ಮಕ್ಕಳಲ್ಲಿ ಆತ್ಮವಿಶ್ವಾಸಕ್ಕೆ ಬೇಸಿಗೆ ಶಿಬಿರ ಸಹಕಾರಿ
ಕನ್ನಡಪ್ರಭ ವಾರ್ತೆ, ತುಮಕೂರು, ಏ.16
ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಲು ಬೇಸಗೆ ಶಿಬಿರಗಳು ಅತ್ಯಗತ್ಯ ಎಂದು ದಂತ ವೈದ್ಯ ಸಂಜಯ್ ನಾಯಕ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಬಸವೇಶ್ವರ ಪ್ರಾಥಮಿಕ ಶಾಲಾ ಆವರಣದಲ್ಲಿ ನಗರದ ಕಣ್ಮುಚ್ಚಾಲೆ ಮಕ್ಕಳ ಗುಂಪು ಹಾಗೂ ತುಮಕೂರು ವಾಣಿ ಸಂಯುಕ್ತಾಶ್ರಯದಲ್ಲಿ 17 ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವರ್ಷದ 11 ತಿಂಗಳು ಮಕ್ಕಳು ನಿರಂತರ ಓದಿನಲ್ಲಿ ತಲ್ಲೀನರಾಗಿರುತ್ತಾರೆ. ರಜಾ ಅವಧಿಯಾದ ಬೇಸಗೆಯ ಒಂದು ತಿಂಗಳಾದರೂ ಆಟ ಹಾಗೂ ಪಠ್ಯೇತರ ಚಟುವಟಿಕೆಗಳ ಕಡೆ ಹೋಗಲು ಪೋಷಕರು ಪ್ರೋತ್ಸಾಹಿಸಬೇಕು. ಶಿಬಿರದಲ್ಲಿ ಮಕ್ಕಳನ್ನು ಒಂದು ವೇದಿಕೆಗೆ ಕರೆತಂದು, ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಕೌಶಲ್ಯವನ್ನು ಜಾಗೃತಗೊಳಿಸಿ ಆತ್ಮವಿಶ್ವಾಸ ಬೆಳೆಸಬೇಕು. ವಿಶೇಷವಾಗಿ ನಮ್ಮ ಗ್ರಾಮೀಣ ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಗತ್ಯ ಎಂದು ಸಂಜಯ್ ನಾಯಕ ಪ್ರತಿಪಾದಿಸಿದರು.
ಸಂಗೀತ ವಿದುಷಿ ಲಕ್ಷ್ಮೀ ಜಿ. ಸುಧೀಂದ್ರ ಮಾತನಾಡಿ, ಶಿಬಿರ ಒಂದು. ಕಲಿಕೆ ಹಲವಾರು. ಸಂಗೀತ, ಸಾಹಿತ್ಯ, ಕಲೆ, ವಿಜ್ಞಾನ, ಗಣಕಯಂತ್ರ ಪ್ರತಿಯೊಂದು ಪ್ರಾಕಾರದಲ್ಲಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮುವಂತೆ ಮಾಡಲು ಒಂದು ವೇದಿಕೆಯನ್ನು ಕಲ್ಪಿಸಿಕೊಡುತ್ತದೆ ಎಂದರು.
ನಿವೃತ್ತ ಪ್ರಿನ್ಸಿಪಾಲ್ ಎಸ್. ಪುಟ್ಟಸ್ವಾಮಿ ಮಾತನಾಡಿ, ಆಧ್ಯಾತ್ಮಿಕ ವಿಚಾರಗಳು ಶಾಲೆಗಳಲ್ಲಿ ಶೂನ್ಯವಾಗಿವೆ. ಈ ಕೊರತೆಯನ್ನು ಮಕ್ಕಳ ಬೇಸಗೆ ಶಿಬಿರಗಳ ಮೂಲಕ ತುಂಬಿಕೊಳ್ಳಬಹುದು. ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆ ಸರಿಯಾಗಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ, ನೈತಿಕತೆ ಕುರಿತಂತೆ ತಿಳಿವಳಿಕೆಯಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಣ್ಮುಚ್ಚಾಲೆ ಮಕ್ಕಳ ಗುಂಪಿನ ಅಧ್ಯಕ್ಷೆ ರೇಣುಕಾ ಪರಮೇಶ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ವಿಶಿಷ್ಟ ಗುಣಗಳಿರುತ್ತವೆ. ಕೆಲವು ಸೃಜನಶೀಲ ಮಕ್ಕಳಿಗೆ ಪಾಲಕರ ಸಹಾಯ, ಸಹಕಾರ ಪ್ರೋತ್ಸಾಹ ದೊರೆತು ಸಮಾಜದಲ್ಲಿ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ದರಾಜ್ ಐವಾರ್, ಮಾಲಾಗಿರೀಶ್ ಇತರರು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

