ಶಿವಮೊಗ್ಗ

ಹೊಸ ರೈಲ್ವೆ ಮಾರ್ಗ ತೀರ್ಥಹಳ್ಳಿ ಮೂಲಕವೇ ಆಗಲಿ

Published On :

ತೀರ್ಥಹಳ್ಳಿ: ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಶಿವಮೊಗ್ಗ-ಶೃಂಗೇರಿ-ಮಂಗಳೂರು ಮಾರ್ಗಕ್ಕೆ ಹೊಸ ಸಮೀಕ್ಷೆ ಮಾಡುವ ಯೋಜನೆ ಸ್ವಾಗತಾರ್ಹ. ಈ ಮಾರ್ಗ ತೀರ್ಥಹಳ್ಳಿಯ ಮೂಲಕವೇ ಆಗಲಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಮಲೆನಾಡು ಸಂಘರ್ಷ ಸಮಿತಿಯ ಪದಾಧಿಕಾರಿ ನೆಂಪೆ ದೇವರಾಜ್ ಒತ್ತಾಯಿಸಿದ್ದಾರೆ.
ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಾಲೂಕು ಶ್ರೀಮಂತವಾಗಿದ್ದರೂ ಆರ್ಥಿಕ ಪ್ರಗತಿ ಮಾತ್ರ ಈ ತಾಲೂಕಿನಲ್ಲಿ ಸಾಧ್ಯವಾಗಿಲ್ಲ. ಯಾವುದೇ ಅಭಿವೃದ್ಧಿಪರ ಯೋಜನೆಗಳೂ ಅನುಷ್ಠಾಗೊಂಡಿಲ್ಲ.
ಇಲ್ಲಿಯ ಯುವಕರು ಉದ್ಯೋಗ ಅರಸಿ ದೂರದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹಾಗಾಗಿ ಈಗ ಉದ್ದೇಶಿತ ರೈಲು ಮಾರ್ಗ ತೀರ್ಥಹಳ್ಳಿ ಮೂಲಕವೇ ಶೃಂಗೇರಿ ತಲುಪುವಂತಾಗಲಿ. ತಾಲೂಕಿನ ಪ್ರವಾಸೋದ್ಯಮದ ದೃಷ್ಠಿಯಿಂದಲೂ ಇದು ಒಳ್ಳೆಯದೇ ಎಂದು ದೇವರಾಜ್ ಹೇಳಿದ್ದಾರೆ.   
ದಾಖಲೆ ಸಮೇತ ಪ್ರಕಟವಾದ ಕನ್ನಡ ಪ್ರಭದ ಸಕಾಲಿಕ ವರದಿ ತಾಲೂಕಿನ ಪ್ರಜ್ಞಾವಂತರ ಕಣ್ಣು ತೆರೆಸಿದೆ ಎಂದು ಹೇಳಿದ ಅವರು ಈ ಬಗ್ಗೆ ಸಮಿತಿ ಕೂಡಲೇ ಕಾರ್ಯಪ್ರವೃತ್ತವಾಗಲಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.