ಕೈ ಕೊಟ್ಟ ಸುರೇಶ್‌ಗೌಡರನ್ನು ಮನೆಗೆ ಕಳುಹಿಸಿ: ಬಿಎಸ್‌ವೈ
ತುಮಕೂರು: ತಮಗೆ ಕೈ ಕೊಟ್ಟ ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡರನ್ನು ಮನೆಗೆ ಕಳುಹಿಸುವಂತೆ, ಕೆಜೆಪಿ ಅಭ್ಯರ್ಥಿ ಎಚ್.ನಿಂಗಪ್ಪನವರನ್ನು ಗೆಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತುಮಕೂರು ಗ್ರಾಮಾಂತರದ ಬೆಳ್ಳಾವಿ ಹೋಬಳಿ ಮತದಾರರಿಗೆ ಕರೆ ನೀಡಿದರು.
ಅವರು ತುಮಕೂರು ಗ್ರಾಮಾಂತರದ ಕೆಜೆಪಿ ಅಭ್ಯರ್ಥಿ ಎಚ್. ನಿಂಗಪ್ಪನವರ ಪರ ಬೆಳ್ಳಾವಿಯಲ್ಲಿ ಚುನಾವಣಾ ಪ್ರಚಾರ ಮಾಡಿದರು. ಎಲ್ಲರಿಗಿಂತ ಮುಂಚೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ, ರಾಜ್ಯದ ಜನತೆಗೆ ಅನೇಕ ಭರವಸೆಗಳನ್ನು ನೀಡಲಾಗಿದೆ. ರೈತರ ಸುಮಾರು 6 ರಿಂದ 7 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಲಾಗುವುದು. 65 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಪಿಂಚಣಿ, ಎಲ್ಲ ವರ್ಗದ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ, ಕೆರೆಗಳಿಗೆ ನೀರು ಸೇರಿದಂತೆ ಇತರೆ ಭರವಸೆಗಳನ್ನು ನೀಡಲಾಗಿದ್ದು, ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈಡೇರಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ರೈತರ ಬದುಕಿಗೆ ಬೆಂಕಿ ಇಟ್ಟಿದೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ರಸಗೊಬ್ಬರ ಸಬ್ಸಿಡಿ ನಿರಂತರವಾಗಿ ನೀಡಬೇಕು. ನಿರಂತರ ವಿದ್ಯುತ್ ನೀಡಬೇಕು. ಆದರೆ ಇದಾವುದಕ್ಕೂ ಕೇಂದ್ರ ಸರ್ಕಾರ ಗಮನಹರಿಸಿಲ್ಲ ಎಂದು ಹರಿಹಾಯ್ದರು.
ವಿದ್ಯುತ್ ಉತ್ಪಾದನೆಗೆ ಕಲ್ಲು: ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಛತ್ತೀಸ್‌ಘಡದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು 1400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಜಾಗ ಖರೀದಿಸಿದೆ. ಆದರೆ ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಕೆ ಮಾಡದೆ ದ್ರೋಹವೆಸಗಿತು ಎಂದು ಕಿಡಿಕಾರಿದರು.
ತಮ್ಮ ರಾಜಕೀಯ ಲೆಕ್ಕಾಚಾರ ಈವರೆವಿಗೆ ತಪ್ಪಾಗಿಲ್ಲ. ಮೇ 8 ರ ನಂತರ ರಾಜ್ಯದ ರಾಜಕೀಯ ಚಿತ್ರಣ ಬದಲಾಗಲಿದೆ. ಬೆಳ್ಳಾವಿಯ ಮೋಟಾರ್ ಬೈಕ್ ರ್ಯಾಲಿ, ಮೇ 8 ರಂದು ಕೆಜೆಪಿ ವಿಜಯಿ ಅಭ್ಯರ್ಥಿಗಳೊಂದಿಗೆ ಬೆಂಗಳೂರಿನತ್ತ ಧಾವಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೇವಲ 8 ಗಂಟೆ ಕೆಲಸ ಮಾಡಿದರೂ ಸಾಕು. ಈ ಹಿನ್ನೆಲೆಯಲ್ಲಿ ತಾವೀಗಾಗಲೇ ಬೆಳಗ್ಗೆ 7 ರಿಂದ ರಾತ್ರಿ 12 ರವರೆಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಕಾರ್ಯಕರ್ತರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

