ರಣಾಂಗಣ ನೆನಪಿಸಿದ ಟಗರು ಕಾಳಗ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ. 2
ಇಲ್ಲಿನ ಸೈನ್ಸ್ ಮೈದಾನ ಭಾನುವಾರದ ಮಟ್ಟಿಗೆ ಅಕ್ಷರಶಃ ರಣಾಂಗಣ.
ಮೈಲಾರಿ, ಹನುಮ, ಹಠವಾದಿ, ಭದ್ರ, ಹುಚ್ಚಂಗಿ ಎಲ್ಲಮ್ಮ, ಬಹದ್ದೂರ್, ರಾಗ, ಚೌಡೇಶ್ವರಿ ಹೀಗೆ ನೂರಾರು ಜಟ್ಟಿಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಹಣೆ ಕುಟ್ಟಿ ಬಿರಿಯುವಂತೆ ಕುಟ್ಟಿಕೊಂಡರು, ತಮ್ಮ ಶಕ್ತಿ ಪ್ರದರ್ಶನದ ಜೊತೆಗೆ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನೂ ರಂಜಿಸಿದರು.
ಇದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಟಗರಿನ ಕಾಳಗದ ಮುಖ್ಯಾಂಶ.
ಎಸ್.ಎಸ್.ಭರ್ಮಪ್ಪನವರ ಸ್ಮರಣಾರ್ಥವಾಗಿ ಹಮ್ಮಿಕೊಂಡ ಟಗರಿನ ಕಾಳಗಕ್ಕೆ ತಮ್ಮ ಟಗರಿನೊಂದಿಗೆ ಬೇರೆ ಬೇರೆ ಊರುಗಳಿಂದ ಟಗರುಗಳೊಂದಿಗೆ ಮಾಲಿಕರು ಬಂದಿದ್ದರು. ಶಿಕಾರಿಪುರ, ಸಾಗರ, ಸೊರಬ, ಭದ್ರಾವತಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಟಗರುಗಳು ಬಂದಿದ್ದವು.
ಒಂದಕ್ಕಿಂತ ಒಂದು ಟಗರು ಆಕರ್ಷಕ, ರೌದ್ರಕಳೆ, ಹೋರಾಟದ ಕಿಚ್ಚು. ಇನ್ನು ಸ್ಪರ್ಧಾ ಕಣದಲ್ಲಿ ಧುಮುಕುತ್ತಿದ್ದಂತೆಯೇ ರೋಮಾಂಚಕತೆ. ಈ ಕ್ಷಣಗಳನ್ನು ತುಂಬಿಕೊಂಡ ಪ್ರೇಕ್ಷಕರು ಕೇಕೆ ಚಪ್ಪಾಳೆಗಳೊಂದಿಗೆ ಖುಷಿಪಟ್ಟರು.
ಕೆಲವರಂತೂ 10-20 ರುಪಾಯಿ ಬೆಟ್ಟಿಂಗ್ ಕಟ್ಟಿದ್ದು ವಿಶೇಷ. ಮರಿ ಕುರಿ, 2 ಹಲ್ಲಿನ ಕಾಳಗ, 8 ಹಲ್ಲಿನ ಕಾಳಗ, 4 ಹಲ್ಲಿನ ಮತ್ತು 6 ಹಲ್ಲಿನ ಕಾಳಗಳು ನಡೆದವು. ಅಂದರೆ ಟಗರಿನ ಹಲ್ಲುಗಳ ಆಧಾರದ ಮೇಲೆ ಸ್ಪರ್ಧೆ ನಡೆಯಿತು. ಕೆಲವು ಬಲಿಷ್ಠ ಟಗರು ಸ್ಪರ್ಧೆಗೆ ಬಂದೊಡನೆ ಸೊಣಕಲು ಟಗರುಗಳು ಕಾಲ್ಕಿತ್ತ ಪ್ರಸಂಗಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

