ಶಿವಮೊಗ್ಗ

ಸೊರಬ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಸಜ್ಜು

Published On :

ಸೊರಬ:  ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಜು.9ರಂದು ಬೆಳಗ್ಗೆ 9 ಗಂಟೆಗೆ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನವು ಪಂಡಿತ್ ಬಿ.ನಾರಾಯಣಪ್ಪ ವೇದಿಕೆಯಲ್ಲಿ ಜರುಗಲಿದೆ.
ಸಮ್ಮೇಳನಾಧ್ಯಕ್ಷ ಶಂಕರಘಟ್ಟ ಕುವೆಂಪು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಸಣ್ಣರಾಮಪ್ಪ ನೇತೃತ್ವದಲ್ಲಿ ರಂಗನಾಥಸ್ವಾಮಿ ದೇವಸ್ಥಾನದಿಂದ ಕುಪ್ಪಗಡ್ಡೆ ಮರಿಯಪ್ಪ ಮಹಾದ್ವಾರದ ಮೂಲಕ ಸಮ್ಮೇಳನದ ಸ್ಥಳದವರೆಗೆ ಕಲಾ ತಂಡಗಳೊಂದಿಗೆ ತಾಯಿ ಭುವನೇಶ್ವರಿಯ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 09.30 ಗಂಟೆಗೆ ಶಾಸಕ ಮಧು ಬಂಗಾರಪ್ಪ ಧ್ವಜಾರೋಹಣ, ತಹಸೀಲ್ದಾರ್ ಟಿ.ಕೆ.ತಿಪ್ಪೂರಾವ್ ನಾಡಧ್ವಜಾರೋಹಣ,  ಪರಿಷತ್ತಿನ ಧ್ವಜಾರೋಹಣವನ್ನು ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಪಾಣಿ ನೆರವೇರಿಸುವರು.
ಕನ್ನಡ ಭನನದ ಶಂಕುಸ್ಥಾಪನೆಯನ್ನು ಶಾಸಕ ಮಧು ನೆರವೇರಿಸಿದ ಬಳಿಕ, ಬೆಳಗ್ಗೆ 10.30 ರಿಂದ 11 ಗಂಟೆವರೆಗೆ ಉದ್ಘಾಟನೆ ಕಾರ್ಯಕ್ರಮ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಉದ್ಘಾಟಿಸುತ್ತಾರೆ. ತಾ.ಪಂ. ಅಧ್ಯಕ್ಷ ಎಚ್.ಎಂ. ಬಸವಲಿಂಗಪ್ಪ ಪುಸ್ತಕ ಮಳಿಗೆ ಉದ್ಘಾಟಿಸುವರು. ಬೆಳಗ್ಗೆ 11 ರಿಂದ 11.15 ಗಂಟೆವರೆಗೆ ಗಾನ ಲಹರಿ, ಬಳಿಕ ವಿಚಾರಗೋಷ್ಠಿ ಇರುತ್ತದೆ. ಸಮ್ಮೇಳನಾಧ್ಯಕ್ಷರ ಸಾಹಿತ್ಯ ಪರಿಚಯ ಕುರಿತು ನಡೆಯುವ ಗೋಷ್ಟಿಯಲ್ಲಿ ಡಾ.ಮಲ್ಲಿಕಾರ್ಜುನ ಕಲರವಹಳ್ಳಿ, ಡಾ.ಅಣ್ಣಪ್ಪ ಮಳೀಮಠ, ಡಾ.ಶಿವಾನಂದ ಕೆಳಗಿನಮನೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮ, 2ನೇ ಗೋಷ್ಠಿ ಶಿಕ್ಷಣ ಮಾಧ್ಯಮ - ಶಾಲೆ ವಿಷಯ ಕುರಿತು ಮಧ್ಯಾಹ್ನ 12.45 ರಿಂದ 1.40 ರವರೆಗೆ ನಡೆಯಲಿದೆ. ಎಚ್.ಬಿ. ಪಂಚಾಕ್ಷರಯ್ಯ, ಸಾ.ಕೆ. ಸುರೇಶ್, ಕೃಷ್ಣಾನಂದ್ ಪಾಲ್ಗೊಳ್ಳುತ್ತಾರೆ.
