ಶಿವಮೊಗ್ಗ

ದೀಪ್ತಿಗೆ ಗೀತಾ ದೇಸಾಯಿ ದತ್ತಿನಿಧಿ ಪ್ರಶಸ್ತಿ

Published On :

ಭದ್ರಾವತಿ:  ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ನಿಧಿ -2013ರ ಪ್ರಶಸ್ತಿಯನ್ನು ಭದ್ರಾವತಿಯ ದೀಪ್ತಿ ಶ್ರೀಹರ್ಷ ಅವರ 'ಕಾಗದದ ಕುದುರೆ' ಕವನ ಸಂಕಲನಕ್ಕೆ ನೀಡಲಾಯಿತು. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೊ. ಕೆ.ಮರುಳಸಿದ್ದಪ್ಪ ಮತ್ತು ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಪ್ರಶಸ್ತಿಯನ್ನು ದೀಪ್ತಿ ಶ್ರೀಹರ್ಷ ಅವರಿಗೆ ನೀಡಿ ಗೌರವಿಸಿದರು.
ವಿದ್ಯಾರ್ಥಿವೇತನ ವಿತರಣೆ
ಚಿಕ್ಕಮಗಳೂರು: ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 700, ಪದವಿಪೂರ್ವ ವಿದ್ಯಾರ್ಥಿಗಳಿಗೆ 800 ಹಾಗೂ ಪದವಿ ವಿದ್ಯಾರ್ಥಿಗಳಿಗೆ 900 ಗಳಂತೆ ಶೃಂಗೇರಿ ವಿಧಾನಸಭಾ ವ್ಯಾಪ್ತಿಯ ಒಟ್ಟು 288 ವಿದ್ಯಾರ್ಥಿಗಳಿಗೆ 2,37,300 ವಿತರಿಸಲಾಯಿತು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಐ.ಎಂ. ಮಹೇಶಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ. ಗೀತಾ, ಒಕ್ಕಲಿಗ ಮುಖಂಡರಾದ ಜಿ.ಎಸ್. ಚಂದ್ರಪ್ಪ, ಬಿ.ಎಲ್. ಸಂದೀಪ್ ಉಪಸ್ಥಿತರಿದ್ದರು. ಪ್ರತಿಭಾವನ್ವಿತ ವಿದ್ಯಾರ್ಥಿಗಳಾದ ಶೃಂಗೇರಿ ಸಮೀಪದ ಕೆಸರುಕೊಡಿಗೆಯ ಕೆ.ಸಿ. ಪೂಜಿತಾ, ನರಸಿಂಹರಾಜಪುರದ ಸಮರ್ಥ್‌ಗೌಡ ಅವರಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಬಜರಂಗದಳ ಪದಾಧಿಕಾರಿಗಳ ಆಯ್ಕೆ
ಚಿಕ್ಕಮಗಳೂರು: ಇಲ್ಲಿನ ಮಾರ್ಕಂಡೇಶ್ವರ ದೇವಾಲಯದ ಸಭಾಂಗಣದಲ್ಲಿ ಬಜರಂಗದಳ ಕಾರ್ಯಕರ್ತರ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಸಂಚಾಲಕ ಆರ್.ಡಿ. ಮಹೇಂದ್ರ ತಾಲೂಕು ಘಟಕದ ಪದಾಧಿಕಾರಿಗಳ ಜವಾಬ್ದಾರಿ ಘೋಷಿಸಿದರು. ಮಂಜು ಹಲಸೂರು(ತಾಲೂಕು ಸಂಚಾಲಕ), ರಮೇಶ್, ಮಂಜುನಾಥ್ ಆಚಾರ್ಯ(ಸಹ ಸಂಚಾಲಕ), ಅರ್ಮುಗಂ (ಗೋರಕ್ಷಾ ಸಂಚಾಲಕ), ಸಿ. ಉಮೇಶ್ (ಸಂಪರ್ಕ ಪ್ರಮುಖ್), ರಾಮಕೃಷ್ಣ(ಹೋಬಳಿ ಸಂಚಾಲಕ), ನವೀನ್ (ವಿದ್ಯಾರ್ಥಿ ಪ್ರಮುಖ್), ಪುಟ್ನಂಜ (ನಗರ ಸಂಚಾಲಕ), ಸೆಲ್ವರಾಜ್ (ರೇಣುಕಾನಗರ ಘಟಕ ಸಂಚಾಲಕ), ನಾಗರಾಜ್ (ಸಹ ಸಂಚಾಲಕ), ಜೀವನ್ (ಅಕ್ಷರನಗರ ಘಟಕ ಸಂಚಾಲಕ), ಪ್ರವೀಣ್, ಶರತ್ (ಸಹ ಸಂಚಾಲಕ), ಮುನಿಯ (ಹಲಸೂರು ಘಟಕ ಸಂಚಾಲಕ), ಗಣೇಶ್ (ಸಹ ಸಂಚಾಲಕ) ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಪ್ರಾಂತ ಸುರಕ್ಷಾ ಪ್ರಮುಖ್ ಖಾಂಡ್ಯ ಪ್ರವೀಣ್, ಮಹೇಶ್‌ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.