ಶಿವಮೊಗ್ಗ

ಮಗನನ್ನೂ ಪೊಲೀಸ್ ಮಾಡ್ತೇನೆ: ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ

Published On :

ಶಿವಮೊಗ್ಗ: ನನ್ನ ಮಗಗನ್ನೂ ಪೊಲೀಸನನ್ನಾಗಿ  ಮಾಡುತ್ತೇನೆ, ಬಂಡೆಯವರ ಆದರ್ಶವನ್ನು ಅವನಲ್ಲಿ ತುಂಬುತ್ತೇನೆ ಎಂದು ಹುತಾತ್ಮರಾದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಯವರ ಪತ್ನಿ ಮಲ್ಲಮ್ಮ ಹೇಳಿದರು.
ತುಂಗಾ ಕಲ್ಚರಲ್ ಸಂಸ್ಥೆ ಭಾನುವಾರ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡ ಸೆಲ್ಯೂಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ನನ್ನ ಪತಿ ಮಲ್ಲಿಕಾರ್ಜುನ ಬಂಡೆಯವರು ಆದರ್ಶ, ದಕ್ಷ, ನಿಷ್ಟಾವಂತ ಅಧಿಕಾರಿಯಾಗಿದ್ದರು. ನನ್ನ ಮಗನಿಗೂ ಈ ಗುಣಗಳನ್ನು ಬೆಳೆಸುತ್ತೇವೆ. ಎಲ್ಲರೂ ಪೊಲೀಸ್ ಕೆಲಸ ಬೇಡವೆಂದು ಹೇಳುವಾಗ ನನ್ನ ಮಗನನ್ನು ಆದರ್ಶ ಪೊಲೀಸ್ ಯೋಧನನ್ನಾಗಿ ಮಾಡಿಯೇ ತೀರುತ್ತೇನೆ ಎಂದು ಮಲ್ಲಮ್ಮ ಹೇಳಿದರು.
ಮಲ್ಲಿಕಾರ್ಜುನ ಬಂಡೆಯವರ ಹೆಸರಿನಲ್ಲಿ ಪ್ರತಿಷ್ಠಾನ ರೂಪಿಸುತ್ತಿದ್ದು, ಇದರಡಿಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಯೋಜನೆ ಹಾಕಿಕೊಳ್ಳುತ್ತೇವೆ. ಇದಕ್ಕೆ ನಾಡಿನ ಜನರ ಸಹಕಾರ ಬೇಕೆಂದರು.
ಸನ್ಮಾನ: ಸೇವೆಯಲ್ಲಿ ಅಪರೂಪದ ಸೇವೆ ಮಾಡಿದಂತೆ ಪೊಲೀಸ್ ಸಿಂದಿಯವರಾದ ಶಿವಪುತ್ರಪ್ಪ, ರಾಜಪ್ಪ, ತುಕಾರಾಂ, ಟಿ.ರಮೇಶ್, ಕೃಷ್ಣಮೂರ್ತಿ(ಡಿಚ್ಚಿ), ಎಂ.ವಿ.ಗೋಪಾಲ್, ಕೆ.ಚಂದ್ರಪ್ಪ, ಎಸ್.ರಮೇಶ್, ಕೃಷ್ಣಮೂರ್ತಿ, ಪ್ರಸನ್ನ ಎಸ್.ಕೆ. ಅವರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು.
  ಕರ್ತವ್ಯದಲ್ಲಿದ್ದಾಗ ಮೃತರಾದ ಮೂವರು ಪೊಲೀಸ್ ಸಿಬ್ಬಂದಿ ಎಚ್.ಶಂಕರಪ್ಪ, ರಾಘವೇಂದ್ರ, ವಿಲ್ಫರ್ಡ್ ಡಿಕಾಸ್ಟ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಲಾಯಿತು. ಮೃತ ಸಿಬ್ಬಂದಿ ಪತ್ನಿಯರನ್ನು ಗೌರವಿಸಲಾಯಿತು.  ಹೆಚ್ಚುವರಿ ಎಸ್ಪಿ ದಯಾಳು, ಫಣಿರಾಜ್, ಬಳ್ಳೆಕೆರೆ ಸಂತೋಷ್, ಜನಾರ್ದನ ಪೈ, ಅರುಣಾದೇವಿ, ತೇಜಸ್ವಿನಿ ರಾಘವೇಂದ್ರ, ಷಡಾಕ್ಷರಿ ಇದ್ದರು.
 ಬಂಡೆ ಹೆಸರಿನಲ್ಲಿ ರಚನೆಯಾಗುತ್ತಿರುವ ಪ್ರತಿಷ್ಠಾನಕ್ಕೆ ತುಂಗಾ ಕಲ್ಚರಲ್ ಸಂಸ್ಥೆಯು 25 ಸಾವಿರ ರುಪಾಯಿ ದೇಣಿಗೆ ನೀಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.