ತುಮಕೂರು

ಚಿಕ್ಕ ಮಕ್ಕಳಿಗೆ ಜ್ಞಾನ, ಮನೋ ವಿಕಾಸ ಅಗತ್ಯ: ರಮಾನಂದ ಸ್ವಾಮೀಜಿ

Published On :

ಕ.ಪ್ರ. ವಾರ್ತೆ   ಮಧುಗಿರಿ   ಏ.7
ಚಿಕ್ಕ  ಮಕ್ಕಳಿಗೆ ಜ್ಞಾನ ಮತ್ತು ಮನೋ ವಿಕಾಸ ಅಗತ್ಯ ಎಂದು ತಗ್ಗಿಹಳ್ಳಿ  ರಮಾನಂದ ಸ್ವಾಮೀಜಿ ನುಡಿದರು.ಪಟ್ಟಣದ ದರ್ಗಾ ರಸ್ತೆಯಲ್ಲಿರುವ ಅನುಗ್ರಹ ನಿಲಯದಲ್ಲಿ ಇತ್ತೀಚೆಗೆ ನೂತನವಾಗಿ  ಪ್ರಾರಂಭವಾದ  ಮಕ್ಕಳ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು,  ಶಿಕ್ಷಣ ಇಲ್ಲದೆ ಪ್ರಜಾಪ್ರಭುತ್ವ ಯಶಸ್ವಿಯಾಗದು. ಆ ನಿಟ್ಟಿನಲ್ಲಿ  ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ನಾಣ್ಣುಡಿಯಂತೆ  ಹೆತ್ತವರು ಶ್ರೀಮಂತರಾದರೂ ಮಕ್ಕಳಿಗೆ ಪ್ರೀತಿ, ಸಂಪತ್ತನ್ನು ಕೊಡಬೇಕೆ ಹೊರೆತು ಚಿಕ್ಕಂದಿನಲ್ಲೇ ಅವರು ಕೇಳಿದಷ್ಟು ಹಣ ನೀಡಿ ದಾರಿ ತಪ್ಪಿಸಬಾರದು ಎಂದರು. ಮಕ್ಕಳು ಆಡುವ, ಕಲಿಯುವ ಹಾಗೂ  ನಲಿಯುವ ವಾತಾವರಣ  ಕಲ್ಪಿಸುವ ನಿಟ್ಟಿನಲ್ಲಿ  ಶಾಲೆ ಸಣ್ಣ, ಸಣ್ಣ  ಕಂದಮ್ಮಗಳಿಗೆ ದಾರಿದೀಪವಾಗಿದ್ದು ಈ ಶಾಲೆ ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದಿ ಚನ್ನಾಗಿ ಶಿಕ್ಷಣ ಕಲಿಯುವ ನಿಟ್ಟಿನಲ್ಲಿ ಬೆಳೆಯಲಿ ಎಂದು ಆಶೀಸೀದರು.  
ಅಧ್ಯಕ್ಷ ಆರ್. ಅನಂತಕೃಷ್ಣರಾಜು, ಕಾರ್ಯದರ್ಶಿ ಉಷಾ ಅನಂತು,  ಎಂಜಿನಿಯರ್ ಕಾಂತರಾಜು, ಉಪನ್ಯಾಸಕ ಆರ್. ನಾಗರಾಜು, ವಿದ್ಯಾ ನಿಕೇತನ ಶಾಲೆಯ ಶಿಕ್ಷಕಿ ಪಂಕಜ ನಾಗರಾಜು,ತ್ರಿಷ್ಠ ಸಂಸ್ಥೆ ಮುಖ್ಯಸ್ಥ ಶ್ರೀನಿವಾಸ ಗುಪ್ತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.