'ಸಂಗೀತಕ್ಕೆ ಅಪರಾಧ ಕುಗ್ಗಿಸುವ ಶಕ್ತಿ'
ಜೋಗ್ ಫಾಲ್ಸ್: ಸಂಗೀತಕ್ಕೆ ಅಪರಾಧ ಕುಗ್ಗಿಸುವ ಶಕ್ತಿ ಇದೆ. ಇಟಲಿಯ ಸರ್ವಾಧಿಕಾರಿ ಮುಸಲೇನಿಯಂತವರೇ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಮಾರುಹೊಗಿದ್ದರು ಎಂಬುದಾಗಿ ಮೈಸೂರು ಅರಮನೆಯ ವಿದ್ವಾನ್ ಎ.ವಿ. ದತ್ತಾತ್ರೇಯ ತಿಳಿಸಿದರು.
ಇಲ್ಲಿನ ದ್ವಿಮುಖ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವಾಲಯ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತ ಪ್ರತಿನಿತ್ಯವೂ ಮನೆಯಲ್ಲಿ ನಿತ್ಯೋತ್ಸವ ಕಾರ್ಯಕ್ರಮವಾಗಬೇಕು. ಇದರಿಂದ ಮನಸ್ಸಿಗೆ ಏಕಾಗ್ರತೆ, ದೇವರಲ್ಲಿ ಭಕ್ತಿ- ಭಾವ ಬೆಳೆದು, ಸ್ವಾರ್ಥಸಹಿತ ರಹಿತ ವ್ಯಕ್ತಿಯನ್ನಾಗಿಸಲು, ಎಲ್ಲರೊಂದಿಗೆ ಪ್ರೀತಿ- ಸಂಯಮದಿಂದ ವರ್ತಿಸುವಂತಾಗಲು ಬೆಳೆಸಿಕೊಳ್ಳಲು ಸಂಗೀತದ ಸತತ ಅಭ್ಯಾಸದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಗಾಯಕಿ ತೇಜಸ್ವಿನಿ ಮಾತನಾಡಿ, ನಮ್ಮ ತಾಯಿಯ ತವರೂರು ಜೋಗ್ ಫಾಲ್ಸ್ ಆಗಿದ್ದು, ಇಲ್ಲಿನ ಚಾಮುಂಡೇಶ್ವರಿ ದೇವಿಯ ಸನ್ನಿದಾನದಲ್ಲಿ ನನಗೆ ಸೇವೆ ಸಲ್ಲಿಸುವ ಯೋಗ ಬಂದಿದೆ. ಮೈಸೂರು ನಾಡದೇವತೆ ಚಾಮುಂಡೇಶ್ವರಿಗೂ ಇಲ್ಲಿನ ದ್ವಿಮುಖ ಚಾಮುಂಡೇಶ್ವರಿಗೂ ಅವಿನಾವಭಾವ ಸಂಬಂಧವಿದೆ ಎಂದರು.
ಸಂಗೀತದಿಂದ ಮನುಷ್ಯನ ಉದ್ವೇಗ ದೂರಾಗಿ ಮನುಷ್ಯನ ದೃಢತೆ ಹೆಚ್ಚಿ ಆರೋಗ್ಯ ವೃದ್ಧಿಸುವುದು ಎಂದರು. ಪಕ್ಕವಾದ್ಯದಲ್ಲಿ ವಿದ್ವಾನ್ ಕುಮಾರ್ ಜಿ.ಎಸ್. ಮೃದಂಗ, ವಿದ್ವಾನ್ ಶಾಂತಕುಮಾರ್ ವಯೋಲಿನ್‌ನಲ್ಲಿ ಸಹಕಾರ ನೀಡಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ಸಂಗೀತಾಸಕ್ತರು ಸಂಗೀತ ಲೋಕದಲ್ಲಿ ಸಂಭ್ರಮಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

