ಶಿವಮೊಗ್ಗ

ಲೋಕಕಲ್ಯಾಣಾರ್ಥ ಮಹಾರುದ್ರ ಯಾಗ

Published On :

ಕ.ಪ್ರ.ವಾರ್ತೆ    ಶಿವಮೊಗ್ಗ    ಮಾ. 2
ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಾಗೂ ಶ್ರೀ ಗಾಯತ್ರಿ ಪ್ರತಿಷ್ಠಾನದ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥ ಭಾನುವಾರ ಮಹಾರುದ್ರ ಪಠಣ ಹಾಗೂ ಮಹಾರುದ್ರ ಯಾಗ ನೆರವೇರಿತು.
ಕಳೆದ 25 ವರ್ಷಗಳಿಂದೀಚೆಗೆ ಶಿವಮೊಗ್ಗ ಶ್ರೀಶೃಂಗೇರಿ ಶಂಕರಮಠದ ವೇದಪಾಠ ಶಾಲೆಯಲ್ಲಿ ವೇ. ಬ್ರ. ಸೂರ್ಯನಾರಾಯಣ ಭಟ್ ಅವರಿಂದ ರುದ್ರಪಾಠ ಹೇಳಿಸಿಕೊಂಡ 350ಕ್ಕೂ ಹೆಚ್ಚು ಮಂದಿ ಏಕ ಕಂಠದಲ್ಲಿ ರುದ್ರಪಠಣ ಮಾಡಿದ್ದು ವಿಶೇಷ.
ಇದೇ ಸಂದರ್ಭ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ನಡೆದ ಮಹಾರುದ್ರ ಯಾಗದಲ್ಲಿ ಸೂರ್ಯನಾರಾಯಣ ಶರ್ಮ, ಗಣಪತಿ ಅಡಿಗ, ಅ.ಪ. ರಾಮಭಟ್ಟ, ಗಣೇಶ ಭಟ್ ಸೇರಿದಂತೆ ಅನೇಕ ಋತ್ವಿಜರು ಪಾಲ್ಗೊಂಡಿದ್ದರು. ಹಂದಲಸು ಲಕ್ಷ್ಮೀನಾರಾಯಣ ಭಟ್, ಪದ್ಮನಾಭ ಭಟ್, ಡಾ. ವೆಂಕಟರಾವ್, ಸುಬ್ರಹ್ಮಣ್ಯ, ನಗರಸಭಾ ಸದಸ್ಯೆ ಸುರೇಖಾ ಮುರಳೀಧರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಭಾಂಗಣ:  ಹೋಮದ ಪೂರ್ಣಾಹುತಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ನಟರಾಜ ಭಾಗವತ್, ಶ್ರೀಗಾಯತ್ರಿ ಮಾಂಗಲ್ಯ ಮಂದಿರ ನಿರ್ಮಿಸುವಾಗ ಅನೇಕರು ತಮ್ಮ ಸಂಕಟ ತೋಡಿಕೊಂಡಿದ್ದರು. ಈ ಕಲ್ಯಾಣ ಮಂದಿರ ಆರ್ಥಿಕವಾಗಿ ಹೊರೆಯಾಗಬಹುದು. ದೊಡ್ಡ ಮಧ್ಯಮ, ಕೆಳಮಧ್ಯಮ ವರ್ಗದವರಿಗೆ ಆರ್ಥಿಕವಾಗಿ ಸಮಸ್ಯೆಯಲ್ಲಿ ಇರುವವರಿಗಾಗಿ ಸಣ್ಣ ಕಲ್ಯಾಣ ಮಂದಿರ ಬೇಕೆಂಬ ಅಪೇಕ್ಷೆ ಪಟ್ಟಿದ್ದರು. ಅದರಂತೆ ಸಣ್ಣ ಪ್ರಮಾಣದ ಕಾರ್ಯಕ್ರಮ ನಡೆಸಲು ಯೋಗ್ಯವಾದಂತಹ ಸಭಾಂಗಣವನ್ನು ಮಹಾಸಭಾದಿಂದ ನಿರ್ಮಿಸಲಾಗುತ್ತಿದೆ. ಮುಂದಿನ ಜನವರಿಯಲ್ಲಿ ಲೋಕಾರ್ಪಣೆ ಮಾಡುವ ಸಂಕಲ್ಪ ತೊಟ್ಟಿದ್ದು, ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ವಸಂತ ವೇದ ಶಿಬಿರ:  ಬೇಸಿಗೆ ರಜಾ ಸಮಯದಲ್ಲಿ ಬ್ರಾಹ್ಮಣ ಸಮಾಜದ ಮಕ್ಕಳಿಗೆ ವಸಂತ ವೇದ ಶಿಬಿರ ನಡೆಸಲಾಗುತ್ತಿದೆ. ಒಂದು ತಿಂಗಳ ಕಾಲ ನಡೆಯುವ ವೇದ ಶಿಬಿರದಲ್ಲಿ 10 ರಿಂದ 20 ವರ್ಷ ವಯಸ್ಸಿನವರು ಪಾಲ್ಗೊಳ್ಳಬಹುದು. ಏ.15 ರಿಂದ ಆರಂಭವಾಗಿ ಮೇ 15 ರವರೆಗೆ ನಡೆಸಲಾಗುತ್ತದೆ. ಯೋಗ, ಭಗವದ್ಗೀತೆ, ವೇದ ಉಪನಿಷತ್ ಇತ್ಯಾದಿಗಳನ್ನು ಈ ಸಂದರ್ಭ ಹೇಳಿಕೊಡಲಾಗುತ್ತದೆ ಎಂದು ವಿವರಿಸಿದರು.
ಬ್ರಾಹ್ಮಣ ಮಹಾಸಭಾ ಮುಂದಿನ ದಿನಗಳಲ್ಲಿ ಧಾರ್ಮಿಕ, ಸಾಮಾಜಿಕ, ಸಂಘಟನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸಮಾಜದ ಎಲ್ಲಾ ದಿಕ್ಕುಗಳಿಂದ ಸಹಕಾರ ಅಪೇಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.