ಸುದ್ದಿ ಸಂಕ್ಷೇಪ
ಆಪ್ತ ಸಹಾಯಕ ಲೋಕಾಯುಕ್ತ ಬಲೆಗೆ
ತುಮಕೂರು: ಬಸ್ ಪರ್ಮಿಟ್ಗೆ ಲಂಚ ಪಡೆಯುತ್ತಿದ್ದ ತುಮಕೂರು ಆರ್ಟಿಓ ಆಪ್ತ ಸಹಾಯಕ ಗೋವಿಂದರಾಜು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಚಿಕ್ಕನಾಯಕನಹಳ್ಳಿಯ ಗುರುಪ್ರಸಾದ್ ಮೂಲಕ 4 ಸಾವಿರ ರು. ಹಣವನ್ನು ಬಸ್ ಪರ್ಮಿಟ್ ಮಾಡಿಕೊಡಲು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಗೋವಿಂದರಾಜು ಅವರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಸಿಪಿಐ ಎಂ.ಆರ್. ಗೌತಮ್ ಹಾಗೂ ಎಚ್.ಬಿ. ರಮೇಶ್ಕುಮಾರ್ ದಾಳಿ ಮಾಡಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಲ್ಲ ಅಭ್ಯರ್ಥಿಗಳ ನಾಮಪತ್ರ ಅಂಗೀಕೃತ
ತಿಪಟೂರು: ತಿಪಟೂರು ವಿಧಾನಸಭಾ ಚುನಾವಣೆಗೆ ಒಟ್ಟು 12 ಅಭ್ಯರ್ಥಿಗಳು 22ನಾಮ ಪತ್ರ ಸಲ್ಲಿಸಿದ್ದು, ಗುರುವಾರನಡೆದ ನಾಮಪತ್ರ ಪರಿಶೀಲನೆಯಲ್ಲಿ ಎಲ್ಲವೂ ಅಂಗೀಕೃತಗೊಂಡಿವೆ. ಕೆಜಿಪಿಯಿಂದ ಲೋಕೇಶ್ವರ, ಬಿಜೆಪಿಯಿಂದ ಶಾಸಕ ಬಿ.ಸಿ. ನಾಗೇಶ್, ಕಾಂಗ್ರೆಸ್ನಿಂದ ಕೆ. ಷಡಕ್ಷರಿ, ಜೆಡಿಎಸ್ನಿಂದ ಎಂ. ಲಿಂಗರಾಜು, ಜೆಡಿಎಸ್ ಬಂಡಾಯ ಅಭ್ಯರ್ಥಿ ಎಂ. ಮೈಲಾರಿ, ಬಿಎಸ್ಆರ್ನಿಂದ ಮಾರನಗೆರೆ ಸುದರ್ಶನ್, ಬಿಎಸ್ಪಿಯಿಂದ ಅಬ್ದುಲ್ ವಕೀಲ್, ಪಕ್ಷೇತರರಾಗಿ ಮಾರನಗೆರೆ ಎಂ.ಸಿ. ವೀರಭದ್ರಯ್ಯ, ಈಚನೂರು ಎಚ್. ಸಿ. ಮಹದೇವಯ್ಯ, ಹಿಂಡಿಸ್ಕೆರೆ ಹೆಚ್.ಎಲ್. ಮೋಹನ್ ಕುಮಾರ್, ಎಲ್.ಪಿ. ಯದುನಂದನ ಮತ್ತು ರಾಜಶೇಖರ್ ನಾಮ ಪತ್ರಗಳು ಅಂಗೀಕೃತವಾಗಿವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಾಲಯ ಉದ್ಘಾಟನೆ
ಕೊರಟಗೆರೆ: ಕೊರಟಗೆರೆ ತಾಲೂಕು ಬಿಜೆಪಿ ಕಾರ್ಯಾಲಯ ಅಸ್ತಿತ್ವಕ್ಕೆ ಬಂದಿದೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೆದ್ದರಾಜು ಕಾರ್ಯಾಲಯ ಉದ್ಘಾಟಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಡಿ. ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಪ.ಪಂ ನೂತನ ಸದಸ್ಯ ಪವನ್ ಕುಮಾರ್ ಮತ್ತು ಕುಮಾರ್(ಆಟೋ),ಕಾರ್ಯಕರ್ತರಾದ ಕೆ.ಎನ್. ವಿಜಯ್ ಕುಮಾರ್, ಆರ್.ಪಿ. ರವಿಶಂಕರ್, ಎನ್.ಆರ್. ಚಂದ್ರಶೇಖರ್, ಎನ್.ವಿ. ನಟರಾಜ್, ಪ್ರಕಾಶ್ ರೆಡ್ಡಿ, ಸದಾನಂದ, ಮಹಿಳಾ ಕಾರ್ಯಕರ್ತೆ ಸುಶೀಲಮ್ಮ, ಯಿನಿ ಮತ್ತು ಶೀಲಾ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ಸುರೇಶ್ಶ್ಚಂದ್ರ ಗುಬ್ಬಿ ಕ್ಷೇತ್ರಕ್ಕೆ ವೀಕ್ಷಕ
ಗುಬ್ಬಿ: ಸುರೇಶ್ಶ್ಚಂದ್ರ ಅವರನ್ನು ಗುಬ್ಬಿ ವಿಧಾನ ಸಭಾ ಕ್ಷೇತ್ರಕ್ಕೆ ವೀಕ್ಷಕರನ್ನಾಗಿ ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿದೆ. ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಚುನಾವಣಾ ಅಕ್ರಮ ಸಂಬಂಧಗಳ ದೂರನ್ನು ಸಲ್ಲಿಸಲು ದೂರವಾಣಿ ಸಂಖ್ಯೆ 08131 222010, ಮೊಬೈಲ್ 8277310948 ಸಂಪಕಿಸಿ ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

