ಕಾಂಗ್ರೆಸ್-ಜೆಡಿಎಸ್ ಕ್ಷೇತ್ರದಲ್ಲಿ ಬಿಎಸ್ವೈ ಮತ ಬೇಟೆ
ವಿಶೇಷ ವರದಿ
ಶಿವಮೊಗ್ಗ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೂತ್ರವಿಲ್ಲದ ಗಾಳಿಪಟದಂತೆ ಛಿದ್ರವಿಚಿದ್ರವಾಗಿ ಬಿಜೆಪಿ ತಾನು ನೆಲಕ್ಕೆ ಬಿದ್ದಲ್ಲೇ ಮತ್ತೆ ಎದ್ದು ನಿಂತಿದೆ. ಸಂಘಟಣೆಯ ಪರಿಶ್ರಮ, ಕೆಜೆಪಿ-ಬಿಜೆಪಿ ಒಂದಾಗಿದ್ದು, ಮೋದಿ ಅಲೆ ಈ ಬೆಳವಣಿಗೆಗೆ ಕಾರಣವಾಯ್ತು.
2013ರ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಬೇರೆ ಬೇರೆಯಾಗಿ ಸ್ಪರ್ಧಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗಳಿಸಲೂ ಸಾಧ್ಯವಾಗಿರಲಿಲ್ಲ. ಇನ್ನೂ ಹೇಳಬೇಕೆಂದರೆ ಶಿವಮೊಗ್ಗ ಮತ್ತು ತೀರ್ಥಹಳ್ಳಿ ಕ್ಷೇತ್ರದ ಹೊರತಾಗಿ ಉಳಿದೆಲ್ಲಾ ಕಡೆಗಳಲ್ಲಿ ಠೇವಣಿ ಸಹ ಗಿಟ್ಟಲಿಲ್ಲ. ಒಂದೇ ವರ್ಷದಲ್ಲಿ ಪರಿಸ್ಥಿತಿ ಬೇರೆಯಾಗಿದೆ. ಕಾಂಗ್ರೆಸ್, ಜೆಡಿಎಸ್ ಶಾಸಕರಿರುವ ಕಡೆ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪನವರಿಗೆ ಎಗ್ಗಿಲ್ಲದೇ ಲೀಡ್ ಸಿಕ್ಕಿದೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಪಡೆದುಕೊಂಡಿದ್ದು 33,462 ಮತ. ಗೆಲವು ಪಡೆದ ಕಾಂಗ್ರೆಸ್ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಪಡೆದಿದ್ದು 39,355. ಈ ಬಾರಿ ಇಲ್ಲಿ ಯಡಿಯೂರಪ್ಪನವರಿಗೆ 88,945 ಲಭಿಸಿದೆ.
ಇನ್ನು ಭದ್ರಾವತಿಯಲ್ಲಿ ಜೆಡಿಎಸ್ ಶಾಸಕ ಎಂ.ಜೆ. ಅಪ್ಪಾಜಿಯವರು ಕಳೆದ ಚುನಾವಣೆಯಲ್ಲಿ 78,370 ಮತ ಪಡೆದು 44,099 ಮತ ಲೀಡ್ನೊಂದಿಗೆ ಗೆಲವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಯಡಿಯೂರಪ್ಪನವರಿಗೆ 15249 ಲೀಡ್ ಸಿಕ್ಕಿದೆ.
