ಶಿವಮೊಗ್ಗ

ಅಂತಿಮ ಹಂತದಲ್ಲಿ ಜೋಗ ಅಭಿವೃದ್ಧಿ ರೂಪುರೇಷೆ

Published On :

ಶಿವಮೊಗ್ಗ: ಜೋಗ ಸಮಗ್ರ ಅಭಿವೃದ್ಧಿ ರೂಪುರೇಷೆ ಅಂತಿಮ ಹಂತದಲ್ಲಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಶನಿವಾರ ಜೋಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಷದ 365 ದಿನವೂ ಜೋಗ ಜಲಪಾತದ ಸೌಂದರ್ಯ ಉಳಿಸಿಕೊಳ್ಳುವ ಯೋಜನೆಗೆ ಸರ್ಕಾರ ಅಸಕ್ತಿ ವಹಿಸಿದೆ. ಈ ಕುರಿತ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ಜಾರಿಯಾದರೆ ನಯಾಗಾರ ಮಾದರಿಯಲ್ಲಿ ಜೋಗ ಕೂಡಾ ವಿಶ್ವದ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ಅತ್ಯಾಚಾರ ಪ್ರಕರಣ ನಡೆಯಬಾರದಿತ್ತು. ನಡೆದಿದೆ. ಎಲ್ಲರೂ ಇದನ್ನು ಕಠಿಣ ಶಬ್ಧಗಳಲ್ಲಿ ಖಂಡಿಸಬೇಕು. ಸರ್ಕಾರ ಇಂಥದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದು. ಕಾನೂನಿನಿಂದಲೇ ನಿಯಂತ್ರಣ ಅಸಾಧ್ಯ. ಜನರು ಕೂಡಾ ಕೈಜೋಡಿಸಬೇಕು. ಟಿವಿ ಚಾನಲ್ ಗಳಿಂದ ಪ್ರೇರೇಪಿತರಾಗಿ ಈ ಘಟನೆಗೆ ಕಾರಣರಾಗುತ್ತಿದ್ದಾರೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ನುಡಿದರು.  ಚಾನಲ್‌ನಲ್ಲಿ ಯಾವ ಸುದ್ಧಿ ಹಾಕಬೇಕು, ಬೇಡ ಎಂಬುದನ್ನು ನಿರ್ಧಾರ ಕೈಗೊಂಡರೆ ಒಳ್ಳೆಯದು. ಸ್ವಯಂ ನಿಯಂತ್ರಣ ಸೂಕ್ತ ಎಂದರು. ಜಾತಿ, ಧರ್ಮ, ಭಾವ, ಮೈದ, ನೆಂಟಾ ಅಂತ ಕೆಲವು ಪೊಲೀಸ್ ಅಧಿಕಾರಿಗಳು ಗೂಟ ಹೊಡೆದು ಕೂತಿದ್ದಾರೆ. ಇವರನ್ನು ಬದಲಾವಣೆ ಮಾಡಿದರೆ, ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ತಂದರೆ ಸುಧಾರಣೆ ಆಗಬಹುದು. ಮುಖ್ಯಮಂತ್ರಿಗಳು ಈ ಕೆಲಸ ಮಾಡುವ ವಿಶ್ವಾಸ ಇದೆ ಎಂದು ಹೇಳಿದರು. ಅತ್ಯಾಚಾರ ಪ್ರಕರಣಗಳು ವಿಜೃಂಭಿಸಬಾರದು ಇದರಲ್ಲಿ ರಾಜಕೀಯ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಇದೇ ಸಂದರ್ಭದಲ್ಲಿ ತಲಕಳಲೆ ಡ್ಯಾಂ ಭಾಗದಲ್ಲಿ ಜಂಗಲ್ ರೆಸಾರ್ಟ್ ನಿರ್ಮಿಸಿರುವ ಶರಾವತಿ ಅಡ್ವೆಂಚರ್ ಕ್ಯಾಂಪ್ ಉದ್ಘಾಟನೆ ಕಾರ್ಯಕ್ರಮ ನೀತಿ ಸಂಹಿತೆ ಕಾರಣ ನಡೆಯಲಿಲ್ಲ.
ಸದಸ್ಯತ್ವ ನೋಂದಣಿ ವಿಸ್ತರಣೆ
ತೀರ್ಥಹಳ್ಳಿ:  ಮಣಿಪಾಲ ಆರೋಗ್ಯ ಕಾರ್ಡಿನ ಸದಸ್ಯತ್ವದ ಕಾಲವಧಿಯನ್ನು ಜು.26 ರವರೆಗೆ ವಿಸ್ತರಿಸಲಾಗಿದೆ ಎಂದು ಮಣಿಪಾಲ ಸಂಸ್ಥೆಯ ಆರೋಗ್ಯ ಕಾರ್ಡ್ ವಿಭಾಗದ ಅನಿಲ್ ಜೇಕಬ್ ತಿಳಿಸಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಸುಮಾರು ಒಂದೂವರೆ ಸಾವಿರ ಜನ ಈ ಕಾರ್ಡಿನ ಉಪಯೋಗಿಸಿದ್ದು, 3 ಕೋಟಿ ರಿಯಾಯಿತಿ ಪಡೆದಿದ್ದಾರೆ. ಈ ಆರೋಗ್ಯ ಕಾರ್ಡನ್ನು 2 ಅಥವಾ 3 ಬಾರಿ ಬಳಸುವ ಮೂಲಕ ಶುಲ್ಕಕ್ಕಾಗಿ ಮಾಡಿರುವ ವೆಚ್ಚದ ಲಾಭವನ್ನೂ ಹಿಂಪಡೆಯಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಮಕ್ಕಿಮನೆ ಪ್ರಶಾಂತ್, ಚಿತ್ರೇಶ್ ಶೆಟ್ಟಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.