ತುಮಕೂರು

ಸಿಐಟಿ ಕಾಲೇಜು ಸಮಗ್ರ ಚಾಂಪಿಯನ್

Published On :

ತುಮಕೂರು: ಬೆಂಗಳೂರಿನ ರೇವಾ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ 27ನೇ ಸಿಎಸ್‌ಐ ಕರ್ನಾಟಕ ಸ್ಟೂಡೆಂಟ್ ಕವೆನಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗುಬ್ಬಿ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಬೆಂಗಳೂರು ವಿಭಾಗದಿಂದ 96 ತಾಂತ್ರಿಕ ಕಾಲೇಜಿನ ತಂಡಗಳು ಭಾಗವಹಿಸಿದ್ದು ಕಾಲೇಜಿನ 6 ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಸಿ.ಶರತ್ ಯಾದವ್ ಹಾಗೂ ಎಂ ಉದಯಪ್ರಸಾದ್ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ದಾವಣಗೆರೆ ಜಿಎಮ್‌ಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ತಾಂತ್ರಿಕ ಹಬ್ಬದಲ್ಲಿ ಏರ್ಪಡಿಸಲಾದ ಡೆಲ್ಟಾ-13.ಸ್ಪರ್ಧೆಯಲ್ಲಿ ಸಿ.ಐ.ಟಿ ಕಾಲೇಜಿನ ಸಿ.ಶರತ್ ಯಾದವ್, ಎಂ. ಉದಯಪ್ರಸಾದ್, ಸಂಜಯ್ ಜಿ. ಪ್ರಕಾಶ್, ಆರ್.ರಮೇಶಯ್ಯ, ಡಿ.ರೀತೀಶ್, ಜಿ.ಸಿ. ಸಚಿನ್ ಮತ್ತು ಡಿ.ಎಲ್. ಸುಭಾಷ್ ಮತ್ತಿತರರು ಭಾಗವಹಿಸಿದ್ದು, ಸಿ. ಶರತ್ ಯಾದವ್ ಡಾರ್ಕ್ ಕೋಡಿಂಗ್ ಪ್ರಬಂಧಕ್ಕೆ ವಿಶೇಷ ಪ್ರಶಸ್ತಿ, ಉದಯ ಪ್ರಸಾದ್ ಜೊತೆಗೂಡಿ ನೈಟ್ ಔಟ್ ಕೋಡಿಂಗ್ ಮತ್ತು ಕೋಡ್ ಇನ್ ಸ್ಟಾಂಟಮಿಕ್ ಪ್ರಬಂಧಕ್ಕಾಗಿ ಕ್ರಮವಾಗಿ ಪ್ರಥಮ ಮತ್ತು ದ್ವೀತಿಯ ಬಹುಮಾನ ಲಭಿಸಿದೆ.
ಒಟ್ಟಾರೆ ಕಾಲೇಜಿನ ತಂಡಕ್ಕೆ  ಕಾಲೇಜ್ ಟೀಮ್ ಚಾಂಪಿಯನ್‌ಶಿಪ್ ಆಫ್ ಡೆಲ್ಟಾ 13 ಲಭಿಸಿದೆ.
ಗುಬ್ಬಿ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ ಆಡಳಿತ ಮಂಡಳಿಯ ಪರವಾಗಿ ಸಂಸ್ಥೆ  ಅಧ್ಯಕ್ಷ ಜಿ.ಎಸ್.ಬಸವರಾಜು  ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯದರ್ಶಿ ಜ್ಯೋತಿಗಣೇಶ್ ಹಾಗೂ ನಿರ್ದೇಶಕರಾದ ಡಾ.ಡಿ. ಎಸ್.ಸುರೇಶ್‌ಕುಮಾರ್ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.