ತುಮಕೂರು

ಜೆಡಿಎಸ್ ಅವಧಿ ಕಾಮಗಾರಿ ತಮ್ಮದೆಂದು ಹೇಳಿಕೊಳ್ಳುವ ಶಾಸಕ

Published On :

ಕ.ಪ್ರ. ವಾರ್ತೆ   ಪಾವಗಡ   ಏ.5
ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ವೆಂಕಟರಮಣಪ್ಪ ಬಿಡುಗಡೆ ಮಾಡಿದ ಕೋಟ್ಯಂತರ ರು.ಗಳ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಜೆಡಿಎಸ್ ಅವಧಿ ಕಾಮಗಾರಿಗಳು ಎಂದು ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಹೇಳಿದರು.
ಅವರು ಮಂಗಳವಾರ ತಾಲೂಕು ವರ್ತಕರ ಸಂಘದ ವತಿಯಿಂದ ಪಟ್ಟಣದ ಲಕ್ಷ್ಮೀ ಇಂಡಸ್ಟ್ರಿಸ್ (ಡಬಲ್ ಮಿಲ್ )ಅವರಣದಲ್ಲಿ ಏರ್ಪಡಿಸಿದ್ದ ಜೆಡಿಎಸ್‌ನ ಬೃಹತ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ವೆಂಕಟರಮಣಪ್ಪ ಬಿಡುಗಡೆ ಮಾಡಿದ ಕೋಟ್ಯಂತರ ರು.ಗಳ ಅಭಿವೃದ್ಧಿ ಕಾಮಗಾರಿಗಳು ಎಚ್.ಡಿ. ಕುಮಾರಸ್ವಾಮಿ ಸಿಎಂ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳು ಎಂದ ಅವರು 30 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳು ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಕಾಲದಲ್ಲಿ ಮಂಜೂರು ಮಾಡಿರುವ ದಾಖಲೆ ನಮ್ಮಲಿದೆ ಎಂದರು.
ತಾಲೂಕಿನಲ್ಲಿ ಕೈಗೊಂಡ ಕೋಟ್ಯಂತರ ರು.ಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ.  ಶಾಸಕರು ತಮ್ಮ ಪುತ್ರ ಎಚ್.ವಿ.ವೆಂಕಟೇಶ್ ಅವರಿಗೆ ಗುತ್ತಿಗೆ ನೀಡುವ ಮೂಲಕ ಕಳಪೆ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿಯಲ್ಲಿ ಶಾಸಕರ ವೈಫಲ್ಯಗಳ ಬಗ್ಗೆ ಲೇವಡಿ ಮಾಡಿದ ತಿಮ್ಮರಾಯಪ್ಪ ಜಾತಿ ನಿಂದನೆ ಪ್ರಕರಣಗಳಿಗೆ ಕುಮ್ಮಕ್ಕು ನೀಡಿ ಮೇಲ್ವರ್ಗವರ ಮೇಲೆ ಕೇಸು ಹಾಕಿಸುವ ಮೂಲಕ ಶಾಸಕರು ಎಸ್ಸಿ, ಎಸ್‌ಟಿ ಸಮುದಾಯದವರನ್ನು ಬಲಿ ಪಶುಗಳನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಕ್ಷಕ್ಕೆ ನೂತನವಾಗಿ ಜೆಡಿಎಸ್‌ಗೆ ಸೇರ್ಪಡೆಯಾದ ನೂರಾರು ಆರ್ಯವೈಶ್ಯ ಸಮುದಾಯದವರನ್ನು ಸ್ವಾಗತಿಸಿದ ಕೆಟಿಎಂ, ನಿಮಗೆ ಹೊಂದಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ತಾವೆಲ್ಲಾ ಸಂಘಟಿತರಾಗಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಪಕ್ಷದ ತಾ.ಅಧ್ಯಕ್ಷ ಎನ್.ತಿಮ್ಮಾರೆಡ್ಡಿ, ಮುಖಂಡ ಆರ್.ಸಿ.ಅಂಜಿನಪ್ಪ, ಡಾ.ಕಿರಣ್, ಎ.ಶಂಕರರೆಡ್ಡಿ ಮುಂತಾದವರು ಮಾತನಾಡಿ ಜಾತ್ಯತೀತ ಸೇವೆ ರೂಢಿಸಿಕೊಂಡ ಸರಳ, ಸಜ್ಜನಿಕೆಯ ಕೆ.ಎಂ. ತಿಮ್ಮರಾಯಪ್ಪ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.  ಪುರಸಭೆ ಸದಸ್ಯ ವಸಂತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಪ್ರಸಾದ್‌ರೆಡ್ಡಿ, ಸತ್ಯನಾರಾಯಣ್ ಚೌಧರಿ, ಅಕ್ಕಲಪ್ಪನಾಯ್ಡು, ಜಿ.ಬಿ.ದೇವರಾಜ್, ಆರ್ಯವೈಶ್ಯ ಮುಖಂಡರಾದ ಅಶ್ವತ್ಥಪ್ಪ, ಕೆ.ವಿ.ಶ್ರೀನಿವಾಸ್, ಅನಿಲ್‌ಕುಮಾರ್, ದವಸಂ ಗೋಪಾಲ್ ಕೃಷ್ಣ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.