ಶಿವಮೊಗ್ಗ

90 ಲಕ್ಷ ಜನರಿಗೆ ದೃಷ್ಟಿ ನೀಡುವ ಗುರಿ

Published On :

ಭದ್ರಾವತಿ: ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಸಂಸ್ಥೆಯು 208 ರಾಷ್ಟ್ರಗಳಲ್ಲಿ 66 ಸಾವಿರ ಕ್ಲಬ್ ಹಾಗೂ 13.5 ಲಕ್ಷ ಸದಸ್ಯರನ್ನು ಹೊಂದಿದ್ದು, 97 ವರ್ಷಗಳಿಂದ ಸೇವಾ ಕಾರ್ಯದಲ್ಲಿ ನಿರತವಾಗಿದೆ ಎಂದು ಲಯನ್ಸ್ ಜಿಲ್ಲೆ 317ಸಿ ಜಿಲ್ಲಾ ಗವರ್ನರ್ ಎಚ್.ಎನ್. ಶಿವಕುಮಾರ್ ತಿಳಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೇವೆ ಮತ್ತು ಸೌಹಾರ್ದತೆಯ ಉದ್ದೇಶದಿಂದ ಸ್ಥಾಪಿತವಾದ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯು ಪ್ರತಿವರ್ಷ ಸರಾಸರಿ 1.6 ಕೋಟಿ ಸೇವಾಕಾರ್ಯಕ್ಕೆ ವ್ಯಯಿಸುತ್ತಿದೆ. ಅಂಧತ್ವ ನಿವಾರಣೆ ಸಂಸ್ಥೆಯ ವಿಶೇಷ ಸೇವಾ ಕಾರ್ಯವಾಗಿದ್ದು, ಈ ಬಾರಿ 90 ಲಕ್ಷ ಜನರಿಗೆ ದೃಷ್ಟಿ ನೀಡುವ ಗುರಿ ಹೊಂದಲಾಗಿದೆ. ಭಯೋತ್ಪಾದನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ಶಾಂತಿ ಪ್ರತಿಪಾದಿಸಲು ಶಾಲಾ ಮಕ್ಕಳಿಗೆ ಶಾಂತಿ ಭಿತ್ತಿಪತ್ರ ಬರೆಯುವ ಕಾರ್ಯಕ್ರಮ ಹಮ್ಮಿಕೊಳ್ಳಾಗಿದ್ದು, ಇದರಲ್ಲಿ 100 ರಾಷ್ಟ್ರಗಳ ನಾಲ್ಕು ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಅಮೆರಿಕಾ ದೇಶವು ಈ ಪರಿಕಲ್ಪನೆ ಕುರಿತ ಅಂಚೆ ಚೀಟಿಯನ್ನು ಸಹ ಹೊರತಂದಿದೆ ಎಂದು ತಿಳಿಸಿದರು.ಲಯನ್ಸ್ ಕ್ಲಬ್ ಅಧ್ಯಕ್ಷ ಎಲ್.ದೇವರಾಜ್, ಕಾರ್ಯದರ್ಶಿ ಸಿ.ಕೆ.ಮಂಜುನಾಥ್, ಖಜಾಂಚಿ ಶೋಭ್ಯಾನಾಯ್ಕ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.