ಶೇ.48.47ರಷ್ಟು ಮತದಾನ
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ 19ನೇ ವಾರ್ಡ್‌ಗೆ ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಶೇ.48.47ರಷ್ಟು ನೀರಸ ಮತದಾನವಾಗಿದೆ. ಇಲ್ಲಿನ ವಿನೋಬನಗರ, ಯಲ್ಲಮ್ಮ ನಗರ ಒಳಗೊಂಡ 19ನೇ ವಾರ್ಡ್‌ಗೆ ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸಾವಿತ್ರಮ್ಮ ಕರಿಬಸಪ್ಪ ಅಕಾಲಿಕ ನಿಧನರಾಗಿದ್ದ ಹಿನ್ನೆಲೆ ಭಾನುವಾರ ಉಪ ಚುನಾವಣೆ ನಡೆಯಿತು. ಬಿಸಿಎಂ 2(ಎ)ಗೆ ಮೀಸಲಾಗಿದ್ದ ಕಾಂಗ್ರೆಸ್ಸಿನಿಂದ ಆಶಾ ಉಮೇಶ, ಬಿಜೆಪಿಯಿಂದ ಬಸಮ್ಮ ಹನುಮಂತಪ್ಪ ಹಾಗೂ ಜೆಡಿಎಸ್‌ನಿಂದ ದಿಲ್‌ಶದ್ ಖಾನಮ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಉಪ ಚುನಾವಣೆಗೆ ಒಟ್ಟು 7071 ಮತದಾರರಿದ್ದರೂ, ಶೇ.48.47ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಶೇ.52.43ರಷ್ಟು ಮತ ಚಲಾವಣೆಯಾಗಿಲ್ಲ. ಉಪಚುನಾವಣೆಗೆ ವಾರ್ಡ್ ಜನತೆ ನೀರಸ ಪ್ರತಿಕ್ರಿಯೆ ತೋರಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಉಪ ಚುನಾವಣೆಗೆ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಮತದಾರರು ಬಂದು, ಮತ ಚಲಾ ಯಿಸುವ ಮನೋ ಭಾವ ತೋರದಿದ್ದುದು ಸ್ಪಷ್ಟವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

