ನೆಮ್ಮದಿ ಬದುಕಿಗೆ ವಚನವೇ ಸೂತ್ರ: ಸಿದ್ದಪಾದ ಸ್ವಾಮೀಜಿ
ಭದ್ರಾವತಿ: ಅನ್ನ, ನೀರಿನಷ್ಟೇ ಒಳ್ಳೆಯ ಮಾತುಗಳು ಸಮಾಜದಲ್ಲಿ ಪ್ರತಿಯೊಬ್ಬರಿಗೆ ಅವಶ್ಯಕ. ಸಂಕೀರ್ಣವಾದ ಇಂದಿನ ವ್ಯವಸ್ಥೆಯಲ್ಲಿ ಉತ್ತಮ ಬದುಕಿಗೆ ಬಸವಾದಿ ಶಿವಶರಣರು ತಮ್ಮ ವಚನಗಳ ಮೂಲಕ ನೆಮ್ಮದಿ ಜೀವನ ನಡೆಸುವ ಸೂತ್ರ ನೀಡಿದ್ದಾರೆಂದು ಹೊನ್ನಾಳಿ ಹಿರೇಕಲ್ಮಠದ ಕಿರಿಯ ಶ್ರೀ ಸಿದ್ದಪಾದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ವಿಶ್ವಗುರು ಬಸವೇಶ್ವರ ಸಮಿತಿ ಏರ್ಪಡಿಸಿದ್ದ ಬಸವ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡು ಮಾತನಾಡಿದರು.
ಸಮಾರಂಭ ಉದ್ಘಾಟಿಸಿದ ಮಾಜಿ ಶಾಸಕ ಸಂಗಮೇಶ್ವರ್ ಮಾತನಾಡಿ, ಸ್ಥಳೀಯ ಸಮಸ್ಯೆಗಳನ್ನು ಸದನದ ಮುಂದೆ ಮಂಡಿಸಿ ಅದಕ್ಕೆ ಪರಿಹಾರ ಹುಡುಕುವ ಸಂಬಂಧ ಜನತೆ ಚುನಾವಣೆಯಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಅಂಥ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಪಟ್ಟಣದ ಮೈಸೂರು ಕಾಗದ ಕಾರ್ಖಾನೆಯ ಗಂಭೀರ ಸಮಸ್ಯೆಯನ್ನು ಚರ್ಚಿಸದಿರುವುದು ವಿಷಾದನೀಯ ಎಂದರು.
ನ್ಯಾಷನಲ್ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಇಂದುಕುಮಾರ್, ಮೈಸೂರು ಕಾಗದ ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ಬಿ.ಎನ್.ಶ್ರೀನಿವಾಸ್, ಮುಖ್ಯ ಕಾರ್ಯಚಟುವಟಿಕೆಗಳ ನಿರ್ವಹಣಾಧಿಕಾರಿ ಬಿ.ಪಿ.ರವೀಂದ್ರನಾಥ್, ಮುಖ್ಯ ಹಣಕಾಸು ಅಧಿಕಾರಿ ಮತ್ತು ವಿ.ಎಸ್.ಮಲಗನ್ ಮುಖ್ಯ ಅತಿಥಿಗಳಾಗಿದ್ದರು. ಗಂಗಾಂಬಿಕೆ ಬಸವರಾಜ್ ವಿಶೇಷ ಉಪನ್ಯಾಸ ನೀಡಿದರು. ಸಮಿತಿ ಗೌರವಾಧ್ಯಕ್ಷ ಸಿ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ದೇವಿಕಾ ಪ್ರಾರ್ಥಿಸಿ, ಸಂಪತ್ಕುಮಾರ್ ಸ್ವಾಗತಿಸಿ, ಅಶೋಕ್ ಪಾಟೀಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಿ.ಎಸ್.ಪುಟ್ಟಸ್ವಾಮಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

