ಮೋದಿ, ರಾಹುಲ್ ಹೆಸರಲ್ಲಿ ಮತಯಾಚನೆ ನಾಚಿಕೆಗೇಡು
ಶಿವಮೊಗ್ಗ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಾವು ನಿಲ್ಲಿಸಿರುವ ಅಭ್ಯರ್ಥಿಗೆ ಮತ ಕೊಡಿ ಎಂದು ಕೇಳುತ್ತಿಲ್ಲ. ಮೋದಿ-ರಾಹುಲ್ ಗಾಂಧಿಗೆ ಮತ ಕೊಡಿ ಎನ್ನುತ್ತಿದ್ದಾರೆ. ಇದು ನಾಚಿಕೆಗೇಡು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ನಗರದಲ್ಲಿ ಸೋಮವಾರ ಸಂಜೆ ಅವರು ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ, ಮೋದಿ ಅವರ ಮಾತು ಪದೇಪದೇ ಚರ್ಚಿಸುವುದು ಅನಾವಶ್ಯಕ. ಅವರು ಗುಜರಾತ್ನಲ್ಲಿ ಯಾವ ರೀತಿಯ ಅಭಿವೃದ್ಧಿ ಮಾಡಿದ್ದಾರೆ ಅನ್ನೋದಲ್ಲ ಕೇಜ್ರಿವಾಲ್ ಹೇಳಿದ್ದಾರೆ.
ಅಲ್ಲಿ ರೈತರು ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯ ಗುಜರಾತ್. ಅವರಿಗೆ ಮತ ಕೊಡಬೇಕೇ ಎಂದು ಪ್ರಶ್ನಿಸಿದರು.
ಭಾರತ ಗೆಲ್ಲಿಸಲು ಮತ ನೀಡಿ ಅನ್ನುತ್ತಿದ್ದಾರೆ. ಆದರೆ, ಕರ್ನಾಟಕವನ್ನು ಉಳಿಸಲು ಯಾರಿಗೆ ಮತ ಕೊಡಬೇಕು ಅನ್ನೋದನ್ನು ನೀವೇ ತೀರ್ಮಾನಿಸಿ. ರಾಷ್ಟ್ರೀಯ ಪಕ್ಷಗಳಿಂದ ಈ ಕೆಲಸ ಸಾಧ್ಯವಿಲ್ಲ. ಜೆಡಿಎಸ್ ನಂತಹ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ ಎಂದರು.
ಬಗರ್ಹುಕುಂ ಸಮಸ್ಯೆ ಬಗೆಹರಿಸಲು ಅರಣ್ಯ ಕಾಯ್ದೆ ತಿದ್ದುಪಡಿ ಆಗಬೇಕಿದೆ.
ಅದಕ್ಕಾಗಿ ರಾಜ್ಯದಿಂದ 18-20 ಸಂಸದರರನ್ನು ಗೆಲ್ಲಿಸಿಕೊಡಬೇಕು. ರಾಷ್ಟ್ರೀಯ ಪಕ್ಷಗಳು ಬಗರ್ ಹುಕುಂ ಸಾಗುವಳಿದಾರರ ಪರ ಏನು ಮಾಡಿದ್ದಾರೆ ಎಂಬುದನ್ನು ಒಮ್ಮೆ ಚಿಂತಿಸಿ ಎಂದ ಅವರು, ಅಡಕೆ ಬೆಳೆಗಾರರ ಸಂಕಷ್ಟ ಪರಿಹರಿಸುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಆಗಿಲ್ಲ.
ನಾಲ್ಕುವರೆ ವರ್ಷದಿಂದ ಗೋರಕ್ ಸಿಂಗ್ ವರದಿ ಅನುಷ್ಟಾನ ಮಾಡಲು ಆಗಿಲ್ಲ ಎಂದು ಟೀಕಿಸಿದರು.
ರೈತರ ಬೆಳೆ ನಷ್ಟವಾದಾಗ ಎರಡು ರಾಷ್ಟ್ರೀಯ ಪಕ್ಷಗಳು ವೈಜ್ಞಾನಿಕ ಬೆಲೆ ನಿಗದಿ ಮಾಡದೇ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಹೊಸ ಆರ್ಥಿಕ ನೀತಿ ತರುವುದು ನಮ್ಮ ಗುರಿ. ಇದಕ್ಕೆ ದನಿಯಾಗಿ ಕೆಲಸ ಮಾಡಲು ನಮ್ಮನ್ನು ಆಯ್ಕೆ ಮಾಡಿ ಎಂದು ಕೋರಿದರು.
ಕಣ್ಣೀರಿಟ್ಟ ಮಧು
ಮಧು ಬಂಗಾರಪ್ಪ ಒಂದು ಸಂದರ್ಭದಲ್ಲಿ ತಾಯಿಯವರನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು. ಅವರನ್ನೇ ಅಭ್ಯರ್ಥಿ ಮಾಡಬೇಕು ಎಂಬ ಉದ್ದೇಶ ನಮ್ಮದಾಗಿತ್ತು. ಆದರೆ, ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಸರಿ ಇದ್ದಿದ್ದರೆ ಅವರೇ ನಿಲ್ಲುತ್ತಿದ್ದರು ಎನ್ನುತ್ತಾ ಹನಿಗಣ್ಣಾದರು. ಮಧು, ಗೀತಕ್ಕ ರಾಜಕೀಯಕ್ಕೆ ಹೊಸಬರು ಅಂತ ಕೆಲವರು ಹೇಳ್ತಾರೆ. ನಾನು ಸೊರಬದಲ್ಲಿ ಗೆದ್ದಿದ್ದು ಗೀತ ಶಿವರಾಜ್ಕುಮಾರ್ ಅವರಿಂದಲೇ. ಇಡೀ ಚುನಾವಣೆಯಲ್ಲಿ ಅವರು ನನ್ನನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

