ಕಪ್ಪೆ, ಕತ್ತೆ ಮದ್ವೆ ಆಯ್ತು, ಈಗ ಮಟ್ಟಿ ಬಸವನ ಪ್ರಸ್ತ
ಸೊರಬ: ಮಳೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಉದ್ರಿ ಗ್ರಾಮಸ್ಥರು ಗ್ರಾಮಕ್ಕೆ ಸೇರಿದ ಮಜರೆ ಗ್ರಾಮವಾದ ಎಡಗೊಪ್ಪದಲ್ಲಿನ ಮಟ್ಟಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ನಿಮಿತ್ತ ಉದ್ರಿ ಗ್ರಾಮದಿಂದ ವೀರಭದ್ರ, ಬಸವ ದೇವರ ಉತ್ಸವಮೂರ್ತಿ, ಕಾಯಿಕೋಲು ಸಹಿತ ಪಲ್ಲಕ್ಕಿ ಉತ್ಸವ ಹೊರಡಿಸಿ ಎಡಗೊಪ್ಪ ಗ್ರಾಮದಲ್ಲಿರುವ ಬಸವನಿಗೆ ಪ್ರಸ್ತ ನಡೆಸಿದರು.
ಅನಾದಿ ಕಾಲದ ಪದ್ಧತಿ: ಮಳೆ ಬಾರದಿದ್ದರೆ ಈ ಮಟ್ಟಿ ಬಸವಣ್ಣನಿಗೆ ಪ್ರಸ್ತ ಮಾಡುವ ಪದ್ಧತಿ ಅನಾದಿ ಕಾಲದ್ದು, ಜಾತಿ, ಮತ ಭೇದವಿಲ್ಲದೆ ಗ್ರಾಮಸ್ಥರು ಆಚರಿಸಿಕೊಂಡು ನಡೆಸಿಕೊಂಡು ಬರುತ್ತಿದ್ದು, ರುದ್ರಾಭಿಷೇಕ ಮಾಡುವ ಮೂಲಕ ವರುಣನನ್ನು ಆಹ್ವಾನಿಸುವ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತದೆ ಎಂದು ಗ್ರಾಮದ ಹಿರಿಯ, ಪ್ರಮುಖರಾದ ಬಂಗಾರಸ್ವಾಮಿ ಬಣಕಾರ್ ಆಚರಣೆ ಪ್ರಕ್ರಿಯೆ ಕುರಿತಂತೆ ತಿಳಿಸುತ್ತಾರೆ.
ಹಿರಿಯರಾದ ಧನಂಜಯಪ್ಪ ಮಟ್ಟಿ ಬಸವಣ್ಣನ ಪ್ರಸ್ತದ ದಿನಗಳನ್ನು ನೆನಪಿಸಿಕೊಂಡು, ಗ್ರಾಮದಲ್ಲಿ ಮನೆಮನೆಯಿಂದ ಅಕ್ಕಿ, ಬೇಳೆ, ಹಣ ಸಂಗ್ರಹಿಸಿ ಸಾಮೂಹಿಕ ಅನ್ನದಾಸೋಹ ನಡೆಸಲಾಗುತ್ತದೆ. ಇಲ್ಲಿ ಪೂಜೆ ನಡೆಸಿದ ಬಳಿಕ ಸ್ವಲ್ಪವಾದರೂ ಮಳೆ ಬೀಳದ ನಿದರ್ಶನವಿಲ್ಲ ಎನ್ನುತ್ತಾರೆ. ಆಚರಣೆಯಲ್ಲಿ ಉದ್ರಿ, ಎಡಗೊಪ್ಪ ಗ್ರಾಮಸ್ಥರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