3ನೇ ಗೋಷ್ಠಿ ರೈತರನ್ನು ಕಾಡುತ್ತಿರುವ ಬಗರ್‌ಹುಕುಂ ಸಮಸ್ಯೆ ಕುರಿತಾಗಿ ಮಧ್ಯಾಹ್ನ 2 ರಿಂದ 3.10 ರವರೆಗೆ, ನಡೆಯಲಿದೆ. ರೈತ ಮುಖಂಡ ನಿಸರಾಣಿ ಮಂಜುನಾಥಗೌಡ, ಸಾಮಾಜಿಕ ಹೋರಾಟಗಾರ ಶಿವಾನಂದ ಕುಗ್ವೆ, ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ, ರೈತ ಮಹಿಳೆ ರೇಣುಕಮ್ಮ ಕಪ್ಪಗಳಲೆ ಭಾಗವಹಿಸುತ್ತಾರೆ.
ಕವಿಗೋಷ್ಠಿ ಮಧ್ಯಾಹ್ನ 3.30 ರಿಂದ 4.45 ಗಂಟೆವರೆಗೆ, 4.45 ರಿಂದ 5 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮ. ನಂತರ ನಡೆವ ಸಮಾರೋಪದಲ್ಲಿ ಭದ್ರಾವತಿ ಆಕಾಶವಾಣಿ ನಿರ್ದೇಶಕ ಕವಿ ಜಿ.ಕೆ. ರವೀಂದ್ರಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ತಾಲೂಕು ಕಸಾಪ ಮಾಜಿ ಅಧ್ಯಕ್ಷರು, ತಾಲೂಕು ಗಣ್ಯ ಪ್ರಮುಖರು ಉಪಸ್ಥಿತರಿರುವರು.  ತಾಲೂಕು ಸಾಹಿತ್ಯ ಪರಿಷತ್ ಸಾಧಕರ ಸನ್ಮಾನ ಸಮಾರಂಭ, ಸಮ್ಮೇಳನಾಧ್ಯಕ್ಷರ ನುಡಿ ಭಾಷಣವೂ ನಡೆಯಲಿದೆ. ಸಂಜೆ 6.30 ರಿಂದ ದೂರದರ್ಶನ ಕಲಾವಿದೆ ಇಂದುಮತಿ ಸಾಲೀಮಠ ಅವರಿಂದ ಹಾಸ್ಯ ಕಾರ್ಯಕ್ರಮ ಇರುತ್ತದೆ.
ಸಮ್ಮೇಳನಾಧ್ಯಕ್ಷರಾಗಿ
ಡಾ.ಸಣ್ಣರಾಮಪ್ಪ
ಸೊರಬ:  ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜು.9ರಂದು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಜರುಗಲಿದೆ ಎಂದು ಸಾಹಿತ್ಯ ಪರಿಷತ್ತು ಸೊರಬ ಘಟಕದ ಅಧ್ಯಕ್ಷ ಶಿವಾನಂದ ಪಾಣಿ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು.
ಸಮ್ಮೇಳನಾಧ್ಯಕ್ಷರಾಗಿ ಕುವೆಂಪು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಸಣ್ಣರಾಮಪ್ಪ ಆಯ್ಕೆ ಆಗಿದ್ದಾರೆ. ಸಮ್ಮೇಳನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ.ವೀರಭದ್ರಪ್ಪ ಉದ್ಘಾಟಿಸಲಿದ್ದಾರೆ.  ಅಧ್ಯಕ್ಷತೆಯನ್ನು ಶಾಸಕ ಎಸ್. ಮಧು ಬಂಗಾರಪ್ಪ ವಹಿಸಲಿದ್ದಾರೆ. ಇದೇ ದಿನ ಕನ್ನಡ ಭವನಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಕೂಡಾ ಹಮ್ಮಿಕೊಳ್ಳಲಾಗಿದೆ. ವಿವಿಧ ಗೋಷ್ಠಿಗಳು ನಡೆಯಲಿವೆ. ಸಮ್ಮೇಳನಕ್ಕೆ ಭಾಗವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರ ನೀಡಲಾಗುವುದು. ಸಮ್ಮೇಳನ ಯಶಸ್ವಿಗೆ ತಾಲೂಕಿನ ಜನತೆಯ ಸಹಕಾರ ಬಯಸಿದರು.
ಕಾರ್ಯಾಧ್ಯಕ್ಷ ಎಸ್.ಆರ್. ಕುಮಾರಸ್ವಾಮಿ, ಪರಿಷತ್ತು ಕಾರ್ಯದರ್ಶಿ ರಾಘವೇಂದ್ರ ಬಾಪಟ್ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.