ಜೆಡಿಎಸ್ ತೊರೆದು ಕೆಜೆಪಿ, ಬಿಜೆಪಿಗೆ ಸೇರ್ಪಡೆ
ತುರುವೇಕೆರೆ: ತಾಲೂಕಿನಲ್ಲಿ ದಿನೇ ದಿನೇ ರಾಜಕೀಯ ಪಕ್ಷದಿಂದ ಮತ್ತೊಂದು ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಕಾಯಕ ನಡೆಯುತ್ತಲೇ ಇದೆ. ಬಿಟ್ಟ ಪಕ್ಷವನ್ನು ಹಾಗೂ ಆ ಪಕ್ಷದ ನಾಯಕರನ್ನು ತೆಗಳುವ, ಸೇರ್ಪಡೆಗೊಂಡ ಪಕ್ಷವನ್ನು ಹಾಗೂ ಆ ಪಕ್ಷದ ನಾಯಕರನ್ನು ಹೊಗಳುವ ಪರಿಪಾಠ ಮುಂದುವರೆದಿದೆ. ಈಗ ಜೆಡಿಎಸ್ನಿಂದ ಹೊರಬಂದ ಹಲವಾರು ಕಾರ್ಯಕರ್ತರು ಬಿಜೆಪಿ ಹಾಗೂ ಕೆಜೆಪಿಗೆ ಸೇರ್ಪಡೆಯಾಗಿದ್ದಾರೆ.
ಸ್ವಾಭಿಮಾನಕ್ಕೆ ಧಕ್ಕೆ: ತಾವು ಕಳೆದ ಏಳೆಂಟು ವರ್ಷಗಳ ಕಾಲದಿಂದ ಜೆಡಿಎಸ್ನಲ್ಲಿದ್ದರೂ ಹಾಲಿ ಶಾಸಕರು ಎಂದು ನಮಗೆ ಗೌರವ ನೀಡಲೇ ಇಲ್ಲ. ತಮ್ಮ ಕೆಲಸ ಕಾರ್ಯಕ್ಕಾಗಿ ಮಾತ್ರ ನಮ್ಮನ್ನು ದುಡಿಸಿಕೊಳ್ಳುತ್ತಿದ್ದರು. ಅವರ ಹಿಂದಿರುವ ಐದಾರು ಮಂದಿಯ ಮಾತೇ ಅವರಿಗೆ ಹಿಚವಚನವಾಗುತ್ತಿತ್ತು. ಅತ್ಯಂತ ಹಿಂದುಳಿದ ಜನಾಂಗದ ಪ್ರತಿನಿಧಿಯಾದ ತಮ್ಮನ್ನು ನಿರ್ಲಕ್ಷ ಮಾಡಿದ್ದರಿಂದ ತಾವು ಅನಿವಾರ್ಯವಾಗಿ ಜೆಡಿಎಸ್ಗೆ ಗುಡ್ ಬೈ ಹೇಳಿ ಕೆಜೆಪಿ ಸೇರ್ಪಡೆಯಾಗುತ್ತಿರುವುದಾಗಿ ತಾಲೂಕು ಜೆಡಿಎಸ್ನ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಬುಗುಡನಹಳ್ಳಿ ಕೃಷ್ಣಮೂರ್ತಿ ಪ್ರಕಟಿಸಿದರು. ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಅವರ ಸಮ್ಮುಖ ಪಕ್ಷಕ್ಕೆ ಸೇರ್ಪಡೆಯಾದ ಅವರು ತಾವು ಪಕ್ಷವನ್ನು ತ್ಯಜಿಸಿರುವುದರಿಂದ ಶಾಸಕ ಎಂ.ಟಿ.ಕೃಷ್ಣಪ್ಪನವರು ಯಾವುದೋ ಹಣದ ಆಮಿಷಕ್ಕೆ ಒಳಗಾಗಿ ಪಕ್ಷವನ್ನು ತ್ಯಜಿಸಿದ್ದಾನೆ ಎಂದು ಅಪಪ್ರಚಾರ ಮಾಡುತ್ತಾರೆ. ಆದರೆ ತಾವು ಶಾಸಕರ ದರ್ಪ ಮನೋಭಾವವನ್ನು ಧಿಕ್ಕರಿಸಿ ಜೆಡಿಎಸ್ಗೆ ವಿದಾಯ ಹೇಳುತ್ತಿರುವುದಾಗಿ ಸ್ಪಷ್ಠಪಡಿಸಿದರು. ಪ್ರತಿಯೊಬ್ಬ ಕಾರ್ಯಕರ್ತರನ್ನು ಉದಾಸೀನವಾಗಿ ನೋಡುವ ಶಾಸಕರಿಗೆ ಈಗ ಕಾರ್ಯಕರ್ತರ ಬೆಲೆ ಏನೆಂದು ಗೊತ್ತಾಗುತ್ತಿದೆ ಎಂದು ಬುಗುಡನಹಳ್ಳಿ ಕೃಷ್ಣಮೂರ್ತಿ ಹೇಳಿದರು. ತಮ್ಮೊಂದಿಗೆ ನೂರಾರು ಜೆಡಿಎಸ್ ಕಾರ್ಯಕರ್ತರು ಕೆಜಿಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.
