ಶಿವಮೊಗ್ಗ

ತೀರ್ಥಹಳ್ಳಿ-ಮಲ್ಪೆ, ಆಗುಂಬೆ ಘಾಟಿ ರಸ್ತೆ ಹೈವೆ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.5
ಆಗುಂಬೆ ಘಾಟಿ ರಸ್ತೆಯೂ ಸೇರಿದಂತೆ ತೀರ್ಥಹಳ್ಳಿಯಿಂದ ಮಲ್ಪೆವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿಗಣಿಸಬೇಕೆಂಬ ರಾಜ್ಯ ಸರ್ಕಾರದ ಕೋರಿಕೆಗೆ ಕೇಂದ್ರ ಇದೀಗ ಅನುಮತಿ ನೀಡಿದೆ. ಇನ್ನು ಮುಂದೆ ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಪಟ್ಟಿಯಲ್ಲಿ ಬರಲಿದೆ.
ರಾಜ್ಯ ಲೋಕೋಪಯೋಗಿ ಖಾತೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರು, ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಆಗುಂಬೆಯಿಂದ ಮಲ್ಪೆವರೆಗಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದರು.
ಪ್ರಸ್ತುತ ತೀರ್ಥಹಳ್ಳಿಯಿಂದ ಮಲ್ಪೆವರೆಗಿನ ರಸ್ತೆಯು 5.5 ಮೀಟರ್ ಅಗಲವಿದೆ.  ಇದನ್ನು ಒಟ್ಟು 10 ಮೀಟರ್ ವಿಸ್ತರಿಸಿ ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕಾಗಿ 80 ಕೋಟಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಚತುಷ್ಪಥ:  ಶಿವಮೊಗ್ಗದಿಂದ ತುಮಕೂರುವರೆಗಿರುವ 185 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕೆಂಬ ಸ್ಥಳೀಯ ಜನಪ್ರತಿನಿಧಿಗಳ ಕೋರಿಕೆಯಂತೆ ಈಗಾಗಲೇ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗಿದೆ. ಒಟ್ಟು 326 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಶಿವಮೊಗ್ಗ- ಚಿತ್ರದುರ್ಗವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನೂ ಸಹ ದ್ವಿಪಥ ರಸ್ತೆಯಾಗಿಯೇ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಕೆಶಿಪ್ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿದ್ದ ಶಿವಮೊಗ್ಗ-ಹಾನಗಲ್ ರಸ್ತೆ ಅಭಿವೃದ್ಧಿಗೆ ಈ ಮೊದಲು ಹೆಚ್ಚುವರಿ ಮೊತ್ತಕ್ಕೆ ಟೆಂಡರ್ ಅನುಮೋದನೆ ಆಗಿತ್ತು. ಇದನ್ನು ರದ್ದುಪಡಿಸಿ ರಿಟೆಂಡರ್ ಕರೆಯಲು ಉದ್ದೇಶಿಸಲಾಗಿತ್ತು. ಇದರ ಬದಲು 8 ಕೋಟಿ ವೆಚ್ಚದಲ್ಲಿ ಇದನ್ನು ವಾಹನ ಸಂಚಾರ ಯೋಗ್ಯ ರಸ್ತೆಯನ್ನಾಗಿ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಹಾಪೌರರಾದ ಖುರ್ಷಿದಾ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕರಿಯಣ್ಣ, ಮುಖಂಡರಾದ ಮಂಜುನಾಥ ಭಂಡಾರಿ ಮತ್ತಿತರರು ಇದ್ದರು.
ಶಿವಮೊಗ್ಗಕ್ಕೆ ಅನುದಾನ: ಶಿವಮೊಗ್ಗ ನಗರಕ್ಕೆ ಸರ್ಕಾರವು ಅಪೆಂಡಿಕ್ಸ್ ಇ ಕಾಮಗಾರಿಗೆ ಅನುದಾನ ಮಾಡಿದೆ. ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಅವುಗಳನ್ನು ಪ್ರಮುಖ ಕಾಮಗಾರಿಗಳು ಇಂತಿವೆ.
- ಶಿವಮೊಗ್ಗ ನಗರದ 100 ಅಡಿ ವರ್ತುಲ ರಸ್ತೆ, ನ್ಯೂಮಂಡ್ಲಿಯಿಂದ ತುಂಗಾ ಚಾನಲ್‌ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ. ಮೊತ್ತ 3 ಕೋಟಿ.
- ಶಿವಮೊಗ್ಗ ನಗರದ 100 ಅಡಿ ವರ್ತುಲ ರಸ್ತೆ, ಉಷಾ ನಸಿಂಗ್ ಹೋಂನಿಂದ ಪೊಲೀಸ್ ಚೌಕಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ, ಮೊತ್ತ 2 ಕೋಟಿ.
- ಹೊಸಪೇಟೆ- ಶಿವಮೊಗ್ಗ ರಸ್ತೆ (ರಾ.ಹೆ.25) ಕಿ.ಮೀ. 191.56 ರಿಂದ 194 ಕಿ.ಮೀ.ವರೆಗೆ ಶಿವಮೊಗ್ಗ ನಗರ ಪರಿಮಿತಿಯಲ್ಲಿ (ಬಾಲರಾಜ ಅರಸ್ ರಸ್ತೆ) ಅಭಿವೃದ್ಧಿಪಡಿಸುವುದು. ಮೊತ್ತ 2.2 ಕೋಟಿ.
- ಶಿವಮೊಗ್ಗ ನಗರದ ನೆಹರು ರಸ್ತೆಯನ್ನು ಚತುಷ್ಪಥ ಸಿಮೆಂಟ್ ಕಾಂಕ್ರೀಟ್ ರಸ್ತೆಯ 2ನೇ ಹಂತದ ಕಾಮಗಾರಿ (ದುರ್ಗಿಗುಡಿ ಶನೇಶ್ವರ ದೇವಸ್ಥಾನದಿಂದ ಲಕ್ಷ್ಮೀ ಟಾಕೀಸ್‌ವರೆಗೆ) ಮೊತ್ತ 2 ಕೋಟಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.