ಒಳಮೀಸಲು ಜಾರಿಗೆ ತರುವ ಪಕ್ಷಕ್ಕೆ ಬೆಂಬಲ: ಯೋಗಾನಂದ್
ಶಿರಾ: ಸದಾಶಿವ ಆಯೋಗದ ಸಮೀಕ್ಷೆಯಂತೆ ರಾಜ್ಯದಲ್ಲಿ ಸುಮಾರು 80 ಲಕ್ಷ ಮಾದಿಗ ಸಮೂಹದ ಮತಗಳಿದ್ದು ಈ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೆ ತರಲು ಯಾವ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿ ಜಾರಿಗೆ ತರಲು ಬದ್ಧವಾಗಿದೆಯೋ ಅಂತಹ ರಾಜಕೀಯ ಪಕ್ಷಕ್ಕೆ ನಮ್ಮ ಮತ ಮೀಸಲಾಗಿರುತ್ತವೆ ಎಂದು ರಾಜ್ಯ ಮಾದಿಗ ದಂಡೋರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಾಗೋಡು ಯೋಗಾನಂದ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ಜನಾಂಗದ ಮಾಯಾವತಿಯವರು 5 ಭಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ 25 ಜನ ಶಾಸಕರಿದ್ದು ಜನಾಂಗದ ದಾಮೋದರ ನರಸಿಂಹ ಉಪಮುಖ್ಯಮಂತ್ರಿಯಾಗಿರುವುದು ಸಂತಸದ ವಿಷಯ. ಆದರೆ ನಮ್ಮ ರಾಜ್ಯದಲ್ಲಿ 36 ವಿಧಾನಸಭಾ ಮೀಸಲು ಕ್ಷೇತ್ರಗಳಿದ್ದು ಎಡಗೈ ಸಮುಹದಲ್ಲಿಯೇ ಬಲಗೈನವರ ತಂತ್ರ ಕುತಂತ್ರಕ್ಕೆ ಬಲಿಯಾಗಿರುವ ಕ್ಷೇತ್ರಗಳಿವೆ. ಇದಕ್ಕೆ ರಾಜ್ಯ ನಾಯಕರು ಕಾರಣರಾಗಿದ್ದು 36 ಮೀಸಲು ಕ್ಷೇತ್ರಗಳಲ್ಲಿ ಯಾವ ಸಮೂಹದವರು ಹೆಚ್ಚಿಗೆ ಇರುತಾರೆ ಅನ್ನುವುದನ್ನು ಅರಿತು ಪಕ್ಷಗಳು ಬಿ ಫಾರಂ ನೀಡಲಿ ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

