ವಿಲೀನದಿಂದ ಬಿಜೆಪಿ-ಕೆಜೆಪಿ ಸರ್ಕಾರ ಬಂದಂಥ ಸಂಭ್ರಮ: ಈಶ್ವರಪ್ಪ
ಶಿವಮೊಗ್ಗ: ಇದುವರೆಗೆ ಪಕ್ಷಕ್ಕೆ ಶನಿ ಕಾಟ ಇತ್ತು. ಅದೀಗ ನಿವಾರಣೆಯಾಗಿದೆ. ಪಕ್ಷಕ್ಕೆ ಹಿಡಿದಿದ್ದ ದರಿದ್ರ ತೊಲಗಿದೆ...
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೆಜೆಪಿ ಪಕ್ಷವು ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದು ಹೀಗೆ.
ಕೆಜೆಪಿ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಿಂದ ಬಿಜೆಪಿ ಸರ್ಕಾರ ಜಾರಿಗೆ ಬಂದಿದೆಯೆಂಬಷ್ಟು ಸಂತೋಷ ಆಗಿದೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ಬಿಟ್ಟಾಗ ಕಾಂಗ್ರೆಸ್ ಪಕ್ಷಕ್ಕೆ ಲಾಟರಿ ಹೊಡೆದಷ್ಟು ಸಂತೋಷವಾಗಿತ್ತು. ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದ ಸಿದ್ದರಾಮಯ್ಯ ಅವರು ಈಗ ಯಾರ ಫೋಟೋ ಹಾಕಿಕೊಳ್ತಾರೋ ಗೊತ್ತಿಲ್ಲ. ಅವರು ಯಡಿಯೂರಪ್ಪ ಅವರ ಫೋಟೋನೇ ಹಾಕಿಕೊಳ್ಳಬೇಕು ಎಂದರು.
ನಾವು ಎಲ್ಲೇ ಹೋದರೂ ಕಾರ್ಯಕರ್ತರು ಯಾವಾಗ ಒಂದಾಗುತ್ತೀರಿ ಅಂತ ಕೇಳುತ್ತಿದ್ದರು. ಆದರೆ, ಬೆಕ್ಕಿಗೆ ಗಂಟೆ ಕಟ್ಟೋದು ಯಾರು ಎಂಬ ಪ್ರಶ್ನೆ ನಮ್ಮ ಮುಂದೆ ಇತ್ತು. ಪಕ್ಷದ ಹಿರಿಯ ಮುಖಂಡರೊಬ್ಬರ ಮನೆಯಲ್ಲಿ (ಡಿ.ಎಚ್. ಶಂಕರಮೂರ್ತಿ) ಸೇರಿ ಚರ್ಚಿಸಿದ್ದೇ ಸಿಕ್ಕ ದೊಡ್ಡ ತಿರುವು. ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಿದ್ದರೆ ಅಥವಾ ಕಾಂಗ್ರೆಸ್-ಕೆಜೆಪಿ ಸರ್ಕಾರ ರಚನೆಯಾಗಿದ್ದರೆ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗುತ್ತಿದ್ದರೋ, ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ ಅವರು, ಯಡಿಯೂರಪ್ಪ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಅನಂತಕುಮಾರ್ ಅವರ ಜತೆ ಸಚಿವರಾಗಬೇಕು ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಯಡಿಯೂರಪ್ಪ ಅವರ ಸೇರ್ಪಡೆಯು ಎದುರಾಳಿಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಇನ್ನುಮುಂದೆ ನಿಮ್ಮ ಆಟ ನಡೆಯೋಲ್ಲ ಎಂದು ಅವರಿಗೆ ಗೊತ್ತಾಗಿದೆ ಎಂದರು. ಕೆಜೆಪಿ ಅಧ್ಯಕ್ಷರಾಗಿದ್ದ ಜ್ಯೋತಿಪ್ರಕಾಶ್, ಪಕ್ಷದ ಕೆಲವು ಮುಖಂಡರು ಎಂಜಿನ್ ಬೇಕು, ಬೋಗಿ ಬೇಡ ಎನ್ನುತ್ತಿದ್ದಾರೆ. ಬೋಗಿ ಇದ್ದರೆ ಅದಕ್ಕೆ ರೈಲು ಎನ್ನುತ್ತಾರೆ, ಇಲ್ಲದಿದ್ದರೆ ಬರೀ ಎಂಜಿನ್ ಎನ್ನುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

