'ಗಿರಿಜಾ ಒಂದೇ ಕ್ಷೇತ್ರಕ್ಕೆ ಸೀಮಿತ ಸಾಧಕಿಯಲ್ಲ'
ದಾವಣಗೆರೆ: ಅಂಗವೈಕಲ್ಯ, ಒಂಟಿತನದ ಮಧ್ಯೆಯೂ ಹಿರಿಯ ಲೇಖಕಿ ಟಿ. ಗಿರಿಜಾ ಸೇವೆ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂತಹ ಲೇಖಕಿಯ ಕೃತಿಗಳ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರುವ ಕೆಲಸ ಆಗಬೇಕಿದೆ ಎಂದು ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ ತಿಳಿಸಿದರು.
ನಗರದ ಕುವೆಂಪು ರಸ್ತೆಯ ಶ್ರೀ ಶಂಕರ ಮಠದಲ್ಲಿ ಸೋಮವಾರ ವನಿತಾ ಸಾಹಿತ್ಯ ವೇದಿಕೆಯಿಂದ ಹಿರಿಯ ಲೇಖಕಿ, ದಿವಂಗತ ಟಿ. ಗಿರಿಜಾ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿ. ಗಿರಿಜಾ ಕೃತಿಗಳು ಒಂದೇ ಕಡೆ ಸಿಗುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ, ತಾಲೂಕು ಘಟಕಗಳು ಗಮನ ಹರಿಸಬೇಕು. ಕಥೆ, ಕಾದಂಬರಿ, ಹವ್ಯಾಸಿ ನಾಟಕ, ಇತಿಹಾಸ ಸಂಶೋಧನೆ ಹೀಗೆ ಅನೇಕ ಕ್ಷೇತ್ರದಲ್ಲಿ ಗಿರಿಜಕ್ಕ ಸಾಧನೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದಂತೆ ಗಿರಿಜಕ್ಕ ರಚಿಸಿರುವ ಸಂಶೋಧನಾ ಕೃತಿಗಳು ಹಿರಿಯ ಲೇಖಕಿಯ ಅಧ್ಯಯನಶೀಲತೆ, ಬರವಣೆಗೆಯ ಶ್ರದ್ಧೆಗೆ ಸಾಕ್ಷಿ ಎಂದು ಅವರು ಶ್ಲಾಘಿಸಿದರು.
ಹಿರಿಯ ಕಾನೂನು ತಜ್ಞ ಪ್ರೊ. ಎಸ್.ಎಚ್. ಪಟೇಲ್, ಟಿ. ಗಿರಿಜಾ ದೈಹಿಕವಾಗಿ ಭೀಮಬಲ ಹೊಂದಿರದೆ
ಇದ್ದರೂ, ಮಾನಸಿಕವಾಗಿ ಭೀಮಬಲದೊಂದಿಗೆ ಎಲ್ಲಾ ಪ್ರಕಾರದ ಸಾಹಿತ್ಯಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ಇಳಿ ವಯಸ್ಸಿನಲ್ಲೂ ಬ ರೆಯುವ ಅತ್ಯುತ್ಸಾಹ ಹೊಂದಿದ್ದ ಗಿರಿಜಮ್ಮ ಇಂದಿನ ಯುವ ಪೀಳಿಗೆಯ ಸಾಹಿತಿಗಳಿಗೆ ಮಾದರಿಯಾಗಬೇಕು. ಇಂತಹ ಲೇಖಕಿ ತೋರಿದ ಮಾರ್ಗದಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ವನಿತಾ ಸಮಾಜದ ಗೌರವಾಧ್ಯಕ್ಷೆ, ಮಾಜಿ ಸಚಿವ ಡಾ. ನಾಗಮ್ಮ ಕೇಶವಮೂರ್ತಿ, ವನಿತಾ ಸಾಹಿತ್ಯ ವೇದಿಕೆಯು ಟಿ. ಗಿರಿಜಾ ಸಾರಥ್ಯದಲ್ಲಿ ಯುವ ಲೇಖಕಿಯರಿಗೆ ಉತ್ತೇಜನ, ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಾ ಬಂದಿದ್ದು, ಅದು ಮುಂದೆಯೂ ಮುಂದುವರಿಯಲಿದೆ. ನಗರವಾಣಿ ಅಂಕಣಗಾರ್ತಿಯಾಗಿಯೂ ಅನೇಕ ಮಹಿಳಾ ಸಾಧಕಿಯರನ್ನು ಬೆಳಕಿಗೆ ತಂದವರು ಗಿರಿಜಾ ತಮ್ಮ ಸ್ನೇಹಮಯಿ ವ್ಯಕ್ತಿತ್ವದಿಂದಾಗಿ
ಜನಾನುರಾಗಿಯಾಗಿದ್ದು, ಎಲ್ಲರ ಮನದಲ್ಲಿಯೂ ಅಚ್ಚಳಿಯದಂತೆ ಉಳಿದಿರುತ್ತಾರೆ ಎಂದರು. ಹಿರಿಯ ವಿಚಾರವಾದಿ ಪ್ರೊ. ಬಿ.ವಿ. ವೀರಭದ್ರಪ್ಪ, ಸಮಾಜದ ಕಿರುವಾಡಿ ಗಿರಿಜಮ್ಮ, ಎಸ್.ಎಂ. ಮಲ್ಲಮ್ಮ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

