ಶಿವಮೊಗ್ಗ

ರಾಜ್ಯದ ಎಲ್ಲ ಪೌರಸೇವಾ ನೌಕರರು ಕೆಲಸಕ್ಕೆ ಹಾಜರು ನಾಳೆಯಿಂದ

Published On :

ಭದ್ರಾವತಿ: ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಪ್ರಮುಖ ಬೇಡಿಕೆಗಳನ್ನು ತಕ್ಷಣಕ್ಕೆ ಈಡೇರಿಸುವ ಭರವಸೆ ಸರ್ಕಾರ ನೀಡಿರುವ ಹಿನ್ನೆಲೆಯಲ್ಲಿ ಜುಲೈ 20 ಭಾನುವಾರ ರಾಜ್ಯದ ಎಲ್ಲಾ ಪೌರಸೇವಾ ನೌಕರರು ಕೆಲಸಕ್ಕೆ ಹಾಜರಾಗುವರು ಎಂದು ಸಂಘದ ರಾಜ್ಯಾಧ್ಯಕ್ಷ ಸತ್ಯನಾರಾಯಣ ತಿಳಿಸಿದರು. ಶುಕ್ರವಾರ ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ಪೌರಸೇವಾ ನೌಕರರಿಗೆ ಭಾನುವಾರ, ಸರ್ಕಾರಿ ರಜಾದಿನ ಹಾಗೂ ಹಬ್ಬ ಹರಿದಿನಗಳಂದು ರಜೆ ನೀಡಬೇಕೆಂಬ ಬೇಡಿಕೆಯೊಂದಿಗೆ ಇತರ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿತ್ತು. ಇವುಗಳ ಬಗ್ಗೆ ಸರ್ಕಾರ ನಿರ್ಲಕ್ಷ ತಾಳಿದೆ ಎಂದು ಕೋಲಾರದಲ್ಲಿ ಜೂ.15ರಂದು ನಡೆದ ಸಭೆಯಲ್ಲಿ ಜು.20 ಭಾನುವಾರ ರಾಜ್ಯಾದ್ಯಂತ ಪೌರಸೇವಾ ನೌಕರರು ಕೆಲಸಕ್ಕೆ ಹಾಜರಾಗಬಾರದೆಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
   ಶೇ.40ರಷ್ಟು ದಲಿತ ಪೌರಸೇವಾ ನೌಕರರು, ನೀರು ಸರಬರಾಜು ಸಿಬ್ಬಂದಿ ದಿನದ 24 ಗಂಟೆ ಹಾಗೂ ವರ್ಷದ 365 ದಿನ ದುಡಿಯುತ್ತಾರೆ. ಎಲ್ಲಾ ಸರ್ಕಾರಿ ಸಿಬ್ಬಂದಿ ಅನುಭವಿಸುವ ರಜೆಯ ದಿನಗಳನ್ನು ಪೌರಸೇವಾ ನೌಕರರಿಗೂ ಅನ್ವಯಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕೆಂದು ಸಂಘ ಒತ್ತಾಯಿಸಿತ್ತು. ಈಗ ಸರ್ಕಾರ ಸಂಘದ 18 ಬೇಡಿಕೆಗಳಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಪೌರಾಡಳಿತ ಸಚಿವರು, ನಗರಾಭಿವೃದ್ಧಿ ಕಾರ್ಯದರ್ಶಿ, ರಾಜ್ಯ ಸರ್ಕಾರದ ಉಪಕಾರ್ಯದರ್ಶಿ ಹಾಗೂ ಪೌರಾಡಳಿತ ನಿರ್ದೇಶಕರು ಎರಡು ಸಭೆಗಳನ್ನು ನಡೆಸಿ ಧನಾತ್ಮಕವಾಗಿ ಸ್ಪಂದಿಸಿರುವುದರಿಂದ ಜು.20 ಭಾನುವಾರ ಪೌರಸೇವಾ ನೌಕರರು ಎಂದಿನಂತೆ ಕೆಲಸಕ್ಕೆ ಹಾಜರಾಗುವರು ಎಂದು  ಅವರು ತಿಳಿಸಿದರು. ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಚೇತನ್‌ಕುಮಾರ್, ಸಂಘದ ಆಂತರಿಕ ಲೆಕ್ಕಪರಿಶೋಧಕ ರಾಘವೇಂದ್ರ ರಾವ್, ಸಂಘದ ಭದ್ರಾವತಿ ಶಾಖೆ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.