ಶಿವಮೊಗ್ಗ

ಬೆಂಕಿ ಅವಘಡದಲ್ಲಿ 7 ದ್ವಿಚಕ್ರವಾಹನ, ಸರ್ಕಾರಿ ಜೀಪು ಆಹುತಿ

Published On :

ಶಿವಮೊಗ್ಗ: ಇಲ್ಲಿನ ವಿನೋಬ ನಗರದಲ್ಲಿರುವ ವಾಣಿಜ್ಯ ಮಳಿಗೆಯ ನೆಲಮಾಳಿಗೆಯಲ್ಲಿ ನಡೆದ ಬೆಂಕಿ ಅನಾಹುತದಲ್ಲಿ 7 ದ್ವಿಚಕ್ರ ವಾಹನ, ಒಂದು ಸರ್ಕಾರಿ ಜೀಪು ಸೇರಿದಂತೆ ಮೂರು ಜನರೇಟರ್ಗಳಿ ಆಹುತಿಯಾಗಿವೆ.
ಬುಧವಾರ ನಸುಕಿನಲ್ಲಿ ಪೃಥ್ವಿ ಮ್ಯಾನ್ಶ್ನ್ನಲ್ಲಿ ಈ ಘಟನೆ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ಕಚೇರಿ ಇದೇ ಕಟ್ಟಡದಲ್ಲಿದ್ದು, ಇಲಾಖೆಗೆ ಸೇರಿದ ಜೀಪು ಭಾಗಶಃ ಸುಟ್ಟುಹೋಗಿದೆ.
ಕಟ್ಟಡ ಕೆಳಭಾಗದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ಗಮನಿಸಿದ ರಾತ್ರಿ ಗಸ್ತು ಪೊಲೀಸರು ಸುತ್ತಮುತ್ತಲಿನ ಮನೆಯವರಿಗೆ ಮಾಹಿತಿ ನೀಡಿ ಕಟ್ಟಡ ಮಾಲಿಕರ ವಿವರ ಸಂಗ್ರಹಿಸಿದರು.
 ಜೊತೆಗೆ ಅಗ್ನಿ ಶಾಮಕ ದಳಕ್ಕೂ ಮಾಹಿತಿ ರವಾನಿಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ವಾಹನಗಳೊಂದಿಗೆ ವೈಬ್ರೇಟರ್ ಯಂತ್ರ, ಕಟ್ಟಡ ನಿರ್ಮಾಣಕ್ಕೆ ಬಳಸುವ ವಸ್ತುಗಳು ಸುಟ್ಟು ಭಸ್ಮವಾಗಿದೆ. ಅಂದಾಜು 2.5 ಲಕ್ಷ ರುಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.
ಘಟನೆ ನಡೆದ ಸ್ಥಳದಿಂದ ಕೆಲವೇ ಅಂತರದಲ್ಲಿ ಆಯಿಲ್ ಕ್ಯಾನ್, ಕಟ್ಟಡ ನಿರ್ಮಾಣಕ್ಕೆ ಬಳಸುವ ಮರದ ವಸ್ತುಗಳು ದಾಸ್ತಾನು ಮಾಡಲಾಗಿತ್ತು. ಇದಕ್ಕೆ ಬೆಂಕಿ ಹೊತ್ತಿದ್ದರೆ ಮತ್ತಷ್ಟು ಹಾನಿ ಸಂಭವಿಸುವುದಿತ್ತು. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.
ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಎಂದು ಹೇಳಲಾಗುತ್ತಿದ್ದರೂ, ಕಿಡಿಗೇಡಿಗಳ ಬೆಂಕಿ ಇಟ್ಟಿರುವ ಅನುಮಾನ ವ್ಯಕ್ತವಾಗಿದೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ. ವಿನೋಬ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.