ಮಳೆಗೆ ಮನೆ ಗೋಡೆ ಕುಸಿತ
ಸಾಗರ: ಪಟ್ಟಣದ ಸುಭಾಷ್ನಗರದಲ್ಲಿ ಮಳೆಗೆ ಮನೆಯೊಂದರ ಗೋಡೆ ಸೋಮವಾರ ಕುಸಿದು ಬಿದ್ದಿದೆ.
ಸುಭಾಷ್ನಗರ ಈದ್ಗಾ ಮೈದಾನ ಅಂಚಿನಲ್ಲಿರುವ ಆಯಿಷಾಬಿ ಎಂಬುವವರ ಮನೆಯ ಒಂದು ಭಾಗದ ಎರಡು ಗೋಡೆಗಳು ಕುಸಿದ ಪರಿಣಾಮ ಮನೆ ಚಾವಣೆ ಕುಸಿಯುತ್ತಿದೆ. ವಿಷಯ ತಿಳಿದ ನಗರಸಭಾಧ್ಯಕ್ಷೆ ಲಲಿತಮ್ಮ ಸ್ಥಳಕ್ಕೆ ಭೇಟಿ ನೀಡಿ ಮನೆ ಮಾಲೀಕರಿಗೆ ಸಾಂತ್ವನ ಹೇಳಿ, ನಗರಸಭೆಯಿಂದ ತುರ್ತು ಪರಿಹಾರದ ಭರವಸೆ ನೀಡಿದರು. ಮನೆಯ ಉಳಿದ ಭಾಗ ಕುಸಿಯುವ ಸಾಧ್ಯತೆಯಿರುವ ಕಾರಣ ಮುಂಜಾಗ್ರತೆಯಾಗಿ ಶಿಥಿಲಗೊಂಡಿರುವ ಮನೆಯನ್ನು ನೆಲಸಮ ಮಾಡುವಂತೆ ಸೂಚಿಸಿದರು. ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ್ ಇದ್ದರು.
ಕಲಾಪ ಸರಿಯಾಗಿ ನಡೆಯಲು ಬಿಜೆಪಿ ಅಡ್ಡಿ: ಮಧು ಬಂಗಾರಪ್ಪ
ಸೊರಬ: ವಿಧಾನ ಸಭೆ ಕಲಾಪವನ್ನು ಸರಿಯಾಗಿ ನಡೆಸಲು ಬಿಜೆಪಿಯವರು ಬಿಡಬೇಕು. ಸಭೆಯಲ್ಲಿ ಇನ್ನೂ 14 ವಿಷಯಗಳ ಮೇಲೆ ಚರ್ಚೆ ಬಾಕಿ ಇದೆ. ಅದಕ್ಕೆ ಅವಕಾಶವನ್ನೇ ಕೊಡದಿದ್ದರೆ ವಿಷಯಗಳ ಮೇಲೆ ಚರ್ಚೆ ಹೇಗೆ ಸಾಧ್ಯ? ಎಂದು ಶಾಸಕ ಮಧು ಬಂಗಾರಪ್ಪ ಪ್ರಶ್ನಿಸಿದರು.
ನೆರಪೀಡಿತ ಪ್ರದೇಶಕ್ಕೆ ಭೇಟಿ ನಿಡಿದ ನಂತರ, ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ತಮ್ಮ ಸರ್ಕಾರವಿದ್ದಾಗ ಸಿಬಿಐ ತನಿಖೆ ಬೇಡ ಈಗ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕಲಾಪ ಸರಿಯಾಗಿ ನಡೆದರೂ, ಪರಿಶೀಲಿಸುತ್ತೇವೆ, ಸೂಕ್ತಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಶಿಕಾರಿಪುರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಕಾಂಗ್ರೇಸ್ ಜೆಡಿಎಸ್ ಹೊಂದಾಣಿಕೆ ನನಗೆ ತಿಳಿದಂತೆ ಆಗುವುದಿಲ್ಲ. ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವುದು ತಪ್ಪೇನಲ್ಲ ಎಂದರು. ಜೆಡಿಎಸ್ನಿಂದ ಬಹುತೇಕ ಬಳಿಗಾರ್ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು 2 ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮಗೊಳ್ಳಲಿದೆ. ಬಳಿಗಾರ್ ಒಬ್ಬ ಒಳ್ಳೆಯ ಅಭ್ಯರ್ಥಿ, ಅನೇಕ ಜನಪರ ಕಾರ್ಯಕ್ರಮದ ಮೂಲಕ ಜನರ ಹತ್ತಿರ ಇರುವಂತಹ ವ್ಯಕ್ತಿ ಎಂದರು. ಇದೇ ಆಗಸ್ಟ್ 1ನೇ ತಾರೀಖಿಗೆ ನಾಮಪತ್ರ ಸಲ್ಲಿಸಲು ಯೋಜಿಸಲಾಗಿದೆ. ರಾಜ್ಯದ ಎಲ್ಲಾ ಶಾಸಕ, ಮುಖಂಡರನೇಕರು ಶಿಕಾರಿಪುರ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

