ಸಂಕಟಗಳ ಮಧ್ಯೆ ರಂಗಪ್ಪನ ತೇರು
ಕ.ಪ್ರ.ವಾರ್ತೆ ಟಿ ಸೊರಬ ಟಿ ಮೇ 14
ಇಲ್ಲಿನ ರಂಗಪ್ಪನ ತೇರು ಬುಧವಾರ ಜರುಗಿತು. ಆದರೆ, ದೇಗುಲಕ್ಕೆ ಸುಣ್ಣ, ಬಣ್ಣ ಬಳಿಯದೆ, ಪಲ್ಲಕ್ಕಿ ಉತ್ಸವ ಹೊರಡಿಸದೆ, ಉಪಾದಿಗಳು ಇಲ್ಲದೆ ಇದ್ದುದು ಭಕ್ತರಿಗೆ ಕೊರಗಿಗೆ ಕಾರಣವಾಗಿತ್ತು.
ಐತಿಹಾಸಿಕ ಪ್ರಾಮುಖ್ಯತೆ ಪಡೆದಿರುವ ಶ್ರೀರಂಗನಾಥಗುಡಿ ಮುಜರಾಯಿ ಇಲಾಖೆಗೆ ಸೇರಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ, ಇರುವ ಸಮಿತಿ ಕಚ್ಚಾಟದಲ್ಲಿ ನಿಷ್ಕ್ರಿಯಗೊಂಡಿದೆ. ಇದರಿಂದ ದೇಗುಲ ಅಭಿವೃದ್ಧಿಯೂ ಸೇರಿದಂತೆ, ಆಚರಣೆ, ಉತ್ಸವವೂ ಪ್ರಸಕ್ತ ದಿನಗಳಲ್ಲಿ ಸೊರಗಿದೆ.
ವರ್ಷಕ್ಕೊಮ್ಮೆ ನಡೆವ, ಪಟ್ಟಣದ ಮೂಲದವರು ಎಲ್ಲೆ ಇದ್ದರೂ, ಜಾತ್ರೆಗೆ ಆಗಮಿಸಿ, ವಿಜೃಂಭಣೆಯಿಂದ ಆಚರಿಸುತ್ತಿದ್ದ ಪಟ್ಟಣದ ಪ್ರಮುಖ ಜಾತ್ರೆ ಪೇಲವವಾಗಿದೆ.
ಕಲ್ಲು ರಸ್ತೆ-ಶಾಸ್ತ್ರಕ್ಕೆ ಸೀಮಿತವಾದ ಉತ್ಸವ: ಪಟ್ಟಣದಲ್ಲಿ 5 ದಿನದಿಂದಲೇ ಪಲ್ಲಕ್ಕಿ ಉತ್ಸವ ನಡೆಸಬೇಕಿತ್ತು. ಆದರೆ, ರಸ್ತೆ ಅಸಮರ್ಪಕತೆ ಹಿನ್ನೆಲೆಯಲ್ಲಿ ನಡೆಯದಿರುವುದು ಪಟ್ಟಣ ವಾಸಿಗಳ ಆಕ್ಷೇಪಕ್ಕೆ ತುತ್ತಾಗಿದೆ. ಪಲ್ಲಕ್ಕಿ ಹೊರುವವರು ಪಲ್ಲಕ್ಕಿ ಭಾರ ಜಾಸ್ತಿ, ರಸ್ತೆಯಲ್ಲಿ ಬರೀಕಲ್ಲು ತುಂಬಿರುವುದರಿಂದ ಬರೀ ಕಾಲಲ್ಲಿ ಪಲ್ಲಕ್ಕಿ ಹೊರಲು ಸಾಧ್ಯವಿಲ್ಲ. ಭಾರ ಕಡಿಮೆಯಿರುವ ಪಲ್ಲಕ್ಕಿ ಮಾಡಿಸಿ ಎಂದು ಒತ್ತಾಯಿಸಿದ್ದಾರೆ. ಹೋದ ವರ್ಷ ತೇರು ದುರಸ್ತಿ ಕಾರಣ ತೇರೆಳೆಯಲಾಗಲಿಲ್ಲ. ಈ ವರ್ಷ ತೇರು ದುರಸ್ತಿ ಆಯಿತು. ಆದರೆ, ರಸ್ತೆ ಅಗಲೀಕರಣದಿಂದ ಮುಖ್ಯ ರಸ್ತೆ ಹಾಳಾಗಿ ಇರುವುದರಿಂದ ತೇರನ್ನು ತುಸು ದೂರ ಶಾಸ್ತ್ರಕ್ಕೆ ಎಳೆಯಲಾಯಿತು.
ಯಕ್ಷಗಾನ: ಜಾತ್ರೆಯ ಪ್ರಯುಕ್ತ ಮೇ 15ರಂದು ರಾತ್ರಿ 9 ಗಂಟೆಗೆ ಸೊರಬ ಯಕ್ಷಗಾನ ಕಲಾ ಬಳಗದ ವತಿಯಿಂದ, ಸವಿತಾ, ಡಾ. ಎಂ.ಕೆ. ಭಟ್ ಪ್ರಾಯೋಜಕತ್ವದಲ್ಲಿ ವೆಂಕಟರಾವ್ ಹೊಡಬಟ್ಟೆ ಇವರ ಕಂಠಸಿರಿಯ ಮಧುರಾ-ಮಹೇಂದ್ರ ಯಕ್ಷಗಾನ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

