ತುಮಕೂರು

ಕ್ಷೇತ್ರದ ಅಭಿವೃದ್ಧಿ ಏನೆಂದು ತೋರಿಸಿದ್ದೇನೆ

Published On :

ಕ.ಪ್ರ. ವಾರ್ತೆ  ,   ಕುಣಿಗಲ್  ,   ಏ.27
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ನೀರಾವರಿ, ಶೈಕ್ಷಣಿಕ ರಂಗ ಸೇರಿದಂತೆ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ  ರಾಜಕಾರಣ ಏನೆಂದು ಮಾಡಿ ತೋರಿಸಿದ್ದೇನೆ. ವಿರೋಧಪಕ್ಷದವರು ವಿನಾಕಾರಣ ಸುಳ್ಳು ಹೇಳುತ್ತಾ ಪ್ರಜ್ಞಾವಂತ ಮತದಾರರ ದಿಕ್ಕುತಪ್ಪಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್  ಅಭ್ಯರ್ಥಿ, ಶಾಸಕ ಬಿ.ಬಿ. ರಾಮಸ್ವಾಮಿಗೌಡ ತಿಳಿಸಿದರು.
 ಶನಿವಾರ, ಕೊತ್ತಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದ ನಂತರ, ಮಾತನಾಡಿ, ತಾವು ಶಾಸಕರಾಗಿ ಆಯ್ಕೆಯಾದಂತಹ ಸಂದರ್ಭದಲ್ಲಿ ಹೇಮಾವತಿ ನಾಲಾ ವಲಯದ ಮೂಲ ಯೋಜನೆಯಂತೆ ಹುಲಿಯೂರುದುರ್ಗ ಕಡೆಗೆ ಹೇಮಾವತಿ ನಾಲಾ ಕಾಮಗಾರಿ ಕೈಗೊಳ್ಳಲು ಬಿದನಗೆರೆ ಬಳಿ ಜಮೀನು ಸ್ವಾಧೀನ ವಿಷಯ 19 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.
ನಾಲಾ ವಲಯದ ಅಧಿಕಾರಿಗಳ ಮೇಲೆ ಸತತ ಒತ್ತಡಹೇರಿದ ಪರಿಣಾಮ ಇಂದು ಭೂ ಸ್ವಾಧೀನ ಕಾರ್ಯ ಮುಗಿದು ನಾಲಾ ಕಾಮಗಾರಿ ಪ್ರಗತಿಯಲ್ಲಿದೆ.
ಮನಬಂದಂತೆ ಹೇಳಿಕೆ: ಪ್ರಕೃತಿ ಅಸಹಕಾರದಿಂದ ಸಮರ್ಪಕ ಮಳೆಯಾಗದೆ, ಈ ಭಾಗಕ್ಕೆ ಹೇಮಾವತಿ ನೀರು ಹರಿಸಲಾಗಿಲ್ಲ. ಈ ಬಾರಿ ಸೂಕ್ತ ಮಳೆಯಾದಲ್ಲಿ, ಬೇಗೂರು, ಯಲಿಯೂರು, ಸೇರಿದಂತೆ ಕಸಬಾ ಹೋಬಳಿಯ ಪ್ರಮುಖ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಶ್ರಮಿಸಲಾಗುವುದೆಂದ ಅವರು, ಇದೇ ಕಾರ್ಯವನ್ನು ಜೆಡಿಎಸ್ ಶಾಸಕರ ಅಧಿಕಾರವಧಿಯಲ್ಲಿ ಅನುಷ್ಠಾನಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದರು. ಯಡೆಯೂರು ದೇವಾಲಯ ಖಾಸಗಿಯವರಿಗೆ ಪರಭಾರೆ ಮಾಡಲು ಅನುಮೋದಿಸಿ ಜೆಡಿಎಸ್ ಶಾಸಕರು ಸಹಿ ಮಾಡಿದ್ದು, ಇದರಿಂದ ಭಕ್ತರ ಭಾವನಗಳಿಗೆ ತೊಂದರೆಯಾಗುವುದನ್ನು ಪರಿಗಣಿಸಿ, ಹೋರಾಟ ಮಾಡಿ ಸರ್ಕಾರದ ವಶದಲ್ಲೆ ಉಳಿಸಿದ್ದು, ಮಿನಿವಿಧಾನಸೌಧ ನಿರ್ಮಾಣ ಕಾಮಗಾರಿ ಬಗ್ಗೆ, ಮಾರ್ಕೋನಹಳ್ಳಿ ಜಲಾಶಯ ತುಂಬಿದ ನಂತರ ಹೆಚ್ಚುವರಿ ನೀರನ್ನು ಮಂಗಳಾ ಜಲಾಶಯಕ್ಕೆ ಹರಿಸುವ ನಾಲಾ ಕಾಮಗಾರಿ ಸೇರಿದಂತೆ ಕ್ಷೇತ್ರದ ನೀರಾವರಿ ಕಾಮಗಾರಿ ಅನುಷ್ಠಾನಕ್ಕೆ ಮನಸ್ಸು ಮಾಡದ ಜೆಡಿಎಸ್, ಬಿಜೆಪಿ ಪಕ್ಷದವರು, ತಾಲೂಕಿನಲ್ಲಿ ಕಾಂಗ್ರೆಸ್ ಪರ ಅಲೆಯನ್ನು ಸಹಿಸಲಾಗದೆ, ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದರು.
 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಮುಖಂಡರಾದ ಮುಮ್ತಾಜ್ ಅಹಮದ್, ಅಶ್ವತ್ಥಮ್ಮ, ಗಿರೀಶ್, ಶಿವರಾಮಯ್ಯ, ಬಿ.ಡಿ.ಕುಮಾರ್, ಶ್ರೀನಿವಾಸ್,ಮಂಜು,ಇಂದುಮತಿ ಸೇರಿದಂತೆ ಇತರರು ಉಪಸ್ಥಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.