ಶಿವಮೊಗ್ಗ

ರೈತ ಚಳವಳಿ ನಿರ್ಲಕ್ಷ್ಯಿಸಿದ ಕಾಂಗ್ರೆಸ್‌ಗೆ ಹೀನಾಯ ಸೋಲು

Published On :

ಶಿವಮೊಗ್ಗ: ರಾಜ್ಯ ರೈತ ಸಂಘ ಹಸಿರು ಸೇನೆಯು ನಾಗಸಮುದ್ರ ಗ್ರಾಮದಲ್ಲಿ ಹುತಾತ್ಮರ ದಿನ ಆಚರಿಸಿತು.
1982ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಇದ್ದವೇಳೆ ನಾಗಸಮುದ್ರದ ವಯೋವೃದ್ಧ ಮಲ್ಲಪ್ಪ, ನಾಲಕ ನಟರಾಜ್, ಸನ್ಯಾಸಿಕೋಡಮಗ್ಗಿಯ ಯುವಕ ಬಸವನಗೌಡ ಅವರ ಮೇಲೆ ಗೋಲಿಬಾರ್ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮೇ 25ರಂದು ನಾಗಸಮುದ್ರದಲ್ಲಿನ ವೀರಗಲ್ಲಿಗೆ ಮಾಲಾರ್ಪಣೆ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಕರ್ನಾಟದಲ್ಲಿ ರೈತ ಸಂಘದ ಚಳುವಳಿಗಳನ್ನು ನಿರ್ಲಕ್ಷ ಮಾಡಿದ ಪರಿಣಾಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದರೂ ಸಹ ಹೀನಾಯವಾಗಿ ಸೋತು ಬಿಜೆಪಿ ರಾಷ್ಟ್ರಮಟ್ಟದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಚಳವಳಿಗಳೇ ಸರ್ಕಾರವನ್ನು ಬದಲಾವಣೆ ಮಾಡುತ್ತಿದೆ ಎಂದರು.
ಎರಡು ವರ್ಷದ ಹಿಂದೆ ಕ್ವಿಂಟಾಲ್‌ಗೆ 2500 ಇದ್ದ ಬೆಲೆ ಈಗ 1000ರು.ಗೆ ಕುಸಿದೆ. ಬೆಂಬಲ ಬೆಲೆಗೆ ಖರೀದಿಸುತ್ತಿಲ್ಲ. ಈವರೆಗೂ ಕೃಷಿ ಬೆಲೆ ಆಯೋಗ ಘೋಷಣೆಯಾಗಿ ಉಳಿದಿದೆ. ಅಡಕೆ ಕೊಳೆರೋಗದ ಪರಿಹಾರ ಕೊಟ್ಟಿಲ್ಲ, ಸಮರ್ಪಕ ವಿದ್ಯುತ್ ಕೊಡುತ್ತಿಲ್ಲ, ಬರಗಾಲಕ್ಕೆ ಪರಿಹಾರ ಇಲ್ಲ ಹೀಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತವಿರೋಧಿ ನೀತಿ ಮುಂದುವರೆಸಿದರೆ ರಾಜ್ಯದಲ್ಲಿ ಉಗ್ರ ಚಳುವಳಿ ಮಾಡಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಡಿದಾಳು ಶಾಮಣ್ಣ, ಈಶಣ್ಣ, ಟಿ.ಎಂ.ಚಂದ್ರಪ್ಪ, ಎಸ್.ಎಸ್.ಶಿವಮೂರ್ತಿ, ಸಿದ್ದರಾಮಯ್ಯ, ನಾಗಸಮುದ್ರ ಘಟಕದ ಅಧ್ಯಕ್ಷ ತೇಜರಾಜಜ್ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.