ಜನಮುಖಿ ಕಾರ್ಯಕ್ರಮ ಅನುಕರಣೀಯ: ಗುರುನಾಥ ಬಾಪಟ್
ಸಾಗರ: ಇಲ್ಲಿನ ಧ್ವನಿ ಬೆಳಕು ಶಾಮಿಯಾನ ಮಾಲೀಕರ ಸಂಘದ ವತಿಯಿಂದ ಎರಡು ದಿನಗಳ ಉದ್ಯಮಶೀಲತಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಎಸ್ಆರ್ಬಿ ಟ್ರಸ್ಟ್ ಅಧ್ಯಕ್ಷ ಗುರುನಾಥ ಬಾಪಟ್, ಶ್ರಮಿಕವರ್ಗದ ಸಮಸ್ಯೆ ನೂರಾರು ಇರುತ್ತದೆ. ಸಮಸ್ಯೆ ನಡುವೆ ಸಂಘಟನೆ ಕಟ್ಟಿ ಜನಮುಖಿ ಕಾರ್ಯಕ್ರಮ ರೂಪಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ನಿಮ್ಮ ಸಂಕಲ್ಪ ಅನುಕರಣೀಯ ಎಂದು ಹೇಳಿದರು. ಶಾಮಿಯಾನ ಹಾಗೂ ಧ್ವನಿಬೆಳಕು ಉದ್ಯಮ ನಡೆಸುತ್ತಿರುವವರು ಸಂಕಷ್ಟದಲ್ಲಿದ್ದಾರೆ. ವಿದ್ಯಾಭ್ಯಾಸವೂ ಕಡಿಮೆ ಇರುತ್ತದೆ. ಇದರ ನಡುವೆ ವೃತ್ತಿಕೌಶಲ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳನ್ನು ನಡೆಸುತ್ತಿರುವುದು ಒಳ್ಳೆಯದು. ಆಧುನಿಕ ಯುಗದಲ್ಲಿ ಸ್ಪರ್ಧೆ ಹೆಚ್ಚಿರುತ್ತದೆ. ಸ್ಪರ್ಧೆಗೆ ನಿಮ್ಮನ್ನು ತೆರೆದುಕೊಳ್ಳಬೇಕು. ಹೊಸಹೊಸ ಯಂತ್ರಗಳನ್ನು ನಿಮ್ಮ ಉದ್ಯಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜನರಿಗೆ ಉತ್ತಮ ಸೇವೆ ಕೊಡಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ವಿ.ಗಂಗಾಧರ್, ನಾವು ದುಡಿಮೆ ಮಾಡಿ ಊಟ ಮಾಡುವವರು. ಸರ್ಕಾರದ ಯಾವುದೆ ಸೌಲಭ್ಯ ಇಲ್ಲದೇ ಹೋದರು ಸ್ವತಂತ್ರವಾಗಿ ಉದ್ದಿಮೆ ನಡೆಸಿ ಜನರಿಗೆ ಅನುಕೂಲಕರ ರೀತಿಯಲ್ಲಿ ಸಂಘದ ಮೂಲಕ ಕಾರ್ಯ ಯೋಜನೆ ರೂಪಿಸುತ್ತಿದ್ದೇವೆ. ಸಂಘದ ಸದಸ್ಯರು ಇಂತಹ ಕಾರ್ಯಾಗಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್, ಗೌರವಾಧ್ಯಕ್ಷೆ ಶಶಿಕಲಾ ಶಾಂತಾ, ಉಪಾಧ್ಯಕ್ಷ ಎಚ್.ಆರ್. ಶ್ರೀಧರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

