ಪಿಎಸ್‌ಐ ವರ್ತನೆ ಖಂಡಿಸಿ ಠಾಣೆ ಎದುರು ಪ್ರತಿಭಟನೆ
ಸೊರಬ: ಜನಪ್ರತಿನಿಧಿಯೋರ್ವರಿಗೆ ಪೊಲೀಸ್ ಅಧಿಕಾರಿ ಏಕವಚನದಲ್ಲಿ ಮಾತನಾಡಿದ್ದು, ಅಧಿಕಾರಿ ವಿರುದ್ಧ ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆ ಎದುರು ದಿಢೀರ್ ಪ್ರತಿಭಟನೆ ನಡೆಯಿತು.
ಜನರ ಸಮಸ್ಯೆಗೆ ನ್ಯಾಯ ಕೇಳಲು ಹೋದಾಗ ಪಿಎಸ್‌ಐ ಭೀಮನಗೌಡರ್ ತಮಗೆ ಏಕವಚನದಲ್ಲಿ ಮಾತನಾಡಿಸಿದರು ಎಂಬ ದೂರಿನ ಹಿನ್ನೆಲೆ ಜಿಪಂ ಸದಸ್ಯ ಗಂಗಾಧರಪ್ಪ ತಮ್ಮ ಬೆಂಬಲಿಗರ ಜತೆ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆಯವರೆಗೆ ಧರಣಿ ನಡೆಸಿದರು.
ಹಿನ್ನೆಲೆ: ಗುರುವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಉಳವಿಯ ಸಿಂಚನ ಹೋಟೆಲ್‌ನಲ್ಲಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಮಾಲು ಸಮೇತ ದಸ್ತಗಿರಿ ಮಾಡಿ ಪೊಲೀಸರು ಠಾಣೆಗೆ ಕರೆತರಲಾಗಿತ್ತು. ಗಂಗಾಧರಪ್ಪ ಅವರು ತಡರಾತ್ರಿ ಠಾಣೆಗೆ ಆಗಮಿಸಿ ಆರೋಪಿ ಮೇಲೆ ಕೇಸು ದಾಖಲಿಸದೆ ಬಿಡುಗಡೆ ಮಾಡಬೇಕೆಂದು ಒತ್ತಡ ಹೇರಿದ್ದರು. ಈ ವೇಳೆ ಪಿಎಸ್‌ಐ ಒರಟಾಗಿ ಮಾತನಾಡಿದರು ಎಂಬ ವಿಷಯ ಪ್ರತಿಭಟನೆಗೆ ಕಾರಣವಾಯಿತು.
ಘಟನೆಗೆ ಸಂಬಂಧಪಟ್ಟಂತೆ, ಜಿಪಂ ಸದಸ್ಯ ಹುಣವಳ್ಳಿ ಗಂಗಾಧರಪ್ಪ ವಿವರಣೆ ನೀಡಿ, ಕಳೆದ ರಾತ್ರಿ ಬಂಧಿತನಾಗಿರುವ ವ್ಯಕ್ತಿ ಇದರಲ್ಲಿ ಶಾಮಿಲಾಗಿರುವುದಿಲ್ಲ. ಪೊಲೀಸರು ಹಣದ ಬೇಡಿಕೆ ಇಟ್ಟು ವಿನಾಕಾರಣ ಅಮಾಯಕನನ್ನು ಬಂಧಿಸಿದ್ದಾರೆ. ಠಾಣೆಗೆ ಆಗಮಿಸಿದಾಗ ಪಿಎಸ್‌ಐ ಜನ ಪ್ರತಿನಿಧಿ ಎಂಬುದನ್ನೆ ಮರೆತು ಏಕವಚನದಲ್ಲೆ ಮಾತನಾಡಿ, ಅಗೌರದಿಂದ ನಡೆದುಕೊಂಡಿದ್ದಾರೆ ಎಂದರು.
ಮೇಲಧಿಕಾರಿಗಳು ಬರುವವರೆಗೂ ತಾವು ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತ ಅವರೊಂದಿಗೆ ಶುಕ್ರವಾರ ಬೆಳಗ್ಗೆ ಮಾಜಿ ಸಚಿವ ಎಚ್.ಹಾಲಪ್ಪ ಸೇರ್ಪಡೆಗೊಂಡರು.
ಸ್ಥಳಕ್ಕೆ ಆಗಮಿಸಿದ್ದ ಡಿವೈಎಸ್‌ಪಿ ಸೈಯದ್ ಇಸಾಕ್ ಅವರು ಪ್ರತಿಭಟನಾಕಾರರ ಅಹವಾಲನ್ನು ಆಲಿಸಿ, ನಂತರ ಇಲಾಖೆಯ ಭೀಮನಗೌಡ ಮತ್ತು ಎಚ್.ಗಂಗಾಧರಪ್ಪ, ಮಾಜಿ ಸಚಿವ ಎಚ್.ಹಾಲಪ್ಪ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಜಿಪಂ ಸದಸ್ಯ ಗುರುಕುಮಾರ್ ಪಟೇಲ್ ಹಾಗೂ ಕೆಲವು ಮುಖಂಡರ ಜತೆ ಸೇರಿ ಸಂಧಾನ ಸಭೆ ನಡೆಸಿ ವಾತಾವರಣ ತಿಳಿಗೊಳಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

