ಶಿವಮೊಗ್ಗ

ಗೀತಾ ಗೆಲ್ಲಿಸುವ ಜವಾಬ್ದಾರಿ ನಿಮ್ಮದೇ: ನಟ ಶಿವಣ್ಣ

Published On :

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮಾ. 23
ಚಿತ್ರನಟ ಶಿವರಾಜ್ ಕುಮಾರ್ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಶಿರಾಳಕೊಪ್ಪಕ್ಕೆ ಭೇಟಿ ನೀಡಿದರು.
ಬೆಂಗಳೂರಿನಿಂದ ದಾವಣಗೆರೆ ಮುಖಾಂತರ ಶಿರಾಳಕೊಪ್ಪ ಮುಖಾಂತರ ಸೊರಬಕ್ಕೆ ಹೋಗುವ ಮಾರ್ಗದಲ್ಲಿ ಶಿರಾಳಕೊಪ್ಪದಲ್ಲಿ ಕೆಲಸಮಯ ತಂಗಿದಾಗ ಸಂತೆ ದಿನವಾದ ಭಾನುವಾರ ಜೆಡಿಎಸ್ ಕಾರ್ಯಕರ್ತರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿತು.
ಒಂದು ಹಂತದಲ್ಲಿ ಕಾರಿನಿಂದ ಹೊರಬರಲು ಹರಸಾಹಸ ಪಡಬೇಕಾಯಿತು. ಆಗ ಪೋಲೀಸರು ಮತ್ತು ಕೆಲ ಜೆಡಿಎಸ್ ಮುಖಂಡ ಬಳಿಗಾರ್, ಚಂದ್ರಣ್ಣ ಸೇರಿದಂತೆ ಕಾರ್ಯಕರ್ತರು ಶಿವರಾಜ್ ಕುಮಾರ್ ಅವರಿಗೆ ಹೊರಬಂದು ಜನರೊಂದಿಗೆ ಬೆರೆಯಲು ಆಸ್ಪದ ಮಾಡಿಕೊಟ್ಟರು.
ನಂತರ ಶಿವರಾಜ್ ಕುಮಾರ್ ಜೊತೆಗಿದ್ದ ಗೀತಾ ಅವರು ಕಾರಿನಿಂದ ಹೊರಬಂದು ಜನಸ್ತೋಮದ ಕಡೆ ಕೈಬೀಸಿ ಜನತೆ ಸಹಕರಿಸುವಂತೆ ವಿನಂತಿಸಿದರು.
ನಿಮ್ಮ ಉಡಿಗೆ ಹಾಕಿದ್ದೇನೆ: ಮಾತನಾಡುವಂತೆ ಜನಸ್ತೋಮ ಶಿವರಾಜ್ ಕುಮಾರ್ ಅವರನ್ನು ಒತ್ತಾಯಿಸಿದಾಗ ಕಾರಿನ ಮೇಲೆ ನಿಂತು ಮಾತನಾಡಿದ ಶಿವರಾಜ್ ಕುಮಾರ್ ನನಗೆ ಅತ್ಯಂತ ಸಂತಸವಾಗಿದೆ, ಗೀತಾ ಅವರನ್ನು ನಿಮ್ಮ ಉಡಿಗೆ ಹಾಕಿದ್ದೇನೆ ನೀವೇ ಅವರನ್ನು ಪ್ರಚಾರ ಮಾಡಿ ಗೆಲ್ಲಿಸಬೇಕು. ಇದು ನನ್ನ ನಮ್ರ ವಿನಂತಿ ಎಂದು ಜನರಿಗೆ ಕೈಬೀಸಿ ಹೇಳುತ್ತಾ ಬಂಗಾರಪ್ಪನವರ ಹುಟ್ಟೂರು ಕುಬಟೂರಿಗೆ ಪ್ರಯಾಣ ಬೆಳೆಸಿದರು.
ಶಿವರಾಜ್ ಕುಮಾರ್ ಬರುವ ಸುದ್ದಿ ತಿಳಿಯುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಹಾಗೂ ಜನರು ಮಧ್ಯಾಹ್ನ 1 ಗಂಟೆಯಿಂದ ಕಾಯುತ್ತಿದ್ದರು. ಆದರೆ ಶಿವರಾಜ್ ಸಂಜೆ 4ಗಂಟೆ ಸುಮಾರು ಶಿರಾಳಕೊಪ್ಪ  ಪಟ್ಟಣಕ್ಕೆ ಆಗಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.