ಶಿವಮೊಗ್ಗ

ಸರ್ಕಾರಿ ಕಾಲೇಜು ಅವ್ಯವಸ್ಥೆ ಪರಿಶೀಲಿಸಿದ ರಾಘವೇಂದ್ರ

Published On :

ಶಿಕಾರಿಪುರ: ಇಲ್ಲಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪುನರ್ ಕಾಯಕಲ್ಪಕ್ಕೆ ಮಾಜಿ ಸಂಸದ ರಾಘವೇಂದ್ರ ಹೆಚ್ಚಿನ ಕಾಳಜಿ ವಹಿಸಿ ಗುರುವಾರ ಖುದ್ದು ಭೇಟಿ ನೀಡಿ ಕಾಲೇಜಿನ ಅವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭ ಸ್ಥಳದಲ್ಲಿಯೇ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಉಪನ್ಯಾಸಕರ ನಿಯೋಜನೆ, ಪ್ರಯೋಗಾಲಯದ ಉಪಕರಣಗಳ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ನಿರ್ದೇಶಕಿ ಜತೆ ಮಾತುಕತೆ ನಡೆಸಿದರು. ಸಮಸ್ಯೆಗೆ ಪರಿಹಾರವನ್ನು ರೂಪಿಸುವಲ್ಲಿ ನಿಮ್ಮ ಜತೆ ನಾವಿದ್ದೇವೆ ಎಂದು ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿನ ಅಧೈರ್ಯವನ್ನು ನಿವಾರಣೆಗೊಳಿಸುವ ಪ್ರಯತ್ನ ಮಾಡಿದರು.
ಈಗಾಗಲೇ ಪದವಿ ಪೂರ್ವ ಕಾಲೇಜು ಆರಂಭವಾಗಿ ಹಲವು ದಿನಗಳಾದರೂ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಶಿಕಾರಿಪುರದ ಹೊರವಲಯದಲ್ಲಿ ಈ ಕಾಲೇಜು ಸ್ಥಾಪಿಸಲಾಗಿತ್ತು. ವಿದ್ಯಾರ್ಥಿಗಳ ಹೆಚ್ಚಿನ ಒತ್ತಡ ನಿವಾರಿಸಲು ಆರಂಭಿಸಲಾದ ನೂತನ ಸ್ವತಂತ್ರ ಪದವಿಪೂರ್ವ ಕಾಲೇಜು ಉಪನ್ಯಾಸಕರು, ಪ್ರಯೋಗಾಲಯ ಸ್ವಚ್ಚತೆ ಮತ್ತಿತರ ಹಲವು ಸಮಸ್ಯೆಗಳಿದ್ದವು. ಇಂದಿಗೂ ಕಾಲೇಜು ಆರಂಭದ ಲಕ್ಷಣ ಗೋಚರವಾಗದೆ, ಕೆಲವೇ ವರ್ಷಗಳಲ್ಲಿ ಪ್ರಾಚಾರ್ಯ ಹಾಗೂ ಬೋಧಕ ಸಿಬ್ಬಂದಿಗಳ ನಿರ್ಲಕ್ಷದಿಂದಾಗಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಅನುಭವಿಸಿದ್ದರು.
ಉಪನ್ಯಾಸಕರು, ಪ್ರಯೋಗಾಲಯ, ಸ್ವಚ್ಛತೆ ಮತ್ತಿತರ ಬಹು ದೊಡ್ಡ ಸಮಸ್ಯೆಗಳಿಂದ ಬಳಲಿ ವಿದ್ಯಾರ್ಥಿಗಳ ಬಹಿಷ್ಕಾರದ ಎಚ್ಚರಿಕೆ, ಪೋಷಕರ ಕಳವಳಕ್ಕೆ ಕಾರಣವಾಗಿದನ್ನು ಮನಂಗಂಡ ಮಾಜಿ ಸಂಸದ ಬಿ.ವೈ. ರಾಘವೇಂದ್ರ ಗುರುವಾರ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲೇಜಿನ ಕಿಟಕಿ ಗಾಜುಗಳ ದ್ವಂಸ, ಪ್ರಯೋಗಾಲಯದಲ್ಲಿ ಕೆಲವೇ ಪರಿಕರಗಳ ದರ್ಶನದಿಂದ ಅಸಮಾಧಾನ ವ್ಯಕ್ತಪಡಿಸಿದರು.
ಗುರುಮೂರ್ತಿ, ವಸಂತಗೌಡ, ಸುಕೇಂದ್ರಪ್ಪ, ಹಾಲಪ್ಪ, ಪ್ರವೀಣ ಶೆಟ್ಟಿ, ಕಳೆಗುಡ್ಡಿ ಮಂಜುನಾಥ್, ಗಿರೀಶ್, ಏಳುಕೋಟಿ ಗಿಡ್ಡಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.