ಕಾಂಗ್ರೆಸ್ನಿಂದ ಶಿಲಾನ್ಯಾಸ ಕಾರ್ಯಕ್ರಮ: ಆಪ್ ಪ್ರತಿಭಟನೆ
ಕ.ಪ್ರ.ವಾರ್ತೆ, ಸಾಗರ, ಮಾ.5
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ಸೂಚನೆ ಇದ್ದರೂ ಕಾಂಗ್ರೆಸ್ ಪಕ್ಷದಿಂದ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿರುವ ಸಾರ್ವಜನಿಕರಿಗೆ ವಿವಿಧ ಕಾರ್ಯಕ್ರಮಗಳ ಶಿಲಾನ್ಯಾಸ ನಡೆಯುತ್ತಿರುವ ನೆಹರೂ ಮೈದಾನದ ಮೂಲೆಯಲ್ಲಿ ಶಾಮಿಯಾನ ಅಳವಡಿಸಿ ಊಟ ತಯಾರಿಸಿ ಬಡಿಸುತ್ತಿರುವ ವಿರುದ್ಧ ಆಮ್ ಆದ್ಮಿ ಪಕ್ಷದ ಮುಂಡರು ಪ್ರತಿಭಟನೆ ನಡೆಸಿದರು.
ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಧಿಕ್ಕಾರ ಕೂಗಿದ ಆಮ್ ಆದ್ಮಿ ಮುಖಂಡರು ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧವೂ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಈ ಸಂದರ್ಭ ನೀತಿ ಸಂಹಿತೆಗೂ ಮುಂಚಿತವಾಗಿ ತಯಾರಿಸಿರುವ ಊಟ ವಿತರಣೆಗೆ ಅಡ್ಡಿಪಡಿಸುತ್ತೀರಾ? ಹಾಗಾದರೆ ಹಸಿದ ನಮಗೆ ನೀವೇ ಊಟ ಹಾಕಿಸಿ ಎಂದು ಊಟಕ್ಕೆ ತಟ್ಟೆ ಹಿಡಿದು ನಿಂತಿದ್ದ ಸಾರ್ವಜನಿಕರು ಆಮ್ ಆದ್ಮಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ಒಂದು ಹಂತದಲ್ಲಿ ಆಮ್ ಆದ್ಮಿ ಮುಖಂಡ ಎನ್.ಡಿ. ವಸಂತಕುಮಾರ್ ಅವರನ್ನು ತಳ್ಳಿ ಎಳೆದಾಡಿದರು. ಪೊಲೀಸರು ಮಧ್ಯ ಪ್ರವೇಶಿಸಿ ಘರ್ಷಣೆಯನ್ನು ತಡೆದು ಊಟ ವಿತರಣೆಗೆ ಬ್ರೇಕ್ ಹಾಕಿದರು.
ತಯಾರಿಸಿದ ಅಡುಗೆ ಪದಾರ್ಥಗಳನ್ನು ತರಾತುರಿಯಲ್ಲಿ ಸಮೀಪದ ವೀರಶೈವ ಹಾಸ್ಟೆಲ್ ಆವರಣಕ್ಕೆ ಸಾಗಿಸಿ ಊಟ ವಿತರಿಸಿದರು. ಇದೂ ಕೂಡ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಿದ ತಹಸೀಲ್ದಾರ್ ಭಾಗ್ಯಲಕ್ಷ್ಮಿ ಪ್ರಕರಣ ದಾಖಲಿಸುವ ಮುನ್ನೆಚ್ಚರಿಕೆ ನೀಡಿದರು.
--
ರಥೋತ್ಸವ
ಸೊರಬ: ಇಲ್ಲಿನ ಕುಬಟೂರಿನಲ್ಲಿ ದ್ಯಾಮವ್ವ ದೇವಿಯ ರಥೋತ್ಸವ ಬುಧವಾರ ನಡೆಯಿತು. ಬೆಳಗ್ಗೆ 6 ಗಂಟೆಗೆ ವಿವಿಧ ಸಾಂಸ್ಕೃತಿಕ, ಕಲಾ ತಂಡಗಳ ಪುರ ಮೆರವಣಿಗೆಯೊಂದಿಗೆ ದೇವಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಪುತ್ರ ಅರ್ಜುನ್, ಕುಟುಂಬ ವರ್ಗದೊಂದಿಗೆ ಪೂಜೆ ಸಲ್ಲಿಸಿ, ನೂತನ ರಥ ನಿರ್ಮಿಸಲು 2 ಲಕ್ಷ ದೇಣಿಗೆ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಕೆ.ಎಸ್. ಫಾಲಾಕ್ಷಪ್ಪ, ಜಿಪಂ ಮಾಜಿ ಸದಸ್ಯ ಪಿ.ಎಸ್.ಪ್ರಶಾಂತ್, ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಾ.6 ರ ಗುರುವಾರ ವಿಕ್ರಮ್ ಆರ್ಕೆಸ್ಟ್ರಾರವರಿಂದ ಮನೋರಂಜನೆ, ಮಾ.7 ರಂದು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಯಲು ಜಂಗಿ ಕುಸ್ತಿಗಳು, ಮಾ. 8 ರಂದು ಎಸ್.ಸಿ. ಸೈದೂರು ಸಾಗರ ಇವರಿಂದ ಹಾಸ್ಯ, ಹರಿಕಥೆ, ಮಾ.ಕೆ.ಆರ್. ಹಿರೇಮಠ ಹಾವೇರಿ ಇವರಿಂದ ಜಾನಪದ ಗೀತೆ, ಕಿರುನಾಟಕ, ಹಾಸ್ಯ, ಮಾ.10 ರಂದು ಡ್ಯಾನ್ಸ್ - ಡ್ಯಾನ್ಸ್ ಕಾರ್ಯಕ್ರಮ, ಮಾ. 11ರ ಮಂಗಳವಾರ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಲಿವೆ ಎಂದು ಜಾತ್ರಾ ಸಮಿತಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

