ಶಿವಮೊಗ್ಗ

ನೌಕರಿ ಆಸೆ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಳ್ಳಿ'

Published On :

ಸೊರಬ: ಜಗತ್ತಿನ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರಿದಿದೆ. ಅದರಂತೆ ಕೃಷಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಬದಲಾವಣೆಗಳಿಗೆ ಸರ್ಕಾರ ಕೂಡ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಈ ನಿಟ್ಟಿನಲ್ಲಿ ಉನ್ನತ ಪದವಿ ಪಡೆದ ನಿರುದ್ಯೋಗಿ ಯುವಕರು ಸರ್ಕಾರಿ ಹುದ್ದೆಗಳಿಗಾಗಿ ಕಾಯದೆ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುಬೇಕು ಎಂದು ಪ್ರಗತಿಪರ ಕೃಷಿಕ ಡಾ. ಅಬ್ದುಲ್ ರಾವೂಫ್‌ಸಾಬ್ ಕರೆ ನೀಡಿದರು.
ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಇಫ್ಕೋ, ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಮತ್ತು ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಅನಾನಸ್ ಬೆಳೆಯಲ್ಲಿ ಗೊಬ್ಬರ ಬಳಕೆ- ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕೃಷಿಯಲ್ಲಿ ಸಾಧನೆಯ ಜತೆಗೆ ಅಭಿವೃದ್ಧಿ ಕಾಣಬಹುದು. ಕೃಷಿ ಬದುಕಿನಲ್ಲಿ ನಿಷ್ಠೆ, ಶ್ರದ್ಧೆ, ಧೈರ್ಯ ಮುಖ್ಯವಾಗಿದ್ದು, ಬೆಳೆ ಬೆಳೆಯುವಾಗ ಹೊಸತನ ಅಳವಡಿಸಿಕೊಳ್ಳುವುದರಿಂದ ಲಾಭದಾಯಕ ಫಸಲು ಪಡೆಯುವುದರ ಜತೆಗೆ ಜೀವನ ಮಟ್ಟವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದರು.
ವಿಜ್ಞಾನಿಗಳಾದ ಡಾ.ಹನುಮಂತಸ್ವಾಮಿ, ಡಾ. ನಾಗರಾಜಪ್ಪ ಅಡಿವಪ್ಪರ್ ಅವರು ಅನಾನಸ್ ಬೆಳೆಯ ಸಾಧಕ ಬಾಧಕ ಕುರಿತು ಸಮಗ್ರ ಮಾಹಿತಿ ನೀಡಿದರು.  ಇಫ್ಕೋ ಕರ್ನಾಟಕ ವಲಯ ಮಾರಾಟ ವ್ಯವಸ್ಥಾಪಕ ಕೆ.ಟಿ. ಮಂಜುನಾಥ್ , ಹಾಲಪ್ಪನವರ್, ಹಿರಿಯ ಕ್ಷೇತ್ರೀಯ ವ್ಯವಸ್ಥಾಪಕ ಎಚ್.ಕೆ. ರಮಾನಂದ, ಯೋಜನಾಧಿಕಾರಿ ಎ.ಜಿ. ಅನಿತಾ, ಸೊರಬ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆ. ರಾಮಚಂದ್ರ ಮಾತನಾಡಿದರು. ಅಧ್ಯಕ್ಷತೆಯನ್ನು ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಎಸ್. ಬಂಗಾರಸ್ವಾಮಿ ವಹಿಸಿದ್ದರು. ಎಂ.ಆರ್. ಕೃಪಾಶಂಕರ್, ಸುನೀಲ್‌ಕುಮಾರ್,  ಯೂಸೂಫ್‌ಸಾಬ್, ಕೆ.ನಿಂಗಪ್ಪ, ಅನಾನಸ್ ಬೆಳೆಗಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.