರ್ತೆ ಶಿವಮೊಗ್ಗ ಜ.16
ದಕ್ಷ ಎಸ್.ಐ. ಮಲ್ಲಿಕಾರ್ಜುನ ಬಂಡೆ ಅವರ ಸಾವು ಪೊಲೀಸ್ ಇಲಾಖೆಗೆ ಭರಿಸಲಾರದಷ್ಟು ನಷ್ಟ ಉಂಟುಮಾಡಿದೆ.
ಸಮಾಜಘಾತಕಶಕ್ತಿ ಮಟ್ಟ ಹಾಕುವ ವೇಳೆ ಹುತಾತ್ಮರಾದ ಮಲ್ಲಿಕಾರ್ಜುನ ಬಂಡೆ ಆರಕ್ಷಕ ಇಲಾಖೆಯ ಘನತೆ-ಗೌರವ ಹೆಚ್ಚಿಸಿದ್ದಾರೆ. ಅವರ ವ್ಯಕ್ತಿತ್ವ ಆದರ್ಶಪ್ರಾಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ಡಿಎಆರ್ ಸಭಾಂಗಣದಲ್ಲಿ ಪ್ರಾಂಜಲ ಶಿವಪ್ಪ ನಾಯಕ ಸೇನೆ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಬಂಡೆ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.
ಮುನ್ನೆಚ್ಚರಿಕೆ ಅವಶ್ಯ: ಸಮಾಜದಲ್ಲಿ ದುಷ್ಟಶಕ್ತಿಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲಲ್ಲಿ ಪೊಲೀಸರು ಬಲಿಯಾಗಬೇಕಾಗುತ್ತದೆ. ಇಲಾಖೆ ಮುಂದೆ ಅನೇಕ ಸವಾಲುಗಳಿಗೆ. ಅವುಗಳನ್ನು ಎದುರಿಸಿ ಕಾರ್ಯಾಚರಣೆ ಮಾಡಬೇಕಿದೆ.
ಸೇವೆಯಲ್ಲಿದ್ದಾಗ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಗುಣ ಪ್ರತಿಯೊಬ್ಬರಿಗೂ ಆದರ್ಶವಾಗಿತ್ತು ಎಂದು ಸ್ಮರಿಸಿದರು.
ಸಿಪಿಐ ಜೈರಾಜ್ ಮಾತನಾಡಿ, ಮಲ್ಲಿಕಾರ್ಜುನ ಬಂಡೆ ಅವರದ್ದು ವೀರ ಮರಣ. ಅವರ ವೃತ್ತಿ ಬದುಕು ಸಾರ್ಥಕವಾದಂತೆ ಎಂಬುದಕ್ಕೆ ಗುಲ್ಬರ್ಗದ ಅಧಿಕಾರಿಗೆ ನಾಡಿಗೆ ನಾಡೇ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದು ಸಾಕ್ಷಿಯಾಗಿದೆ ಎಂದರು.
ಸಭೆಯಲ್ಲಿ ಉಪ ಪೊಲೀಸ್ ಅಧೀಕ್ಷಕ ಬಿ.ದಯಾಳು, ಶಿವಪ್ಪನಾಯಕ ಸೇನೆ ಜಿಲ್ಲಾಧ್ಯಕ್ಷ ಚನ್ನಮಲ್ಲಪ್ಪ, ಸಂಚಾಲಕ ಭದ್ರಾವತಿ ವಾಸು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