ಹಾಲಿ ಜೆಡಿಎಸ್ ಶಾಸಕರಿರುವ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ. ಕುಮಾರಸ್ವಾಮಿ 12,434 ಮತ ಗಳಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಕೆಜೆಪಿ ಅಭ್ಯರ್ಥಿ 38,350 ಬಂದಿತ್ತು. ಈ ಬಾರಿ ಈ ಕ್ಷೇತ್ರದಲ್ಲಿ ಯಡಿಯೂರಪ್ಪನವರಿಗೆ 42,227 ಸಾವಿರ ಲೀಡ್ ಸಿಕ್ಕಿದೆ. ಅಲ್ಲದೇ, ಜೆಡಿಎಸ್ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇಲ್ಲಿ ಆಯನೂರು ಮಂಜುನಾಥ್ ಹಾಗೂ ಕೆ.ಜಿ. ಕುಮಾರಸ್ವಾಮಿ ಜೋಡಿ ಶ್ರಮ ಮತವಾಗಿ ಪರಿವರ್ತಿತವಾಗಿದೆ ಎಂದರೆ ತಪ್ಪಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಶಾಸಕರಾಗಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ 34,446 ಮತ ಗಳಿಸಿದ್ದರು. ಹಾಗೆಯೇ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಕಿಮ್ಮನೆ ರತ್ನಾಕರ್ ಅವರು 37160 ಮತ ಗಳಿಸಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ 34,823 ಮತ ಬಂದಿದೆಯಾದರೂ, ಈ ಕ್ಷೇತ್ರದಲ್ಲಿ ಯಡಿಯೂರಪ್ಪ 28580 ಲೀಡ್ ಪಡೆದುಕೊಂಡಿದ್ದಾರೆ. ಇಲ್ಲಿ ಆರಗ ಜ್ಞಾನೇಂದ್ರ ಬೆವರು ಹರಿಸಿದ್ದಕ್ಕೆ ಫಲ ಸಿಕ್ಕಿದೆ. ಜೊತೆಗೆ ಬಿಎಸ್ವೈ ಲೀಡ್ನಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡರ ಛಾಯೆಯೂ ಕಾಣಿಸುತ್ತಿದೆ.
ಕೆಜೆಪಿಯಿಂದ ಶಾಸಕರಾದ ಬಿಎಸ್ವೈ ಶಿಕಾರಿಪುರದಲ್ಲಿ ಈ ಬಾರಿ 85,326 ಮತ ಗಳಿಸಿದ್ದಾರೆ. ಅವರು ಶಾಸಕರಾಗಿ ಆಯ್ದೆಯಾದಾಗ ಗಳಿಸಿದ್ದು 69,126 ಮತ. ಆ ಸಂದರ್ಭದಲ್ಲಿ ಬಿಜೆಪಿ ಗಳಿಸಿದ್ದು 2383 ಮತ. ಇಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಜೆಡಿಎಸ್ ಮತಗಳಿಗೆ ಹೆಚ್ಚುಮಾಡಿಕೊಂಡಿದೆ. 21,225 ಮತಗಳಿಂದ ಲೀಡ್ ಪಡೆದು ವಿಧಾನಸಭೆ ಪ್ರವೇಶಿಸಿದ್ದ ಜೆಡಿಎಸ್ ಕ್ಷೇತ್ರದಲ್ಲಿ ಯಡಿಯೂರಪ್ಪನವರಿಗೆ 30,945 ಮತಗಳ ಲೀಡ್ ಸಿಕ್ಕಿದೆ. ಇಲ್ಲಿ ಮಧುಬಂಗಾರಪ್ಪನವರ ಅತಿಯಾದ ಆತ್ಮವಿಶ್ವಾಸ ಮತ್ತು ಹಾಲಪ್ಪನವರ ಬೇರುಮಟ್ಟದ ಕೆಲಸ ಬಿಜೆಪಿಗೆ ಮತ ತಂದುಕೊಟ್ಟಿದೆ. ಕಾಂಗ್ರೆಸ್ನಲ್ಲಿ ಗಳಿಸಿದ್ದು 18813 ಮತ.
41,248 ಮತಗಳಿಂದ ಗೆಲವು ಪಡೆದಿದ್ದ ಕಾಗೋಡು ತಿಮ್ಮಪ್ಪನವರ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ 3ನೇ ಸ್ಥಾನ. ಇಲ್ಲಿ ಬಿಎಸ್ವೈ 32117 ಮತ ಲೀಡ್ ಪಡೆದುಕೊಂಡಿದ್ದಾರೆ. ಇನ್ನು ಬೈಂದೂರು ಕ್ಷೇತ್ರದಲ್ಲಿ ಅತಿ ಹೆಚ್ಚು (91163 ಮತ) ಮತ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

