ತುಮಕೂರು

ಅಂಗನೆ ಆತ್ಮಶಕ್ತಿ ಮೇಲೆ ವಿಶ್ವದ ಉಸಿರು ನಿಂತಿದೆ

Published On :

ಕ.ಪ್ರ. ವಾರ್ತೆ   ತುಮಕೂರು   ಏ.5
ಮಹಿಳಾ ಸಂಸ್ಕೃತಿಯೇ ನೆಲಮೂಲ ಸಂಸ್ಕೃತಿ ಎಂದು ಚಿಂತಕಿ ಬಿ.ಸಿ. ಶೈಲಾ ನಾಗರಾಜ್ ಪ್ರತಿಪಾದಿಸಿದರು.
ನಗರದಲ್ಲಿ ಏರ್ಪಡಿಸಿದ್ದ 'ಮಹಿಳಾ ಸಂಸ್ಕೃತಿ ಒಂದು ಅಧ್ಯಯನ' ಎಂಬ ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ದೇಶದ ಸಂಸ್ಕೃತಿಯ ಅಧ್ಯಯನವೆಂದರೆ ಅದು ಮಹಿಳೆಯರ ನಿಜ ಬದುಕಿನ ಅಧ್ಯಯನವೇ ಆಗಿರುತ್ತದೆ. ಆದ್ದರಿಂದಲೇ ಮಹಿಳಾ ಸಂಸ್ಕೃತಿಯೆಂದರೆ ಅದು ನೆಲಮೂಲ ಸಂಸ್ಕೃತಿ. ನೆಲಮೂಲ ಸಂಸ್ಕೃತಿಯೇ ಪರಂಪರೆ, ಕಲೆ, ಇತಿಹಾಸಗಳ ತಾಯಗರ್ಭ ಎಂದು ಶೈಲಾ ನಾಗರಾಜ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಇಂದಿನ ಪುರುಷರ ದೌರ್ಜನ್ಯಯುತ ವಾತಾವರಣದಲ್ಲಿ ಅನೇಕ ಒತ್ತಡಗಳ ಮಧ್ಯೆ ಬದುಕುತ್ತಾ, ಅನೇಕ ಪಾಳಿಗಳಲ್ಲಿ ದುಡಿಯುತ್ತಾ, ಇಡೀ ಕುಟುಂಬ ವ್ಯವಸ್ಥೆಯನ್ನು ಕಟ್ಟಿ ಕೊಡುತ್ತಿರುವ, ಸಾಂಸ್ಕೃತಿಕ ಒತ್ತಾಸೆ ನೀಡಿ ನೆಮ್ಮದಿ ಹರಡುತ್ತಿರುವ ನಮ್ಮ ಗೃಹಿಣಿಯರೇ ಸಂಬಂಧಗಳ ಸೇತುಬಂಧವಾಗಿ, ಸಾಂಸ್ಕೃತಿಕ ಹರಿಕಾರರಾಗಿ ಬದುಕನ್ನು  ಅತ್ಯಂತ ಜೀವನೋತ್ಸಾಹದಿಂದ ನಡೆಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
ಭಾರತೀಯ ಸಂಸ್ಕೃತಿಯ ಬೇರು ಮಾತೃ ನೆಲೆಯಲ್ಲಿಯೇ ಇರುವುದರಿಂದ ತಾಯಿ, ತಾಯ್ತನದ ಅನುಭವಗಳನ್ನು ಪುರುಷ ವರ್ಗ ಮರೆ ಮಾಚಲು, ನಾಶ ಮಾಡಲು ಸಾಧ್ಯವಿಲ್ಲ ಎಂದು ಶೈಲಾ ನಾಗರಾಜ್ ವಿವರಿಸಿದರು.
ತುಮಕೂರು ಜಿಲ್ಲಾ ಮಹಿಳಾ ಸಂಘಟನೆ ಕಾರ್ಯಕರ್ತೆ ಸೀತಕ್ಕ ಮಾತನಾಡಿ, ಮಹಿಳೆ ಮೇಲಿನ ವಿವಿಧ ದೌರ್ಜನ್ಯಗಳು ಅವಳ ಕ್ರಿಯಾಶೀಲತೆ ಕಡಿಮೆ ಮಾಡುತ್ತಿವೆ. ಆದರೆ, ಹೆಣ್ಣಿನ ಆತ್ಮಶಕ್ತಿಯ ಮೇಲೆ ಇಡೀ ಪ್ರಪಂಚ ಉಸಿರಾಡುತ್ತಿದೆ ಎಂದು ಪ್ರತಿಪಾದಿಸಿದರು.
ವೃತ್ತಿ ರಂಗಭೂಮಿ ಕಲಾವಿದೆ ರಾಧಾ ಸಂಪತ್ ಅವರಿಂದ ರಂಗಗೀತೆಗಳ ಗಾಯನ ಏರ್ಪಡಿಸಲಾಗಿತ್ತು. ಜಿಲ್ಲಾ ಮಹಿಳಾ ಸಂಘಟನೆ ಸಂಚಾಲಕಿ ಸೌಭಾಗ್ಯ ಸಿದ್ದಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಹುಂಜನಾಳ ಪರಮೇಶ್, ಗಂಗಾ, ನೀಲಾಂಬಿಕೆ, ಲಲಿತಾ ಸಿಂದಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಂಚಾಲಕರಾದ ಮುತ್ಯಾಲಮ್ಮ ಸ್ವಾಗತಿಸಿ, ಚಂದ್ರಕಲಾ ವಂದಿಸಿದರು. ಲೇಖಕಿ ರಂಗಮ್ಮ ಹೊದೇಕಲ್ ನಿರೂಪಿಸಿದರು. ಸಂಘಟನೆ ಸದಸ್ಯರು ಮಹಿಳಾ ಜಾಗೃತಿ ಗೀತೆ ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.