ಕಾರ್ಯದಲ್ಲಿ ಅರ್ಪಣಾ ಭಾವವಿರಲಿ
ತೀರ್ಥಹಳ್ಳಿ: ಯತಿಗಳು ಲೋಕಕಲ್ಯಾಣಕ್ಕಾಗಿ ತಮ್ಮ ಬದುಕನ್ನು ಅರ್ಪಿಸಿಕೊಳ್ಳುತ್ತಾರೆ. ಹಾಗೆಯೇ ಸಮಾಜದ ಹಿತಕಾಯುವ ಕೆಲಸವನ್ನು ಸದ್ದಿಲ್ಲದೇ ಮಾಡುವ ಅವರ ಚಿಂತನೆ ಹಿಂದೆ ಶುದ್ಧಮನಸ್ಸಿನ ಅನುಷ್ಠಾನವೂ ಇರುತ್ತದೆ ಎಂದು ಕಿರುತೆರೆ ಕಲಾವಿದ ಜಿ. ರಾಜಗೋಪಾಲ ಜೋಷಿ ಹೇಳಿದರು.
ತೀರ್ಥಹಳ್ಳಿಯ ಲಯನ್ಸ್ ಮತ್ತು ಲಯನೆಸ್ ಕ್ಲಬ್ಗಳ 2014-15ನೇ ಸಾಲಿನ ಪದಾಧಿಕಾರಿ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜಮುಖಿಯಾಗಿ ಸಹಾಯಹಸ್ತ ನೀಡುವ, ಮನುಷ್ಯ ಧರ್ಮ ಪಾಲಿಸುವ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆಯೂ ಒಂದಾಗಿದೆ. ಮನುಷ್ಯನಲ್ಲಿ ಮಾತ್ರ ವಿವೇಚನಾ ಶಕ್ತಿ ಇದೆ. ಉಳ್ಳವರು ಇಲ್ಲದವರೆಗೆ ನೀಡುವ ಸಹಾಯ ಹಸ್ತ ಸದಾ ಅನುಕರಣೀಯ ಎಂದರು.
ಅರ್ಪಣಾ ಭಾವ: ಯಾವುದೇ ಕೆಲಸ ಮಾಡುವುದಕ್ಕೆ ಅರ್ಪಣಾ ಭಾವನೆ ಇರಬೇಕು. ಕರ್ತವ್ಯನಿಷ್ಠೆ ಬೇಕು. ಆಗಮಾತ್ರ ಮಾಡಿದ ಕೆಲಸ ತೃಪ್ತಿ ನೀಡುತ್ತದೆ. ಲಯನ್ಸ್ಬ್ಂಧುಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಸಮಾಜ ಗುರುತಿಸಿ ಪ್ರೋತ್ಸಾಹಿಸುವಂತಾಗಲಿ ಎಂದು ಹೇಳಿದರು.
ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ. ಕೆ. ಮಧುಸೂಧನ ಹೆಗಡೆ ನೂತನ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿದರು.
2014-15ನೇ ಸಾಲಿಗೆ ರೋಟರಿ ನೂತನ ಅಧ್ಯಕ್ಷರಾಗಿ ಅನಂತಪದ್ಮನಾಭ ಆಚಾರ್ಯ ಪದಗ್ರಹಣ ಮಾಡಿದರು.
ಕಾರ್ಯದರ್ಶಿಯಾಗಿ ಜೆ.ಟಿ. ಸುಂದರೇಶ್, ಖಜಾಂಚಿಯಾಗಿ ಎಚ್.ಬಿ. ಮೋಹನ್, ಲಯನೆಸ್ ಅಧ್ಯಕ್ಷರಾಗಿ ಮೋಹಿನಿ ಎ. ಆಚಾರ್ಯ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ರಘುನಾಥ್, ಜಿ.ವಿ. ಶಿವಪಾಲ್, ಕೆ.ಆರ್. ಜಗದೀಶ್, ಅನುರಘುನಾಥ್, ಅನು ಪ್ರಶಾಂತ್ ಹಾಗೂ ಅನು ಜಗದೀಶ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

