ವರದಾ ನದಿಗೆ ಬ್ಯಾರೇಜ್ ನಿರ್ಮಿಸಿ ನೀರು ಪೂರೈಕೆ
ಸೊರಬ: ಬರೀ ಬೋರ್‌ವೆಲ್ ತೆಗೆಸಿ ಅಂತರ್ಜಲ ಕುಸಿತಕ್ಕೆ ಕಾರಣವಾಗುವ ಬದಲು, ಈ ಹಿಂದಿನಿಂದಲೂ ಪಟ್ಟಣಕ್ಕೆ ನೀರು ಪೂರೈಸುತ್ತಿರುವ ಚಂದ್ರಗುತ್ತಿ ಹೊಳೆ ಜೋಳದಗುಡ್ಡೆ ವರದಾ ನದಿಗೆ ಬ್ಯಾರೇಜ್
ನಿರ್ಮಿಸಿ ನೀರು ಪೂರೈಸಲಾಗುತ್ತದೆ ಎಂದು ಶಾಸಕ ಮಧು ಬಂಗಾರಪ್ಪ ತಿಳಿಸಿದರು.
ಸೋಮವಾರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ವರದಾ ನದಿಗೆ ಬ್ಯಾರೇಜ್ ನಿರ್ಮಿಸಿದ ಬಳಿಕ ಇಲ್ಲಿಗೆ ನೀರು ತರುವುದರೊಂದಿಗೆ ಮಾರ್ಗದ ಅನೇಕ ಗ್ರಾಮಗಳಿಗೂ ನೀರು ಪೂರೈಸಲು ಅವಕಾಶವಿದೆ. ಪಟ್ಟಣಕ್ಕೆ ಶಾಶ್ವತ ನೀರು ಪೂರೈಸಲು ಅನುಕೂಲವಾಗುತ್ತದೆ. ತಾಲೂಕಿನ ಅನೇಕ ಕಡೆಗಳಲ್ಲಿನ ನೀರಿನ ಬವಣೆಯನ್ನೂ ನೀಗಿಸಿದಂತಾಗುತ್ತದೆ ಎಂದರು.
ಪಪಂ ಎದುರಿನ ವೃತ್ತದಲ್ಲಿ ಅಂಬೇಡ್ಕರ್ ಕಂಚಿನ ಪ್ರತಿಮೆ ಸ್ಥಾಪಿಸಿ, ಡಾ.ಅಂಬೇಡ್ಕರ್ ವೃತ್ತ ಎಂದು ಹೆಸರಿಡುವ ವಿಷಯಕ್ಕೆ ಸಂಬಂಧ ಪಟ್ಟಂತೆ ಚರ್ಚಿಸಿದ ಅವರು, ಸದಸ್ಯರೆ ತೀರ್ಮಾನ ತೆಗೆದುಕೊಳ್ಳಲಿ. ಈ ವಿಷಯದಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಸದಸ್ಯ ಮಂಚಿ ಹನುಮಂತಪ್ಪ ಮಾತನಾಡಿ ಪಪಂ ವ್ಯಾಪ್ತಿಯ 11 ವಾರ್ಡ್ ಪೈಕಿ 8 ವಾರ್ಡ್‌ಗಳನ್ನು ಸ್ಲಂ ವಾರ್ಡ್‌ದಳೆಂದು ಗುರುತಿಸಲಾಗಿದೆ. ಇವುಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ತರಬೇಕು ಎಂದರು.
ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ ಪಪಂ ಕಚೇರಿ ಕಡೆಯಿಂದ ಆಶ್ರಯ ನಿವೇಶನದಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ ಒದಗಿಸಲು ಹಾಗೂ ನೂತನ ಖಾಸಗಿ ಬಸ್‌ನಿಲ್ದಾಣ ಕಾಮಗಾರಿ ನಿರ್ವಹಿಸಲು ರು. 4 ಕೋಟಿ ಕ್ರಿಯಾ ಯೋಜನೆಯನ್ನು ಶಾಸಕ ಮಧು ಬಂಗಾರಪ್ಪಗೆ ನೀಡಿದರು. ಇದೇ ವೇಳೆ ಈ ಕ್ರಿಯಾಯೋಜನೆ ಸದಸ್ಯರ ಗಮನಕ್ಕೆ ಬಾರದೇ ನೀಡಲಾಗಿದೆ ಎಂಬ ಆರೋಪವೂ ಕೇಳಿ ಬಂತು.
ಪಪಂ ವ್ಯಾಪ್ತಿಯ ಎಲ್ಲಾ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಸುಜಾಯತ್ ಉಲ್ಲಾ, ಮೆಹಬೂಬಿ, ಮಹೇಶ್‌ಗೌಳಿ, ಎಂ.ಡಿ. ಉಮೇಶ್, ಮುಖ್ಯಾಧಿಕಾರಿ ಸುರೇಶ್ ಮೊದಲಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

