ತುಮಕೂರು

ಚುನಾವಣೆಗೆ ಹಣವೊಂದೇ ಮಾನದಂಡವಲ್ಲ: ನಿಂಗಪ್ಪ

Published On :

ಕ.ಪ್ರ. ವಾರ್ತೆ  ತುಮಕೂರು  ಏ.4
ಚುನಾವಣೆಗೆ ಹಣವೊಂದೇ ಮಾನದಂಡವಲ್ಲ. ಹಣ ನೀಡದಿದ್ದರೂ ಮತಹಾಕುವ ಜನರಿದ್ದಾರೆ. ಗೆಲ್ಲುವ ವಿಶ್ವಾಸವೂ ಇದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್. ನಿಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಜೆಡಿಎಸ್ ತೊರೆದು ಕೆಜೆಪಿ ಸೇರಿದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾವೊಬ್ಬ ತುಮಕೂರು ಗ್ರಾಮಾಂತರದ ಮೂಲ ನಿವಾಸಿ. ಹಾಲಿ ಬಿಜೆಪಿ ಶಾಸಕ ಸುರೇಶ್ ಗೌಡರಾಗಲಿ, ಜೆಡಿಎಸ್ ಟಿಕೆಟ್ ಆಕಾಂಕ್ಷಿ ಡಿ.ಸಿ. ಗೌರಿಶಂಕರ್ ಆಗಲಿ ಈ ಕ್ಷೇತ್ರದವರಲ್ಲ. ಇದೊಂದು ರೀತಿ ಮೂಲನಿವಾಸಿ ವಿರುದ್ಧ ಹೊರಗಿನವರ ಹೋರಾಟ ಎಂದರೂ ತಪ್ಪಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ನಂಬಿದ್ದೆ. ಆದರೆ ಅವರಿಬ್ಬರೂ ತಮ್ಮ ಬಳಿ ಹಣ ಇಲ್ಲ.
 ಹಣವಿಲ್ಲದೆ ಚುನಾವಣೆ ಎದುರಿಸಲಾಗದು. ವಿರೋಧಿ ಅಭ್ಯರ್ಥಿಗಳ ಬಳಿ ಭಾರೀ ಹಣವಿದೆ. ಹೀಗಾಗಿ ಟಿಕೆಟ್ ನೀಡಲಾಗದು ಎಂಬ ವಾದವನ್ನು ಮುಂದಿಟ್ಟರು. ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿಗಳಿಬ್ಬರೂ ಖಡಾ ಖಂಡಿತವಾಗಿ ಟಿಕೆಟ್ ನಿರಾಕರಿಸಿದರು ಎಂದು ತಾವು ಜೆಡಿಎಸ್ ತೊರೆದದ್ದಕ್ಕೆ ಕಾರಣ ನೀಡಿದರು.
ಕೆಜೆಪಿಗೆ ಸೇರ್ಪಡೆ: ಹಣವಿಲ್ಲದೆಯೂ ಚುನಾವಣೆ ಗೆಲ್ಲಬಹುದು ಎಂಬುದನ್ನು ತೋರಿಸಬೇಕಿದೆ. ತಮಗೂ ಬೆಂಬಲಿಗರಿದ್ದಾರೆ. ಜತೆಗೆ ತಾವೀಗ ಕೆಜೆಪಿಗೆ ಸೇರ್ಪಡೆಯಾಗಿದ್ದು, ಯಡಿಯೂರಪ್ಪನವರ ಬಲ ತಮ್ಮೊಂದಿಗಿದೆ. ತಾವು ಕೆಜೆಪಿಗೆ ಬಂದ ನಂತರ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೆಜೆಪಿಗೂ ಕೂಡ ಬಲ ಬಂದಂತಾಗಿದೆ.
 ತಾವು ಶಕ್ತಿ ಮೀರಿ ಹೋರಾಟ ಮಾಡುವುದಾಗಿಯೂ, ಜಯಗಳಿಸುವ ವಿಶ್ವಾಸ ಹೊಂದಿರುವುದಾಗಿಯೂ ನಿಂಗಪ್ಪ ತಿಳಿಸಿದರು.
9 ರಂದು ಬಿಎಸ್‌ವೈ: ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೆಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ಏ.9 ರಂದು ಕೆಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಚಿಕ್ಕನಾಯಕನಹಳ್ಳಿ, ಮಧ್ಯಾಹ್ನ 2 ಕ್ಕೆ ತುಮಕೂರು ಗ್ರಾಮಾಂತರದ ಗೂಳೂರಿನಲ್ಲಿ, ಸಂಜೆ 4 ಗಂಟೆಗೆ ತಿಪಟೂರಿನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲ್ಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ಕೆಜೆಪಿ ಅಭ್ಯರ್ಥಿ ಜ್ಯೋತಿಗಣೇಶ್, ಸದಾಶಿವಯ್ಯ, ಗಂಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.