ತುಮಕೂರು

ದುಷ್ಕರ್ಮಿಗಳಿಂದ ಬೆಂಕಿ: ರು. 60 ಸಾವಿರ ಮೌಲ್ಯದ ವಸ್ತು ಸುಟ್ಟು ಭಸ್ಮ

Published On :

ಕ.ಪ್ರ. ವಾರ್ತೆ   ಪಾವಗಡ   ಏ.1
ದುಷ್ಕರ್ಮಿಗಳು ಬಟ್ಟೆ ಇಸ್ತ್ರಿ ಮಾಡುವ ಪೆಟ್ಟಿಗೆ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ  ಸುಮಾರು 60 ಸಾವಿರ ರು. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಭಾನುವಾರ ರಾತ್ರಿ ಪಟ್ಟಣದ ಪತಂಜಲಿ ನಗರದಲ್ಲಿ ನಡೆದಿದೆ.
ಅಂಜಿನಪ್ಪ ಎಂಬುವರಿಗೆ ಸೇರಿದ ಪೆಟ್ಟೆಗೆ ಅಂಗಡಿ  ಸುಟ್ಟು ಭಸ್ಮವಾಗಿದೆ. ಪತಂಜಲಿ ನಗರದ ವಾಸಿ ಬಡ ಕಾರ್ಮಿಕ ಅಂಜಿನಪ್ಪ ಎಂಬುವರು ಕಳೆದ 15ವರ್ಷಗಳಿಂದ ಪತಜಂಲಿ ನಗರದ ಶ್ರೀ ರಾಘವೇಂದ್ರಸ್ವಾಮಿ ದೇವಸ್ಥಾನದ ಬಳಿ ರಸ್ತೆ ಬದಿಯೊಂದರಲ್ಲಿ ಬಟ್ಟೆ ಇಸ್ತ್ರಿ ಮಾಡುವ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಇದ್ದಕ್ಕಿದ್ದಂತೆ ಭಾನುವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾದ ಪರಿಣಾಮ ಇಡೀ ಬಟ್ಟೆ ಇಸ್ತ್ರಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿ ಸುಮಾರು 60 ಸಾವಿರ ರು.ನಷ್ಟವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಶ್ರೀರಾಮಪ್ಪ ಹಾಗೂ ಮುಖಂಡ ಅಪ್ಬಂಡೆ ನಾರಾಯಣಪ್ಪ, ದಂಡೋರ ಅಧ್ಯಕ್ಷ ವಳ್ಳೂರು ನಾಗೇಶ್  ಭೇಟಿ ನೀಡಿ ಪರಿಶೀಲಿಸಿದರು.
ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಬಡ ಕಾರ್ಮಿಕ ಅಂಜಿನಪ್ಪನಿಗೆ ತುಂಬ ನಷ್ಟವಾಗಿದ್ದು ಚಂದ ಎತ್ತುವ ಮೂಲಕ ಅಂಜಿನಪ್ಪನಿಗೆ ಸಹಾಯ ಮಾಡಲಾಗುತ್ತಿದೆ. ಸರ್ಕಾರದ ಪರಿಹಾರ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಆಸಕ್ತರು ಕೂಡಲೇ ಅವರ ನೆರವಿಗೆ ಬಂದು ಸಹಾಯ ಮಾಡುವಂತೆ ಮುಖಂಡ ಅಪ್ಬಂಡೆ ನಾರಾಯಣಪ್ಪ ಹಾಗೂ ಇತರರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಪಾವಗಡ ಪೊಲೀಸ್ ಠಾಣೆ ಪಿಎಸ್ಐ ರಾಮಕೃಷ್ಣಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.