ಕೆಜಿಪಿ ಮುಖಂಡ ಎಂ.ಡಿ.ಮೂರ್ತಿ, ಜಿಲ್ಲಾ ಉಪಾಧ್ಕ್ಷಕ್ಷ ಕೆಂಪೇಗೌಡ, ವಿದ್ಯಾರಣ್ಯ ರಂಗಸ್ವಾಮಿ, ಕೆಜೆಪಿ ವಕ್ತಾರ ವಕೀಲ ಮುದ್ದೇಗೌಡ ಮೊದಲಾದವರು ಕೆಜೆಪಿಗೆ ಸೇರ್ಪಡೆಯಾದ ಮುಖಂಡರನ್ನು ಬರಮಾಡಿಕೊಂಡರು.
ಬಿಜೆಪಿಗೆ ಸೇರ್ಪಡೆ: ಬಿಜೆಪಿ ಅಭ್ಯರ್ಥಿಯಾಗಿರುವ ಜೆಡಿಎಸ್ನ ಮುಖಂಡರಾಗಿದ್ದ ಬಿ.ಕೆ.ಸೋಮಣ್ಣನವರ ಬೆಂಬಲಿಗರಾಗಿದ್ದ ನೂರಾರು ಮಂದಿ ಜೆಡಿಎಸ್ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಗಳೂರಿನ ಗೋವಿಂದಯ್ಯ, ನರಸಿಂಹ, ತಮ್ಮಯ್ಯ, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜುಂಜಯ್ಯ, ಬಸವರಾಜು, ಆನಡಗು ಗ್ರಾಮದ ಕೆಂಪೇಗೌಡರು, ಬೆಂಕಿಕೆರೆ ನಿವೃತ್ತ ಎಂಜಿನಿಯರ್ ಕೇಂಪೇಗೌಡ, ಕೋಳಾಲದ ಗುರುಸಿದ್ದಪ್ಪ, ಶಂಕರೇಗೌಡರ ವಂಶಸ್ಥರು, ತಂಡಗದ ಗಂಗಾಧರ್ ಕಣತೂರಿನ ನಾಗಣ್ಣ ಹೀಗೆ ಹಲವಾರು ಮಂದಿ ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿಯ ಅಭ್ಯರ್ಥಿ ಬಿ.ಕೆ.ಸೋಮಣ್ಣ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶಾಸಕರ ದುರ್ವತೆನೆಗೆ ಬೇಸತ್ತಿರುವ ಕ್ಷೇತ್ರದ ಜನರು ಬದಲಾವಣೆಯನ್ನು ಬಯಸಿದ್ದಾರೆ. ತಾವು ಅವರ ಹಾಗೂ ಪಕ್ಷದ ಏಳ್ಗೆಗಾಗಿ ದುಡಿದ ಪರಿಣಾಮ 20 ದಿನಗಳ ಸೆರೆ ಮನೆ ವಾಸ ಅನುಭವಿಸಿದ್ದಾಗಿತ್ತು. ಇದರಿಂದ ಕ್ರೋಧಗೊಂಡ ತಮ್ಮ ಬೆಂಬಲಿಗರೆಲ್ಲರೂ ತಮಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಬಿಜೆಪಿ ಸೇರಿದ್ದಾರೆ ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಎಸ್. ಬೋರೇಗೌಡ, ಕಾರ್ಯದರ್ಶಿ ಮೃತ್ಯುಂಜಯ, ಶಿವಸ್ವಾಮಿ ಮೊದಲಾವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಬಿಜೆಪಿ ಅಭ್ಯರ್ಥಿ ಬಿ.ಕೆ.ಸೋಮಣ್ಣ ತಾಲೂಕು ಅಧ್ಯಕ್ಷ ಟಿ.ಎಸ್. ಬೋರೇಗೌಡರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

