ಕಲಾವಿದ, ವಿದ್ವಾಂಸ ಒಂದೇ ನಾಣ್ಯದ ಎರಡು ಮುಖ
ಕನ್ನಡಪ್ರಭ ವಾರ್ತೆ, ಸಾಗರ, ಮಾ.6
ಯಕ್ಷಗಾನ, ರಂಗಭೂಮಿ ಕಂಡ ಅದ್ಭುತ ಪ್ರತಿಭೆಗಳಲ್ಲಿ ಕೆರೆಮನೆ ಶಂಭು ಹೆಗಡೆ ಸಹ ಒಬ್ಬರು. ನವರಸಗಳಿಂದ ಕೂಡಿದ ಅಭಿನಯದ ಮೂಲಕ ಶಂಭು ಹೆಗಡೆಯವರು ಪಾತ್ರವೇ ತಾವಾಗಿ ಪ್ರೇಕ್ಷಕರನ್ನು ಕಲಾಲೋಕಕ್ಕೆ ಕೊಂಡೊಯ್ಯುತ್ತಿದ್ದರು ಎಂದು ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಎಚ್.ಆರ್. ಅಮರನಾಥ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಡಾ. ಜಿ.ಎಸ್. ಭಟ್ ಮತ್ತು ಮಕ್ಕಳು ನಿಧಿ ಪ್ರಕಾಶನ ವತಿಯಿಂದ ನೀಡಿದ ದತ್ತಿ ಕಾರ್ಯಕ್ರಮದಲ್ಲಿ ಕೆರೆಮನೆ ಶಂಭು ಹೆಗಡೆ ಅಂತರಂಗ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಅಭಿಮಾನ ಇರಲಿ: ಕಲಾವಿದರು ಹಾಗೂ ವಿದ್ವಾಂಸರು ನಾಣ್ಯವೊಂದರ ಎರಡು ಮುಖವಿದ್ದಂತೆ. ಕಲಾವಿದ ಪಾತ್ರವೊಂದರ ಆತ್ಮಶಿಲ್ಪ ಕೆತ್ತುವಲ್ಲಿ ವಿದ್ವಾಂಸರ ಸೂಚನೆ ಸಹಕಾರಿಯಾಗುತ್ತದೆ. ವ್ಯವಹಾರಿಕ ಯಶಸ್ಸಿಗಾಗಿಯೂ ಇವರಿಬ್ಬರ ನಡುವೆ ಕೊಡುಕೊಳ್ಳುವಿಕೆ ಅಗತ್ಯ. ಇದರಿಂದ ಇಬ್ಬರಿಗೂ ಪ್ರಯೋಜನವಾಗುವುದರ ಜತೆಗೆ ಕಲಾ ಮಾಧ್ಯಮಕ್ಕೂ ಪ್ರಯೋಜನವಾಗುತ್ತದೆ. ಕಲಾವಿದರ ಕುರಿತು ಅಭಿಮಾನ ಇರಬೇಕು ಆದರೆ ದುರಭಿಮಾನ ಇರಬಾರದು ಎಂದರು.
ಕಪೌರಾಣಿಕ ಪ್ರಸಂಗಗಳನ್ನು ಮೂಲ ಆಶಯಕ್ಕೆ ಭಂಗ ಬರದಂತೆ ಪ್ರದರ್ಶಿಸಿದ್ದು ಮತ್ತು ಸಮಯ ಮಿತಿ ಪ್ರದರ್ಶನಗಳಿಗೆ ಬದ್ಧರಾದದ್ದು ಶಂಭು ಹೆಗಡೆಯವರ ಹೆಚ್ಚುಗಾರಿಕೆ ಎಂದು ಹೇಳಿದರು.
ಪರಿಷತ್ತಿನ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎಂಡಿಎಫ್ ಸಹ ಕಾರ್ಯದರ್ಶಿ ರವೀಂದ್ರ ಸಭಾಹಿತ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ರಂಗನಾಥ ಹಾಜರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

