ಇಂದು ಡಾ. ಬಾಬು ಜಗಜೀವನರಾಂ ಜನ್ಮ ದಿನಾಚರಣೆ (ಸುದ್ದಿ ಸಂಕ್ಷೇಪ)
ತಿಪಟೂರು: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಡಾ.ಬಾಬು ಜಗಜೀವನರಾಂ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುವುದು. ಆದ್ದರಿಂದ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ವಿವಿಧ ದಲಿತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನಾಗರಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಬಿ.ಸತ್ಯನಾರಾಯಣಗೆ ವಕೀಲರ ಬೆಂಬಲ
ಶಿರಾ: ನಗರ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಿದ್ದ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೇಷರತ್ ಬೆಂಬಲ ನೀಡಿ ಅವರ ಗೆಲವಿಗೆ ಶ್ರಮಿಸುವುದಾಗಿ ತಾಲೂಕಿನ ಅನೇಕ ವಕೀಲರು ಬಿ.ಸತ್ಯನಾರಾಯಣ ಅವರ ನಿವಾಸಕ್ಕೆ ತೆರಳಿ ಭರವಸೆ ನೀಡಿದರು. ಸುಮಾರು 40 ಮಂದಿ ವಕೀಲರು ಮಾಜಿ ಸಚಿವರ ನಿವಾಸದಲ್ಲಿ ಸತ್ಯನಾರಾಯಣ್ ಅವರ ಸಮ್ಮುಖದಲ್ಲಿ ಸಬೆ ನೆಡೆಸಿ ಈ ಹಿಂದೆ ಸಚಿವರಾಗಿದ್ದಾಗ ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ದಿ ಕಾಮಗಾರಿಗಳ ಗುಣಗಾನ ಮಾಡಿದರು. ತಾವು ಈ ಹಿಂದೆ ಕೈಗೊಂಡ ಕೋಟ್ಯಾಂತರ ರೂಗಳ ಅಭಿವೃದ್ದಿ ಕಾಮಗಾರಿಗಳು ಶಾಲಾ ಕಾಲೇಜುಗಳ ಕಟ್ಟಡ ಸೇರಿದಂತೆ ಅನೇಕ ನೂತನ ಪ್ರೌಢಶಾಲೆಯಂತಹ ಮಂಜೂರಾತಿಯಂತಹ ಅಭಿವೃದ್ದಿಗಳು ಈ ಚುನಾವಣೆಯಲ್ಲಿ ತಮಗೆ ಯಶಸ್ಸು ತರಲಿದ್ದು, ತಾವೇಲ್ಲ ವಕೀಲರು ಸೇರಿ ತಮಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ವಕೀಲರಾದ ವಾಜೀದ್ ಅಹಮದ್, ವೈ.ಆರ್.ಬಸವರಾಜು, ಸಿದ್ದಪ್ಪ, ಕೆ.ಉಮೇಶ್, ಕಂಬದೂರಯ್ಯ, ಮಲ್ಲೇಶ್, ರಹಮತ್ ಉಲ್ಲಾ ಮತ್ತಿತರರು ಹಾಜರಿದ್ದರು.
ನಾಳೆ ಟೆನಿಸ್ಬಾಲ್ ಕ್ರಿಕೆಟ್ ಟೂರ್ನಿ
ಹುಳಿಯಾರು: ಹೋಬಳಿ ಕೆಂಕೆರೆ ಸಮೀಪದ ಬರದಲೇಪಾಳ್ಯದಲ್ಲಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಮೂರನೇ ವರ್ಷದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಶನಿವಾರ ನಡೆಯಲಿದ್ದು, ಪ್ರಥಮ ಬಹುಮಾನ 5001ರು.,ದ್ವಿತೀಯ ಬಹುಮಾನ 3001ರು,. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಅವರು ಟೂರ್ನಿಯನ್ನು ಉದ್ಘಾಟಿಸಲಿದ್ದು, ರಾಜ್ಯ ಹಸಿರು ಸೇನೆಯ ಕಾರ್ಯದರ್ಶಿ ಕೆಂಕೆರೆ ಸತೀಶ್, ತಾ.ಪಂ.ಸದಸ್ಯ ನವೀನ್ , ಗ್ರಾ.ಪಂ.ಸದಸ್ಯರಾದ ಧನಂಜಯ್ಯಮೂರ್ತಿ, ಬಸವರಾಜು, ಮೈಸ್ ಕಂಪೂಟರ್ಸ್ನ ಸಂತೋಷ್,ಕಾಳಿಕಾಂಬ ಪೈಂಟರ್ಸ್ನ ಚನ್ನಬಸವಯ್ಯ, ಗುರುಸಿದ್ದಪ್ಪ, ಮುದ್ದಪ್ಪ, ಬಾಬು, ಚೇತನ್ ಸೇರಿದಂತೆ ಇತರರು ಅತಿಥಿಗಳಾಗಿ ಆಗಮಿಸಲಿದ್ದು, ಟೂರ್ನಿಗೆ 300ರು. ಪ್ರವೇಶ ಶುಲ್ಕ ಹಾಗೂ ತಂಡದ ಆಟಗಾರರಿಗೆ ಊಟದ ವ್ಯವಸ್ಥೆಯಿದ್ದು, ಹೆಚ್ಚಿನ ಮಾಹಿತಿಗಾಗಿ ರವಿಕುಮಾರ್(8970940166), ಅರುಣ್(9464441336), ಪ್ರವೀಣ್(7829830902)ಉಮೇಶ್(9972732768)ರಘು(9845778945) ಸಂಪರ್ಕಿಸುವಂತೆ ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

