ಜನಪರ ಯೋಜನೆಗಳೇ ಶ್ರೀರಕ್ಷೆ
ತೀರ್ಥಹಳ್ಳಿ: ಕಾಂಗ್ರೆಸ್ ಪಕ್ಷ ತನ್ನ ಜನಪರ ಯೋಜನೆಗಳಿಂದಾಗಿ ದೇಶದಲ್ಲಿ ಒಳ್ಳೆಯ ಕೆಲಸ ಮಾಡಿದೆ. ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿದೆ. ಪಕ್ಷದ ಸಾಧನೆ ಗುರುತಿಸಿ ಜನ ಈ ಬಾರಿ ಕಾಂಗ್ರಸ್ಗೆ ಗೆಲವು ನೀಡಲಿದ್ದಾರೆ ಎಂದು ಲೋಕಸಭಾ ಅಭ್ಯರ್ಥಿ ಮಂಜುನಾಥ ಭಂಡಾರಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಭಾನುವಾರ ಕಾರ್ಯಕರ್ತರ ಸಭೆಗೆ ಆಗಮಿಸಿದ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಕಾರ್ಯಕರ್ತರು ತಮ್ಮಲ್ಲಿ ವಿಶ್ವಾಸವಿಟ್ಟಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದರು.
ಬಿಜೆಪಿ ಸೋಲಿಸಿ ಎನ್ನಬೇಕಾಗಿದೆ: ರಾಷ್ಟ್ರಮಟ್ಟದಲ್ಲಿ ಮೋದಿ ಏನೂ ಮಾಡಿಲ್ಲ. ಏನೂ ಮಾಡದ ಮೋದಿಯವರಿಗೆ ಮತ ನೀಡಿ ಎಂದು ಕೇಳುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರು ತಮಗೆ ಏಕೆ ಮತ ನೀಡಿ ಎಂದು ಕೇಳುತ್ತಿಲ್ಲ ಎಂದು ವ್ಯಂಗ್ಯವಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ದಂಡು ತಯಾರಾಗಿದೆ. ಮತದಾನದ ಯುದ್ಧ ಶುರುವಾಗಲಿದೆ. ದಿನವೂ ನಿಗದಿಯಾಗಿದೆ. ಇನ್ನು ಯುದ್ಧವೊಂದೇ ಬಾಕಿ. ಅದರಲ್ಲಿ ನಾವು ಖಂಡಿತಾ ಜಯಗಳಿಸುತ್ತೇವೆ. ಬಿಜೆಪಿಯ ಪ್ರಚಾರ ವೈಖರಿಯಲ್ಲಿ 'ಭಾರತ ಗೆಲ್ಲಿಸಿ' ಎಂಬ ವಾಕ್ಯವಿದೆ. ಅದರ ಜೊತೆ 'ಬಿಜೆಪಿ ಸೋಲಿಸಿ' ಎಂದು ನಾವು ಸೇರಿಸಬೇಕಾಗಿದೆ ಎಂದು ಹೇಳಿದರು.
ಭಾರತಾಂಬೆಯ ಹೆಸರಿನ ಮೇಲೆ ಮತ ಕೇಳುತ್ತಿದ್ದಾರೆ. ಇಟ್ಟಿಗೆ ಮುಂದಿಟ್ಟುಕೊಂಡು ಮತ ಕೇಳಿದ್ದಾಯಿತು. ಈಗ ಕಬ್ಬಿಣ ಮುಂದಿಟ್ಟುಕೊಂಡು ಮತಕೇಳುತ್ತಿದ್ದಾರೆ. ಮುಂದೆ ಸಿಮೆಂಟ್ ಇವರ ಚುನಾವಣೆಯ ವಸ್ತುವಾಗಬಹುದು ಎಂದು ಕುಟುಕಿದರು.
ಹಿಂದಿನ ಸಂಸದರು ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಬಸ್ ಸ್ಟಾಂಡ್ ಅಭಿವೃದ್ಧಿ ಎಂದು ನಾಮಫಲಕಗಳು ಎಲ್ಲಾ ಕಡೆ ಕಥೆ ಹೇಳುತ್ತಿವೆ. ಭದ್ರಾವತಿಯಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಕಾರ್ಖಾನೆಗೆ ಹೊಸ ರೂಪ ಕೊಡುವ ಅಗತ್ಯವಿದೆ. ಅದನ್ನು ಖಂಡಿತಾ ನೆರವೇರಿಸುವ ಮನಸ್ಸು ಇದೆ. ಹಾಗೇ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಯೋಜನೆಗಳು ಅನುಷ್ಠಾನಗೊಳ್ಳಬೇಕಾಗಿದೆ ಎಂದ ಅವರು, ಕುಮಾರ್ ಬಂಗಾರಪ್ಪ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಹಕರಿಸುತ್ತಾರೆ ಎಂದು ಹೇಳಿದರು.
ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಮಂಜುನಾಥ ಭಂಡಾರಿ ಅವರು ಅತ್ಯಂತ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಭಾಷಾ ಪ್ರೌಢಿಮೆ ಹೊಂದಿದ್ದಾರೆ. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋಗುವ ಚೈತನ್ಯ ಹೊಂದಿದ್ದಾರೆ. ಆರ್ಥಿಕ ಸಂಪನ್ಮೂಲ ಬಲದ ಕೊರತೆ ಇದೆ. ಆದರೂ ಪಕ್ಷ ಗೆಲ್ಲುತ್ತದೆ ಎಂದು ಹೇಳಿದರು. ಪಟಮಕ್ಕಿ ಮಹಾಬಲೇಶ್, ಡಾ. ಸುಂದರೇಶ್, ಕಡ್ತೂರು ದಿನೇಶ್, ಮಾಜಿ ಶಾಸಕರಾದ ಪಟಮಕ್ಕಿ ರತ್ನಾಕರ್, ಕಡಿದಾಳು ದಿವಾಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

